: ಮೊಳಕಾಲ್ಕೂರು: ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ
ಪಿಎಸೈ
ಮೊಳಕಾಲ್ಕೂರಿನ ಖಾಸಗಿ ಬಸ್ ನಿಲ್ದಾಣದಲ್ಲಿ ಬೇಕಾಬಿಟ್ಟಿಯಾಗಿ
ವಾಹನಗಳನ್ನು ನಿಲ್ಲಿಸುತ್ತಿದ್ದ ವಾಹನ ಸವಾರರಿಗೆ ಪಿಎಸ್ಐ
ಮಹೇಶ್ ಲಕ್ಷಣ್ ಹೊಸಪೇಟ ಅವರು ಇಂದು ಬಿಸಿ ಮುಟ್ಟಿಸಿದ್ದಾರೆ.
ಬಸ್ ಓಡಾಡಲು ಜಾಗವಿಲ್ಲದಂತೆ ನೋ ಪಾರ್ಕಿಂಗ್ ಜಾಗದಲ್ಲಿ ಬೈಕ್
ಸವಾರರು ಸೇರಿ ಇತರೇ ವಾಹನಗಳನ್ನು ನಿಲ್ಲಿಸುತ್ತಿದ್ದರು. ನಿಲ್ಲಿಸಿದ್ದ
ವಾಹನಗಳನ್ನು ಟೈಗರ್ ತಂದು ತುಂಬಿಕೊಂಡು ಹೋಗಿದ್ದಾರೆ.
ಮುಂದೆ ನಿಲ್ಲಿಸಿದರೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

