ಚಳ್ಳಕೆರೆ : ರೈತ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿ ಸ್ಕಾಲರ್ ಶಿಪ್ ನೀಡುವ ಮಹತ್ವ ಯೋಜನೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ಇಲ್ಲವಾದರೆ ದುರಂತದ ಸಂಗತಿ ಎಂದು ಕೃಷಿ ಜಂಟಿ ನಿದೇರ್ಶಕ ರಮೇಶ್ ಕುಮಾರ್ ಹೇಳಿದ್ದಾರೆ.
ಅವರು ನಗರದ ತಾಲೂಕು ಪಂಚಾಯಿತಿ ಸಭಾಗಂಣದಲ್ಲಿ ಆಯೋಜಿಸಿದ್ದ ಪ್ರಗತಿ ಪರೀಶಿಲನಾ ಸಭೆಯಲ್ಲಿ ಮಾತನಾಡಿದರು, ತಾಲೂಕಿನಲ್ಲಿ ಮಳೆ ಹಾನಿಗೆ ಹಾನಿಯಾದ ದುರಸ್ತಿ ಕೊಠಡಿಗಳು ತಾಲೂಕಿನಲ್ಲಿ 138 ಕೊಠಡಿಗಳು ದುರಸ್ತಿಯಲ್ಲಿವೆ, ಅದರಲ್ಲಿ ನಿರ್ಮಿತಿ ಕೇಂದ್ರಕ್ಕೆ 132 ಶಾಲೆಗಳ ದುರಸ್ತಿಗೆ ನೀಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಸಭೆಯ ಗಮನಕ್ಕೆ ತಂದರು. ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಈಗಾಗಲೇ ಬಿಸಿಯೂಟ ಕಾರ್ಯಕ್ರಮ ನಡೆಯುತ್ತಿದೆ, 2022-23ರ ಮಕ್ಕಳ ಶೂ ಮತ್ತು ಸಮವಸ್ತç ಇನ್ನೂ ಮಂಜೂರಾಗಿಲ್ಲ ಎಂದರು.
ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳಲ್ಲಿ ಮಕ್ಕಳ ಬಿಸಿಯೂಟ ಮಾಡುವ ಸ್ಥಳ್ಕಕೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿಯಲ್ಲಿ ಕಾಮಗಾರಿಗೆ ಜಿಲ್ಲಾ ಕಾರ್ಯನಿರ್ವಾಣಧಿಕಾರಿಗಳ ಆದೇಶದಂತೆ ಕಾಮಗಾರಿ ಪ್ರಾರಂಭಿಸಿ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಹೇಳಿದರು.
ಇನ್ನೂ ಕೃಷಿ ತಾಂತ್ರಿಕ ಅಧಿಕಾರಿ ರವಿಕುಮಾರ್, ತಾಲೂಕಿನಲ್ಲಿ ರೈತರ ಬಿತ್ತನೆಗೆ ಸೂಕ್ತ ಸಮಯ ಜೂನ್-ಜುಲೈ, ತಾಲೂಕಿನಲ್ಲಿ ವಾರ್ಷಿಕ ಮಳೆಗಿಂದ ಜಾಸ್ತಿಯಾಗಿದೆ, ಆದರೆ ಬಿತ್ತನೆಗೆ ತಕ್ಕ ಹಸಿಮಳೆಯಾಗಿಲ್ಲ ಆದ್ದರಿಂದ ರೈತರು ಇನ್ನೂ ಸುಮಾರು ರೈತರು ಬಿತ್ತನೆ ಮಾಡಿಲ್ಲ ಎಂದರು, ಇದಕ್ಕೆ ಉತ್ತರಿಸಿದ ಕೃಷಿ ಜಂಟಿ ನಿದೇರ್ಶಕ ರಮೆಶ್‌ಕುಮಾರ್, ತಾಲೂಕಿನ ರೈತರಿಗೆ ಬೆಳೆ ವಿಮೆ ಕಟ್ಟಿಕೊಳ್ಳಲು ವ್ಯಾಪಕ ಪ್ರಚಾರ ಮಾಡಿ ಇದರಿಂದ ಕನಿಷ್ಠ ಬೆಳೆ ನಷ್ಟವಾದಾಗ ಬೆಳೆ ವಿಮೆಯಾದರು ಕೈಗೆ ಸಿಗುತ್ತದೆ, ಎಂದರು.
