ನಾಯಕನಹಟ್ಟಿ:: ಕಳೆದ ಜೂನ್ ತಿಂಗಳಲ್ಲಿ ತಾಲೂಕಿನಾದ್ಯಂತ ಮಳೆಯಾಗದೆ ರೈತರು ಕಂಗಲಾಗಿದ್ದಾರೆ ಬಿದ್ದ ಅಲ್ಪ ಸ್ವಲ್ಪ ಮುಂಗಾರು ಮಳೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ಪ್ರಾರಂಭಿಸುವಷ್ಟರಲ್ಲಿ ಕೃಷಿ ಇಲಾಖೆಯಿಂದ ವಿತರಣೆಯಾದ ಶೇಂಗಾ ಸಂಪೂರ್ಣ ಕಳಪೆಯಿಂದ ಕೂಡಿ ರೈತರಿಗೆ ಗಾಯದ ಮೇಲೆ ಬರೆ ಇಳಿದಂತಾಗಿದೆ ಹತ್ರ ಮಳೆ ಕೊರತೆ ಇತ್ತ ಗುಣಮಟ್ಟ ಕೊರತೆ ರೈತರನ್ನು ಕಂಗಾಲು ಮಾಡಿದೆ ಉತ್ತಮ ಬೀಜ ಗೊಬ್ಬರ ಕೊಡಿ ಸ್ವಾಮಿ ಹಿರಿಯ ಕೃಷಿ ಅಧಿಕಾರಿಗಳು ಏನು ಮಾಡುತ್ತೀರಾ ಮಾನ್ಯ ಕೃಷಿ ಮಂತ್ರಿಗಳೇ ನೀವು ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದೀರಿ ನಮ್ಮ ಜಿಲ್ಲೆಯಲ್ಲಿ ಕಳಪೆ ಶೇಂಗಾ ಬಿತ್ತನೆ ಬೀಜ ಮಾರಾಟ ಮಾಡುತ್ತಿರುವುದು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ರಾಷ್ಟ್ರೀಯ ಕಿಸಾನ್ ಸಂಘದ ಅಧ್ಯಕ್ಷರಾದ ಬಿ ಟಿ ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದ್ದರು,

ಅವರು ಪಟ್ಟಣದ ಕೃಷಿ ಇಲಾಖೆಯಲ್ಲಿ ಕಳಪೆ ಬಿತ್ತಿನ ಬೀಜ ಮಾರಾಟ ಮಾಡುತ್ತಿರುವುದು ಕಂಡು ಪ್ರತಿಭಟನೆಗೆ ಕುಳಿತು ಮಾತನಾಡಿ ಇಂದು ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಚೌಳಕೆರೆ ನಲಗೇತನಹಟ್ಟಿ ಚನ್ನಬಸಯ್ಯನಹಟ್ಟಿ ಸೇರಿದಂತೆ ರೈತ ಮಹೇಶ್ ಎಂಬುವವರು ಐದು ಚೀಲ ಶೇಂಗಾ ಪಾಕೆಟ್ ಕೃಷಿ ಇಲಾಖೆಯಲ್ಲಿ ಖರೀದಿಸಿದ್ದು ಮನೆಗೆ ಹೋಗಿ ಚೀಲವನ್ನು ಓಪನ್ ಮಾಡಿದಾಗ ಅದು ಕಳಪೆ ಶೇಂಗಾ ಬಿತ್ತನೆ ಬೀಜ ಕಂಡು ಬಂದ ಕಾರಣ ರೈತ ಮಹೇಶ ಕೂಡಲೇ ಕೃಷಿ ಇಲಾಖೆಯತ್ತ ಧಾವಿಸಿ ನನಗಾದ ಅನ್ಯಾಯ ಯಾವ ಹೋಬಳಿಯ ರೈತರಿಗೆ ಆಗಬಾರದೆಂಬ ಉದ್ದೇಶದಿಂದ ಶೇಂಗಾ ಬಿತ್ತನೆ ಬೀಜವನ್ನು ಕೃಷಿ ಇಲಾಖೆಯ ಮುಂಭಾಗದಲ್ಲಿ ಸುರಿದು ಪ್ರತಿಭಟನೆ ಮಾಡಲಾಗಿದೆ ಎಂದು ರಾಷ್ಟ್ರೀಯ ಕಿಸಾನ್ ಸಂಘದ ಅಧ್ಯಕ್ಷರಾದ ಬಿ ಟಿ ಪ್ರಕಾಶ್ ತಿಳಿಸಿದರು.

