ಚಳ್ಳಕೆರೆ : ಹಿರಿಯೂರು: ಮಳೆಗಾಗಿ ಕತ್ತೆ ಪೂಜೆ
ಒಂದೂವರೆ ತಿಂಗಳಿನಿಂದ ಮಳೆಯಾಗದೆ ಆತಂಕಕ್ಕೊಳಗಾಗಿರುವ
ಹಿರಿಯೂರು ತಾಲೂಕಿನ ಹಲುಗಲ ಕುಂಟೆ ಗ್ರಾಮಸ್ಥರು, ಹಿರಿಯರ
ಸಲಹೆಯಂತೆ ಮಳೆಗಾಗಿ ಕತ್ತೆಯನ್ನು ಪೂಜಿಸಿ ಮೆರವಣಿಗೆ
ನಡೆಸಿದ್ದಾರೆ.

ಗ್ರಾಮದ ಎಲ್ಲಾ ದೇವರುಗಳಿಗೆ ಪೂಜೆ ಸಲ್ಲಿಸಿ,
ಕತ್ತೆಯನ್ನು ಪೂಜಿಸಿ ಮೆರವಣಿಗೆ ಮಾಡಲಾಗಿದೆ. ವಿದ್ಯಾವಂತರು
ಇದನ್ನು ಮೂಢನಂಬಿಕೆ ಎನ್ನಬಹುದು, ಆದರೆ ಮಳೆ ಬರಲಿ ಎಂಬ
ನಂಬಿಕೆಯಿಂದ ಈ ಪೂಜೆ ಮಾಡಲಾಗಿದೆ ಎಂದು ರೈತ ಹೆಚ್ಚ
ರಂಗಸ್ವಾಮಿ ತಿಳಿಸಿದ್ದಾರೆ.

About The Author

Namma Challakere Local News
error: Content is protected !!