ಚಳ್ಳಕೆರೆ : ಗ್ಯಾರಂಟಿ ಯೋಜನೆಗಳಿಂದ ಜನರ ಜೀವನ ಅಸನಾಗಿದೆ , ಬಡಜನರಿಗೆ ಸುಮಾರು ಐದು ಗ್ಯಾರಂಟಿ ಯೋಜನೆಗಳನ್ನು ಅಧಿಕಾರಿಗಳು ಸಮಪರ್ಕವಾಗಿ ಜಾರಿಗೆ ತರಬೇಕು ಎಂದು ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಹೇಳಿದರು.

ಅವರು ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಅಧಿಕಾರಿಗಳು, ಹಾಗೂ ಸರ್ವ ಸದಸ್ಯರೊಟ್ಟಿಗೆ ಆಯೋಜಿಸಿದ್ದ ಅಧಿಕಾರಿಗಳ ಪರೀಸಿಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕಿನಲ್ಲಿ ಸರ್ಕಾರ ತಂದ ಐದು ಗ್ಯಾರಂಟಿ ಯೋಜನೆಗಳು ಗೃಹ ಲಕ್ಷ್ಮಿ ಯೋಜನೆ, ಗೃಹ ಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆ, ಈಗೇ ತಾಲೂಕಿನಲ್ಲಿ ಬಡ ಜನರಿಗೆ ಅರ್ಹ ಎಲ್ಲಾ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಅಧಿಕಾರಿಗಳದ್ದು, ಆದ್ದರಿಂದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆ ಸಪಾಲ್ಯವಾಗುವಂತೆ ಮಾಡಬೇಕು ಎಂದರು.

ಇದೇ ಸಂಧರ್ಭದಲ್ಲಿ ಗ್ಯಾರಂಟಿ ಯೋಜನೆಯ ಸದಸ್ಯಗುಜ್ಜಾರಪ್ಪ, ಆಂಜನೇಯ, ನಾಗೇಶ, ಬಸಪ್ಪ, ತಿಪ್ಪೇಸ್ವಾಮಿ ಹಾಗೂ ಇಓ.ಶಶಿಧರ್ ಸಿಡಿಪಿಓ ರಾಜುನಾಯ್ಕ್, ಆಹಾರ ಶಿರಸ್ತೆದಾರ್ ಶ್ರೀನಿವಾಸ್, ಬೆಸ್ಕಾಂ ಅಧಿಕಾರಿ ದೇವರಾಜ್ ಇತರರು ಇದ್ದರು.

About The Author

Namma Challakere Local News
error: Content is protected !!