ಚಳ್ಳಕೆರೆ : ಗೌರಸಮುದ್ರ ಮತ್ತು ಪೂಟ್ಲರಟ್ಟಿ ಮಧ್ಯದ 20 ವರ್ಷಗಳ ದಾರಿ ವಿವಾದಕ್ಕೆ ಇಂದು ಚಳ್ಳಕೆರೆ ತಹಸಿಲ್ದಾರ್ ಎನ್ ರಘುಮೂರ್ತಿ ತೆರೆ ಎಳೆದಿದ್ದಾರೆ
ತಾಲುಕಿನ ಗೌರಸಮುದ್ರ ಗ್ರಾಮದ ಸರ್ವೇ ನಂಬರ್ 66, 67, 41 , 40 ಮತ್ತು ಬಂಡೆ ತಿಮ್ಮಲಾಪುರ ಗ್ರಾಮದ ಸರ್ವೇ ನಂಬರ್ 58ಕ್ಕೆ ಸಂಬAಧಿಸಿದAತೆ ದಾರಿ ಹೋಗುತ್ತಿದ್ದು ಈ ದಾರಿಯನ್ನು ಕೆಲವು ಖಾತೆದಾರರು ಅಡ್ಡಗಟ್ಟಿ ವೃದ್ಧರು ಮತ್ತು ಮಕ್ಕಳು ಓಡಾಡಲು ತುಂಬಾ ಅನಾನುಕೂಲವಾಗಿದ್ದು ಕಳೆದ 20 ವರ್ಷಗಳಿಂದಲೂ ನಿರಂತರವಾಗಿ ತೊಂದರೆ ಅನುಭವಿಸುತ್ತಿದ್ದು ಪುತ್ಲಾರಟ್ಟಿ ಗ್ರಾಮದ ಸುಮಾರು 50 ಜನ ತಹಸಿಲ್ದಾರ್ ಕಚೇರಿಗೆ ಭೇಟಿ ನೀಡಿ ಸದರಿ ದಾರಿ ವಿವಾದವನ್ನು ಬಗೆಹರಿಸುವಂತೆ ಮನವಿ ಮಾಡಿದ್ದು
ಈ ಮನವಿಯನ್ನು ಪರಿಶೀಲಿಸಿದ ತಹಸಿಲ್ದಾರ್ ಎನ್ ರಘುಮೂರ್ತಿ ಇಂದು ಬೆಳ್ಳಂ ಬೆಳಗ್ಗೆ ವಿವಾದಿತ ಸ್ಥಳಕ್ಕೆ ಭೇಟಿ ನೀಡಿ ಸರ್ವಯರಿಂದ ಅಳತೆ ಮಾಡಿಸಿ ದಾರಿಗೆ ಅಡ್ಡಿಪಡಿಸಿದಂತ ವ್ಯಕ್ತಿಗಳನ್ನು ಕರೆಯಿಸಿ ಅವರನ್ನು ಮನವೊಲಿಸಿ ಜೆಸಿಬಿ ಇಂದ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದರು

ಸಾರ್ವಜನಿಕರು ಓಡಾಡುವ ರಸ್ತೆ ಮುಂತಾದ ಕೆಲಸ ಕಾರ್ಯಗಳಿಗೆ ಮುಂದೆ ಯಾರು ಕೂಡ ಅಡ್ಡಿಪಡಿಸ ಕೊಡದೆಂದು ನರೇಗಾ ಯೋಜನೆಯಡಿಯಲ್ಲಿ ಅಗತ್ಯವಿರುವ ಅನುದಾನವನ್ನು ಬಳಸಿಕೊಂಡು ಈ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರುಗಳು ಪಿಡಿಒಗಳಿಗೆ ತಾಕೀತು ಮಾಡಿದರು .
ಗೌರಸಮುದ್ರ ಪಂಚಾಯಿತಿಯ ಉಪಾಧ್ಯಕ್ಷ ರಾಜಣ್ಣ, ಪಂಚಾಯ್ತಿ ಸದಸ್ಯರಾದ ಓಬಣ್ಣ, ಸುಭಾಷಿಣಿ, ತಿಪ್ಪೇಸ್ವಾಮಿ, ರಾಜಶ್ವ ನಿರೀಕ್ಷಕರಾದ ಮಹಮ್ಮದ್ ರಫಿ, ತಾಲೂಕು ಸರ್ವೇ ಅಧಿಕಾರಿ ಪ್ರಸನ್ನ ಕುಮಾರ್, ನರೇಂದ್ರಬಾಬು, ಕೊರ್ಲಾಯ್ಯ ಹಾಜರಿದ್ದರು

Namma Challakere Local News
error: Content is protected !!