ಹೊಳಲ್ಕೆರೆ: ಕಾಡುಗೊಲ್ಲರು ಎಂದು ಬರೆಸಬೇಕು
ಚಿತ್ರದುರ್ಗ ಮತ್ತು ಹೊಳಲ್ಕೆರೆ ತಾಲೂಕುಗಳಲ್ಲಿ ನಡೆಯುತ್ತಿರುವ
ಜನಗಣತಿ ಸಮೀಕ್ಷೆಯಲ್ಲಿ, ಕಾಡುಗೊಲ್ಲರನ್ನು ‘ಕಾಡುಗೊಲ್ಲರು’
ಎಂದು ಮತ್ತು ಧರ್ಮದ ಕಾಲಂನಲ್ಲಿ ‘ಬುಡಕಟ್ಟು’ ಎಂದು
ಬರೆಸಬೇಕು ಎಂದು ಹೊಳಲ್ಕೆರೆ ಮಾಜಿ ಶಾಸಕ ಎವಿ
ಉಮಾಪತಿ ಅವರು ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮದೊಂದಿಗೆ ನೀಡಿದ ಹೇಳಿಕೆಯಲ್ಲಿ, ಕನಿಷ್ಠ ಜೀವನ ನಡೆಸುತ್ತಿರುವ
ಕಾಡುಗೊಲ್ಲರು ಕುರಿ, ಮೇಕೆ ಮತ್ತು ಹಸು ಸಾಕಾಣಿಕೆ ಮಾಡಿ
ಜೀವನ ಸಾಗಿಸುತ್ತಿದ್ದು, ಸರ್ಕಾರ ನಡೆಸುತ್ತಿರುವ ಈ ಗಣತಿಯನ್ನು
ಸದುಪಯೋಗಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

