ಚಳ್ಳಕೆರೆ
ನಮ್ಮ ತಂದೆಯಾದ ದಿವಂಗತ ಎನ್ . ಜಯಣ್ಣ ಇವರ ಜೀವಿತಾವಧಿಯಲ್ಲಿ ದೀನದಲಿತರು ಹಾಗೂ ಬಡವರ ಬಗ್ಗೆ ಅಪಾರ ಕಾಳಜಿ ಹೊಂದಿದವರಾಗಿದ್ದು ಅವರು ಮಾಡುತ್ತಿದ್ದ ಸಮಾಜಿಕ ಕಾರ್ಯಗಳು ಹಾಗೂ ದಾನಧರ್ಮ ಇಂದು ಸಹ ಅವರ ಪುತ್ರರಾದ ನಾವು ಅವರ ಪುಣ್ಯ ಸ್ಮರಣೆ ,ಜನ್ಮದಿನಾಚರಣೆ ಸೇರಿದಂತೆ ಅವರ ಹೆಸರಿನಲ್ಲಿ ಹಲವಾರು ಕಾರ್ಯಗಳನ್ನು ಮಾಡಕೊಂಡು ಅವರ ದಾರಿಯನ್ನೆ ಅನುಸರಿಸುತ್ತಿದ್ದ ಇಂದು ಅವರ 27 ಪುಣ್ಯ ಸ್ಮರಣೆ ಪ್ರಯುಕ್ತ ಚಳ್ಳಕೆರೆ ನಗರದ ಬನಾಶ್ರೀ ವೃದ್ದಾಶ್ರಮದಲ್ಲಿನ ವೃದ್ದರಿಗೆ ಬೆಡ್ ಶೀಟ್
ಹಾಗೂ ಬಟ್ಟೆ ಮತ್ತು ಸಿಹಿ ಊಟವನ್ನು ನೀಡಲಾಗಿದೆ ಎಂದು ಪುತ್ರರಾದ ಜಿ.ವೆಂಕಟೇಶ ಹೇಳಿದರು.

ಈ ಆಶ್ರಮದಲ್ಲಿ 25 ವೃದ್ದರಿದ್ದು ಆಶ್ರಮದ ಸಂಸ್ಥಾಪಕಿ ಎಸ್.ಮಂಜುಳಮ್ಮ ವೃದ್ದರನ್ನ ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿರುವುದ ಶ್ಲಾಘನೀಯ ಎಂದರು…

ಸಮಾಜೀಕ ಹೋರಾಟಗಾರ ಹಾಗೂ ಮುಸ್ಲಿಂ ಸಮುದಾಯದ ಮುಖಂಡ ಎಚ್ ಎಸ್ ಸೈಯದ್ ಮಾತನಾಡಿ,ದಿವಂಗತ ಮಾಜಿ ಶಾಸಕ ಹಾಗೂ ಮಾಜಿ ಸಚೇತಕರಾದ ಎನ್ ಜಯಣ್ಣ ಉತ್ತಮ ರಾಜಕಾರಣ ಹಾಗೂ ಬಡವರ ಬಂಧುಹಾಗಿದ್ದ ಅವರು ಶಾಸಕರಾಗಿದ್ದು ಸಮಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು, ಬಡವರಿಗೆ ನಿವೇಶನಗಳನ್ನ ಹಂಚಿದರು ಅವರ ನಂತರ ಅವರ ಸಹೋದರ ಪುತ್ರರಾದ ಡಿ.ಸುಧಾಕರ್ ಸಚಿವರಾಗಿ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನ ಮಾಡುತ್ತಿದ್ದಾರೆ.ದಿವಂಗ ಎನ್ ಜಯಣ್ಣ ಪುತ್ರರು ಸಹ ಹಲವಾರು ಸಮಾಜಿಕ ಕಾರ್ಯಕಗಳನ್ನು ಮಾಡಿಕೊಂಡು ಬರುತ್ತಿದ್ದಾರೆ ಎಂದರು..

ಈ ಸಂದರ್ಭದಲ್ಲಿ ಬನಾಶ್ರೀ ವೃದ್ದಾಶ್ರಮದ ಸಂಸ್ಥಾಪಕಿ ಎಸ್.ಮಂಜುಳಮ್ಮ,ಮುಸ್ಲಿಂ ಮುಖಂಡ ಎಸ್ ಬಿ ಜುಬೀರ್ ಮಾತನಾಡಿದರು.
ಈ ಸಮಯದಲ್ಲಿ ಎನ್ ಜಯಣ್ಣ ಇವರ ಪುತ್ರರಾದ ಜಿ.ವೆಂಕಟೇಶ,ಮಿಲ್ ಶ್ರೀನಿವಾಸ್. ಕೃಷ್ಣಮೂರ್ತಿ,ಕೊಟ್ರೇಶ,ತಿರುಕಪ್ಪ,ಸಿದ್ದಾಪುರ ಶೇಖರ್,ಬಾಳೆಕಾಯಿ ವೆಂಕಟೇಶ,ಮೊಮ್ಮಕ್ಕಳಾದ ಸುಪ್ರೀತ್ ನಮಿತ್ ಸೇರಿದಂತೆ ಆಶ್ರಮದ ವೃದ್ದರು ಇದ್ದರು..

About The Author

Namma Challakere Local News
error: Content is protected !!