ಚಳ್ಳಕೆರೆ ಟ: ಎಸ್ಟಿ ಪಟ್ಟಿಗೆ ಕುರುಬ ಸಮುದಾಯವನ್ನು ಸೇರ್ಪಡೆ ಮಾಡುವುದನ್ನು ಖಂಡಿಸಿ ಸರಕಾರದ ವಿರುದ್ಧ ನಾಯಕ ಸಮುದಾಯದ ಮುಖಂಡರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಚಳ್ಳಕೆರೆ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರಕಾರಕ್ಕೆ ಎಚ್ಚರಿಕೆ ನೀಡಿದ ಸಮುದಾಯದ ಮುಖಂಡರು, ನಗರದ ವಾಲ್ಮೀಕಿ ವೃತ್ತದಿಂದ ಅಂಬೇಡ್ಕರ್ ವೃತ್ತ ನೆಹರು ವೃತ್ತದಿಂದ ದಾವಿಸಿದ ಪ್ರತಿಭಟನಾಕಾರರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶಿಲ್ದಾರ್ ಗೆ ಮನವಿ ಸಲ್ಲಿಸಿದರು.

ಚಳ್ಳಕೆರೆ ನಗರದಲ್ಲಿ ನಾಯಕ ಜನಾಂಗವೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಈ ಕ್ಷೇತ್ರದಲ್ಲಿ ಎಸ್ಟಿ ಮೀಸಲು ಕ್ಷೇತ್ರವಾಗಿದೆ , ಸರಕಾರ ಈಗಿರುವ ಮೀಸಲಾತಿ ಯೊಳಗೆ ನಮ್ಮ ಹಕ್ಕನ್ನು ಕಿತ್ತು ಮತ್ತೊಂಬ್ಬರಿಗೆ ನೀಡಿವುದು ಖಂಡನೀಯ, ಆದ್ದರಿಂದ ಯಾವುದೇ ಜಾತಿಯನ್ನು ನಮ್ಮ ಜಾತಿಯೊಳಗೆ ಸೇರಿಸಬಾರದು ಎಂದು ಕಿಡಿಕಾರಿದ್ದಾರೆ.

ಇದೇ ಸಂಧರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ಮಂಜುನಾಥ್, ಎಲ್ ಐಸಿ ತಿಪ್ಪೇಸ್ವಾಮಿ, ಮದಕರಿ ನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಸಂದೀಪ್ ಸೂರ್ಯ, ಶ್ರೀನಿವಾಸ್, ರಮೇಶ್ ಗೌಡ, ಇತರ ಮಹಿಳೆಯರು ಇದ್ದರು.

About The Author

Namma Challakere Local News
error: Content is protected !!