ಚಳ್ಳಕೆರೆ : ತಾಲ್ಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಕ್ರೀಡಾಪಟುಗಳಿಗೆ ಇಲ್ಲ ರಕ್ಷಣೆ.

ಹೌದು ಚಳ್ಳಕೆರೆ ತಾಲೂಕಿನ ಸರಕಾರಿ ಹಾಗೂ ಅನುದಾನಿತ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾ ಕೂಟಕ್ಕೆ ಭಾಗವಹಿಸಿದ ಮಕ್ಕಳು ಪಾಡು ಹೇಳತೀರಾಗಿತ್ತು.

ಇನ್ನೂ ದಸರಾ ರಜೆಯಲ್ಲಿ ಇದ್ದ ಮಕ್ಕಳನ್ನು ಯಾವುದೇ ತಯಾರಿ‌ ಇಲ್ಲದೆ ನಿಯಮಗಳನ್ನು ಗಾಳಿಗೆ ತೂರಿ ಮನಸೊಚ್ಚಿ ತಾಲೂಕು ಮಟ್ಟದ ಕ್ರೀಡಾ ಕೂಟಕ್ಕೆ ಆಯೋಜಿಸಿದ್ದ ಆಯೋಜಕರ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ಮುಂಜಾನೆಯ ಉರಿ‌ಬಿಸಿಲಿನಲ್ಲಿ ಗೂಡ್ಸ್ ವಾಹನಗಳಲ್ಲಿ ಬಂದ ಮಕ್ಕಳಿಗೆ ಕುಡಿಯುವ ನೀರು ಕೊಡದೆ ಉರಿ ಬಿಸಿಲಿನಲ್ಲಿ ನಿಲ್ಲಿಸಿರುವ ಆಯೋಜಕರ ವಿರುದ್ಧ ಶಿಕ್ಷಕರು ಕೂಡ ಮೌನ ಮುರಿದಿದ್ದಾರೆ.

ಇನ್ನೂ ಸ್ಥಳದಲ್ಲಿ ಕ್ರೀಡಾ ಕೂಟಕ್ಕೆ ಭಾಗವಹಿಸಿದ ಮಕ್ಕಳು ಆರೋಗ್ಯ ಇತದೃಷ್ಠಿಯಿಂದ ಪ್ರಾಥಮಿಕ ಆರೋಗ್ಯ ಕಿಟ್, ಹಾಗೂ ಅಂಬ್ಯೂಲೆನ್ಸ್ ಸೇವೆ ಸ್ಥಳದಲ್ಲಿ ಇಲ್ಲದೆ ಇರುವುದು ಕಂಡು ಬಂದಿದೆ.

ಈಗೇ ಸಾಲು ಸಾಲು ಆರೋಪಗಳ ಮಧ್ಯೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಹಾಗೂ ನಗರಸಭೆಯ ಸದಸ್ಯರು ಕ್ರೀಡಾ ಕೂಟಕ್ಕೆ ಚಾಲನೆ ನೀಡಿದ್ದರು, ಅವರ ಕಣ್ಣಿಗೆ ಕ್ರೀಡಾ ಪಟುಗಳ ರಕ್ಷಣೆಗೆ ಹಾಗೂ ಕುಡಿಯುವ ನೀರಿನ ಬಗ್ಗೆ ಯಾವುದೇ ಸದಸ್ಯರು ಧ್ವನಿ ಎತ್ತಲಿಲ್ಲ.

ಈಗೇ ಆಯೋಜಕರ ಎಡವಟ್ಟಿನಿಂದ ಮಕ್ಕಳಿಗೆ ಕುತ್ತು ತರಬಹುದು ಎನ್ನುವುದು ಪೋಷಕರ ಆತಂಕವಾಗಿದೆ.

About The Author

Namma Challakere Local News
error: Content is protected !!