ಈ ವೇಳೆ ರಾಷ್ಟ್ರೀಯ ಕಿಸಾನ್ ಸಂಘದ ಯುವ ಘಟಕ ಅಧ್ಯಕ್ಷರಾದ ಸಿ ಪಿ ಮಹೇಶ್ ಕುಮಾರ್ ಮಾತನಾಡಿ ನಾಯಕನಹಟ್ಟಿಯ ರೈತ ಸಂಪರ್ಕ ಕೇಂದ್ರದಲ್ಲಿ ಪ್ರಸ್ತುತ ಈ ಸಾಲಿನ ಮುಂಗಾರು ಶೇಂಗಾ ಬಿತ್ತನೆ ಬೀಜ ಶ್ರೀ ಮಡಿವಾಳೇಶ್ವರ ಸ್ವೀಟ್ಸ್ ದಾವಳಗಿ ಇವರಿಂದ ವಿತರಣೆ ಮಾಡುತ್ತಿರುವ ಶೇಂಗಾ ಬಿತ್ತನೆ ಬೀಜ ಕಳಪೆ ಗುಣಮಟ್ಟದಾಗಿದ್ದು ಬಿತ್ತನೆಗೆ ಯೋಗ್ಯವಲ್ಲದ ಕಾರಣ ಸದರಿ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ವಿತರಣೆಯಾದ ಶೇಂಗಾ ಬಿತ್ತನೆ ಬೀಜವನ್ನು ವಾಪಸ್ ಪಡೆದು ಬೇರೆ ಉತ್ತಮ ಗುಣಮಟ್ಟದ ಶೇಂಗಾ ಬಿತ್ತನೆ ಬೀಜವನ್ನು ರೈತರಿಗೆ ಕೂಡಲೇ ವಿತರಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಅಧಿಕಾರಿ ಹೇಮಂತ್ ನಾಯ್ಕ ರವರು ಮಾತನಾಡಿ ಈ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಬಿತ್ತನೆ ಬೀಜ ಕಳಪೆ ಸರಬರಾಜು ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವ ಭರವಸೆ ನೀಡಿದರು.

ಸದರಿ ಶೇಂಗಾ ಬಿತ್ತನೆ ಬೀಜ ಬೆಳಗಾವಿ ಜಿಲ್ಲೆಯ ದಳಗಿರಿ ಮಡಿವಾಳೇಶ್ವರ ಸ್ವೀಟ್ ಕಂಪನಿಯಿಂದ ಸರಬರಾಜಾಗಿದೆ ಈ ಬಗ್ಗೆ ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳು ಸಂಬಂಧಪಟ್ಟ ಕಂಪನಿಗೆ ಮಾಹಿತಿ ನೀಡಿ ಅವರು ಗುಣಮಟ್ಟದ ಶೇಂಗಾ ವಾಪಸ್ ನೀಡಿದಾಗ ನಿಮಗೆ ಬೀಜಾ ನೀಡುವುದಾಗಿ ಹೇಳುತ್ತಾರೆ ಆದರೆ ಭೂಮಿ ಹದ ಮಾಡಿ ಬಿತ್ತನೆಗಾಗಿ ಕಾಯುತ್ತಿರುವ ನಮಗೆ ಸದ್ಯಕ್ಕೆ ಬೀಜದ ಅವಶ್ಯಕತೆ ಇದೆ ರೈತರಿಗೆ ಮೋಸ ಮಾಡುವ ಕಂಪನಿಗಳನ್ನು ಅಧಿಕಾರಿಗಳು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ರೈತ ನಲಗೇತನಹಟ್ಟಿ ಎಸ್ ಜಿ ಗೌಡ್ರು ಸಣ್ಣ ಬೋರಯ್ಯ ಒತ್ತಾಯಿಸಿದ್ದಾರೆ.

About The Author

Namma Challakere Local News
error: Content is protected !!