ಚಳ್ಳಕೆರೆ : ಸಮಾಜ ಕಲ್ಯಾಣ ಇಲಾಖೆಯಿಂದ ದಿಕ್ಷಾ ಭೂಮಿ ವೀಕ್ಷಣೆಗೆ ಪ್ರತಿವರ್ಷದಂತೆಯೆ ಈ ವರ್ಷವೂ ಕೂಡ ಚಳ್ಳಕೆರೆ ನಗರದ ಹಲವು ಮುಖಂಡರನ್ನು ಆಹ್ವಾನಿಸಲಾಗಿದೆ.
ಅದರಂತೆ ಇಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ನಾಗಪುರದ
ದೀಕ್ಷಾ ಭೂಮಿಗೆ ತೆರಳುವವರನ್ನು ಬಿಳ್ಕೊಟ್ಟರು.
ಇದೇ ಸಂಧರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಸಂಚಾಲಕ, ಟಿ.ವಿಜಯ್ ಕುಮಾರ್, ಪರುಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್, ನಲಗೇತನಹಟ್ಟಿ ನಾಗರಾಜ್, ನನ್ನಿವಾಳ ನಾಗರಾಜ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇತರರು ಇದ್ದರು.

