ನಾಯಕನಹಟ್ಟಿ ಸಮೀಪದ ರೇಖಲಗೆರೆ ಗ್ರಾಮದಲ್ಲಿ
ಹಿಂದೂ ಮುಸ್ಲಿಂ ಸೌಹಾರ್ದತೆಯಿಂದ ಆಚರಿಸುವ ಹಜರತ್ ಮೆಹಬೂಬ್ ಸುಬಾನಿ ಜಂಡ ಕಟ್ಟೆ ರೇಖಲಗೆರೆ ಗ್ರಾಮದಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಹಜರತ್ ಮಹಬೂಬ್ ಸುಭಾನಿ ಕಮಿಟಿಯ ಹಬಿರ್ ಗುರೂಜಿ ಮಾತನಾಡಿದರು. ನೂರಾರು ವರ್ಷಗಳಿಂದ ಹಿಂದೂ ಮತ್ತು ಮುಸಲ್ಮಾನರು ಒಟ್ಟುಗೂಡಿ ಈ ವಿಶೇಷ ಹಬ್ಬವನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಮುಸಲ್ಮಾನರ ಪೈಕಿ ಊರಿಗೆ ಯಜಮಾನನ ಅಮೀರ್ ಸಾಬ್ ಮನೆಯಿಂದ ಗಂಧವನ್ನು ತಂದು ಮೆರವಣಿಗೆ ಮೂಲಕ ತಂದು ಗ್ರಾಮದ ಬಳಿ ಇರುವ ದೈವ ನೆಲೆಯ ಕಟ್ಟೆಯ ಮರಕ್ಕೆ ಬಾವುಟ ಕಟ್ಟಿ ಆರಿಸಲಾಗುವುದು ನಂತರ ಗ್ರಾಮಸ್ಥರು ಸಕ್ಕರೆ,ಉತ್ತುತ್ತಿ ಹಣ್ಣು ಸೇರಿದಂತೆ ಹಲವು ಬಗೆಯ ಫಲಹಾರ ತಂದು ನೈವೇದ್ಯವಾಗಿ ಅರ್ಪಿಸುತ್ತಾರೆ.

ಹಿಂದೂ ಮುಸಲ್ಮಾನರು ಯಾವುದೇ ಕಾರಣಕ್ಕೂ ಈ ದಿನದಿಂದ ನಮೂಜು ಆಗುವವರೆಗೂ ಊಟ ಮಾಡುವಂತಿಲ್ಲ ಹಲವು ಕಟ್ಟುಪಾಡುಗಳನ್ನು ಆಚರಿಸುವ ಮೂಲಕ ಈ ಹಬ್ಬವನ್ನು ಆಚರಣೆ ಮಾಡಲಾಗುವುದು.

ಅಮಾವಾಸ್ಯೆ ನಂತರದ 11 ದಿನಗಳ ನಂತರ ಈ ವಿಶೇಷ ಆಚರಣೆಯನ್ನು ಆಚರಿಸಲಾಗುವುದು, ಮೆರವಣಿಗೆ ಮೂಲಕ ಕರೆ ತಂದ ದೇವರನ್ನು ದೈವದ ನಂಬಿಕೆಯೆಂದು ತಿಳಿಯಲಾಗಿರುವ ಕಟ್ಟೆ ಮೇಲೆ ಪ್ರತಿಷ್ಠಾಪಿಸಿ ವಿವಿಧ ಪೂಜಾ ಧಾರ್ಮಿಕ ಪದ್ಧತಿಗಳನ್ನು ಹಿಂದೂ ಮತ್ತು ಮುಸಲ್ಮಾನರು ಒಟ್ಟುಗೂಡಿ ಆಚರಿಸುವರು, ಈ ಕಟ್ಟೆಯನ್ನು ಮಾಂಸ ತಿಂದು ಬಂದು ಮುಟ್ಟುವುದಾಗಲಿ ಮಾಡುವಂತಿಲ್ಲ ಅತ್ಯಂತ ಮಡಿವಂತಿಕೆ ಮತ್ತು ಪಾವಿತ್ರತೆಯಿಂದ ಇದ್ದವರು ಮಾತ್ರ ಈ ಕಟ್ಟೆಯನ್ನು ಮುಟ್ಟುತ್ತಾರೆ.

ದೈವಿಕ ಹಿನ್ನೆಲೆ ಹೊಂದಿರುವ ಈ ಕಟ್ಟೆಯ ಮೇಲೆ ಊರಿನಲ್ಲಿ ಕುಟುಂಬಗಳ ಸಮಸ್ಯೆ ಆದಲ್ಲಿ ಈ ಪಂಚಾಯಿತಿಯ ಮೇಲೆ ನ್ಯಾಯಯುತವಾಗಿ ತೀರ್ಮಾನ ಮಾಡಲಾಗುತ್ತದೆ. ಇಂತಹ ದೈವಿಕ ನೆಲೆಯುಳ್ಳ ಕಟ್ಟೆಯಲ್ಲಿ ಪ್ರತಿವರ್ಷ ಈ ವಿಶೇಷ ಹಬ್ಬ ಆಚರಣೆ ಮಾಡಲಾಗುತ್ತದೆ ಎಂದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ರೆಹಮಾನ್ ಖಾನ್ ಸಾಬ್,ಎಂ ಚಿನ್ನಯ್ಯ ರೇಖಲಗೆರೆ. ಗ್ರಾಮ ಪಂಚಾಯತಿ ಸದಸ್ಯ ಬಿ ವೀರೇಶ್, ಎಸ್ ತಿಪ್ಪಯ್ಯ. ಎ.ಟಿ ಅಶೋಕ್, ಜಿಲಾನ್ ಖಾನ್, ಜಿ.ಎಂ.ಬೋರಯ್ಯ, ಸೇರಿದಂತೆ ಸಮಸ್ತ ರೇಖಲಗೆರೆ ಗ್ರಾಮಸ್ಥರು ಇದ್ದರು.

About The Author

Namma Challakere Local News
error: Content is protected !!