ಚಳ್ಳಕೆರೆ : ಅಧಿಕಾರಿಗಳು ವಿನಾ ಕಾರಣ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸಿ, ನಿಗಧಿತ ಕಾಲ ಮಿತಿಯೊಳಗೆ ತಮ್ಮ ಕೆಲಸ ಮಾಡದೆ ಅನ್ಯ ಕಾರಣಗಳನ್ನು ಹೊಂದಿದ್ದಾರೆ ನಮಗೆ ದೂರು ನೀಡಿ ಎಂದು ಜಿಲ್ಲಾ ಲೋಕಾಯುಕ್ತ ಪೊಲೀಸ್ ನಿರೀಕ್ಷಕಿ ಬಿ.ಕೆ.ಲತಾ ಹೇಳಿದ್ದಾರೆ.
ಅವರು ನಗರದ ತಾಲೂಕು ಕಛೇರಿಯಲ್ಲಿ ತಿಂಗಳಿಗೊಮ್ಮೆ ನಡೆಯುವ ಸಾಂಧರ್ಬಿಕ ಸಾರ್ವಜನಿಕರ ದೂರು ಸ್ವೀಕರ ಸಭೆಯಲ್ಲಿ ಮಾತನಾಡಿದರು, ಸಾರ್ವಜನಿಕರಿಗೆ ಸಕಾಲಕ್ಕೆ ಸರ್ಕಾರಿ ಸೇವೆಗಳನ್ನು ನೀಡದಿದ್ದರೆ ಕಡತಗಳನ್ನು ವಿಲೇವಾರಿ ಮಾಡದಿದ್ದರೆ ಲೋಕಾಯುಕ್ತದಿಂದ ಪ್ರಕರಣ ದಾಖಲಿಸಿಕೊಂಡು ಶಿಸ್ತುಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ಪೌತಿಖಾತೆ ಖಾತೆ ಬದಲಾವಣೆ, ಖಾತೆ ವರ್ಗಾವಣೆ, ಆಸ್ತಿ ಮಾರಾಟ, ಮತ್ತು ಇ-ಆಸ್ತಿ ದಾಖಲೆ ನೀಡುವ ಬಗ್ಗೆ ಯಾವುದೇ ಅರ್ಜಿಗಳು ಇದ್ದರೆ ನಮ್ಮ ಗಮನಕ್ಕೆ ತನ್ನಿ ಎಂದರು, ಅವದಿಯೊಳಗೆ ಮುಗಿಸಿಕೊಟ್ಟರೆ ತಾಲೂಕು ಅಭಿವೃದ್ಧಿಯತ್ತ ಸಾಗುತ್ತದೆ. ಕಡತ ವಿಲೇವಾರಿಗೆ ಇಲ್ಲಸಲ್ಲದ ನೆಪಗಳನ್ನು ಹೇಳಿಕೊಂಡು ವಿನಾಕಾರಣ ವಿಳಂಬನೀತಿ ಅನುಸರಿಸುವುದು ಸರಿಯಲ್ಲ ಎಂದರು.
ಈದೇ ಸಂಧರ್ಭದಲ್ಲಿ ಜಿಲ್ಲಾ ಲೋಕಾಯುಕ್ತ ಕಚೇರಿಯ ಪೊಲೀಸ್ ಸಿಬ್ಬಂದಿಗಳಾದ ಜಿ.ಎನ್.ಸಂತೋಷ್‌ಕುಮಾರ್ ಮತ್ತು ಆರ್.ಟಿ.ಚಂದ್ರಶೇಖರ ಪಾಲ್ಗೊಂಡಿದ್ದರು.