ಚಳ್ಳಕೆರೆ : ಚಳ್ಳಕೆರೆ: ಅವಾಂತರ ಸೃಷ್ಟಿಸಿದ ಮಳೆ
ಶುಕ್ರವಾರ ರಾತ್ರಿ ಚಳ್ಳಕೆರೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ
ನಗರದಲ್ಲಿ ಅವಾಂತರ ಸೃಷ್ಟಿಯಾಗಿದೆ. ಗಾಂಧಿನಗರದಲ್ಲಿ ಬೃಹತ್
ಮರ ಮುರಿದು ಬಿದ್ದಿದ್ದು, 2 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ವಾಲ್ಮೀಕಿ ವೃತ್ತದ ಬಳಿ ಪಿಡಬ್ಲ್ಯೂಡಿ ಕ್ವಾರ್ಟಸ್್ರ ಮೇಲೆ ಮರ
ಬಿದ್ದರೂ, ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ವಾಲ್ಮೀಕಿ ನಗರದಲ್ಲಿ ವಿದ್ಯುತ್ ಪರಿವರ್ತಕಕ್ಕೆ ಹಾನಿಯಾಗಿದ್ದು,
ಕಾಟಪ್ಪನಹಟ್ಟಿಯಲ್ಲಿ ವಿದ್ಯುತ್ ಕಂಬಗಳು ಬಿದ್ದಿವೆ. ರಹೀಂ
ನಗರದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ.

About The Author

Namma Challakere Local News
error: Content is protected !!