ಚಳ್ಳಕೆರೆ : ಹೊಳಲ್ಕೆರೆ: ಗುಡಿಸಲುಗಳಿಗೆ ನುಗ್ಗಿದ ನೀರು, ಇವರ
ಗೋಳು ಕೇಳೋರಿಲ್ಲ
ಶುಕ್ರವಾರ ರಾತ್ರಿ ಹೊಳಲ್ಕೆರೆ ಚಿಕ್ಕಜಾಜೂರು ಗ್ರಾಮದಲ್ಲಿ ಸುರಿದ
ಭಾರೀ ಮಳೆಗೆ ಗುಡಿಸಲು ಮನೆಗಳಿಗೆ ನೀರು ನುಗ್ಗಿ ಜನತೆ ತೀವ್ರ
ತೊಂದರೆ ಅನುಭವಿಸಿದ್ದಾರೆ.
ಈ ಹಿಂದೆ ಬೆಂಕಿ ಅವಘಡದಿಂದ
ಸುಟ್ಟುಹೋಗಿದ್ದ ಈ ಮನೆಗಳಿಗೆ ಶಾಸಕ ಎಂ. ಚಂದ್ರಪ್ಪ ಅವರು
ಸೂರು ಕಲ್ಪಿಸುವುದಾಗಿ ಭರವಸೆ ನೀಡಿದ್ದರೂ, ಇದುವರೆಗೂ
ಯಾವುದೇ ಕ್ರಮ ಕೈಗೊಂಡಿಲ್ಲ.
ಅಧಿಕಾರಿಗಳು ಹಾಗೂ
ಜನಪ್ರತಿನಿಧಿಗಳು ಮನೆ ಕಟ್ಟಿಕೊಳ್ಳಲು ಜಾಗ ನೀಡುತ್ತಿಲ್ಲ ಎಂದು
ಸ್ಥಳೀಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.

