ಕಲಬುರಗಿ: ತಂಗಿಯನ್ನೇ ಜೀವಂತ ಸುಟ್ಟು ಹಾಕಿದ್ದ
ಇಬ್ಬರು ಸಹೋದರರಿಗೆ ಮರಣ ದಂಡನೆ
ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ ಎನ್ನುವ
ಕಾರಣಕ್ಕೆ ತಮ್ಮ ತಂಗಿಯನ್ನೇ ಬೆಂಕಿ ಹಚ್ಚಿ ಜೀವಂತ ಸುಟ್ಟು ಹಾಕಿದ್ದ
ಸಹೋದರರಿಗೆ ಕಲಬುರಗಿ ಹೈಕೋರ್ಟ್ ದ್ವಿ ಸದಸ್ಯಪೀಠದಿಂದ
ಐತಿಹಾಸಿಕ ತೀರ್ಪು ಒಂದನ್ನು ನೀಡಿದೆ. ಇಬ್ಬರು ಸಹೋದರರಿಗೆ
ಮರಣ ದಂಡನೆ ಶಿಕ್ಷೆ ಮತ್ತು ಅದೇ ಕುಟುಂಬದ ಇನ್ನೂ ಐವರಿಗೆ
ಜೀವಾವಧಿ ಶಿಕ್ಷೆ ನೀಡಿದೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ
ತಾಲೂಕಿನ ಗುಂಡಕನಲ್ ಗ್ರಾಮದ ಇಬ್ರಾಹಿಂ ಸಾಬ್ (31) ಹಾಗೂ
ಈತನ ಸಹೋದರ ಲಾರಿ ಚಾಲಕ ಅಕ್ಟರ್ (28) ಮರಣ ದಂಡನೆ
ಶಿಕ್ಷೆಗೋಳಗದವರು. ಸೈಬಣ್ಣ ಎನ್ನುವ ದಲಿತ ಯುವಕನ ಜೊತೆ
ಬಾನು ಬೇಗಂ ಪ್ರೀತಿಸಿ ಮದುವೆಯಾಗಿದ್ದಳು. ಬಾನು ಬೇಗಂ
ಒಂಬತ್ತು ತಿಂಗಳ ತುಂಬು ಗರ್ಭಿಣಿ ಯಾಗಿದ್ದ ಸಂರ್ಭದಲ್ಲಿ ಆಕೆಯ
ಸಹೋದರರೇ ಬೆಂಕಿ ಹಚ್ಚಿ ಸಜೀವವಾಗಿ ಕೊಂದು ಹಾಕಿದ್ದರು.
2017 ರಲ್ಲಿ ನಡೆದ ಕೊಲೆ ಪ್ರಕರಣದ ಬಗ್ಗೆ ಬಸವನಬಾಗೇವಾಡಿ
ಪೊಲೀಸರು ತನಿಖೆ ನಡೆಸಿ ಚಾರ್ಜ್ಶಿಟ್ ಸಲ್ಲಿಸಿದರು