ಕಳೆದ ಬಾರಿ ಈಡೀ ಜಿಲ್ಲೆಗೆ 82ಕೋಟಿ ಬೆಳೆವಿಮೆ ಬಂದರೆ ಚಳ್ಳಕೆರೆಗೆ ತಾಲೂಕಿಗೆ ಒಂದೇ 52ಕೋಟಿ ಬೆಳೆವಿಮೆ ಬಂದಿರುವುದು ದಾಖಲಾಗಿದೆ. ಬೆಳೆವಿಮೆ ಕಟ್ಟಲು ಬಿತ್ತನೆ ಮಾಡಬೇಕೆಂದು ಆದೇಶ ಇಲ್ಲ ಬಿತ್ತನೆ ಮಾಡುತ್ತೆನೆ ಮಾಡುತ್ತನೆ ಎಂದು ಮುಂದೆಯೇ ಬೆಳೆ ವಿಮೆ ಕಟ್ಟಲು ಅವಕಾಶವಿದೆ. ಅದ್ದರಿಂದ ಬಿತ್ತನೆ ಮಾಡದಿದ್ದರೂ ಬೆಳೆ ವಿಮೆ ಕಟ್ಟಲು ಪ್ರಚಾರ ಪಡಿಸಿ ಎಂದರು.


ಬಾಕ್ಸ್ ಮಾಡಿ :
ಆಯಿಲ್ ಮಿಲ್ ಮಾಲೀಕರು ಯಂತ್ರದ ದುಬಾರಿ ಜರಡಿ ಬದಲಾಯಿಸುವ ಉದ್ದೇಶದಿಂದ ರೈತರಿಗೆ ಕದರಿ ಲೇಪಾಕ್ಷಿ ಶೇಂಗಾ ತಳಿಯ ಬೀಜವನ್ನು ಬಿತ್ತನೆ ಮಾಡಬೇಡಿ ಎಂದು ಹೇಳುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಹಬ್ಬಿವೆ ಆದರೆ ಉತ್ತಮವಾದ ಮಾರುಕಟ್ಟೆ ಇದೆ ಆದ್ದರಿಂದ ಕದಿರಿ ಲೇಪಾಕ್ಷಿ ಶೇಂಗಾ ಬೀಜ ಬಿತ್ತನೆಗೆ ಸೂಚಿಸಿ.
ಅರಣ್ಯ ಪ್ರದೇಶ ವಿಸ್ತರಿಸಿ ಅರಣ್ಯದಲ್ಲಿ ಪ್ರಾಣಿ ಪಕ್ಷಿಗಳಿಗೆ ಆಹಾರವಾಗಬಹುದಾದ ಹುಣಸೆ, ಹಲಸು, ಶೀತಫಲ ಈಗೇ ಪ್ರಾಣಿ ಪಕ್ಷಿಗಳ ಹಿತ ದೃಷ್ಠಿಯಿಂದ ಈ ಬಾರಿ ಪ್ರಮುಖ್ಯತೆ ನೀಡಿದೆ, ಎಂದು ಅರಣ್ಯಧಿಕಾರಿ ಬಾಬು ಮಾಹಿತಿ ನೀಡಿದರು.
ತಾಲೂಕಿನಲ್ಲಿ ಒಟ್ಟಾರೆ 120ನ್ಯಾಯ ಬೆಲೆ ಅಂಗಡಿಗಳು ನಡೆಯುತ್ತಾವೆ ಅದರಲ್ಲಿ ರೇಷನ್ ಕಾರ್ಡ್ 11408 ಅಂತ್ಯಧೋಯ ಕಾರ್ಡ್, ಬಿಪಿಎಲ್ 76647ಕಾರ್ಡ್, ಎಪಿಎಲ್ 10004 ಕಾರ್ಡ್ಗಳು, ರೈತರ ಎಪ್‌ಐಡಿ ಮಿಸ್ ಮ್ಯಾಚ್ ಮಾಡಿದ ರೈತರ ರೇಷನ್ ಕಾರ್ಡ್ ಡಿಲೀಟ್ 4211 ಹಾಗಿದ್ದಾವೆ, ಅದರಲ್ಲಿ 1432 ಕಾರ್ಡ್ ವಿತರಣೆ ಮಾಡಿದ್ದೆವೆ ಎಂದು ಆಹಾರ ನಿರೀಕ್ಷ ಶಿವಾಜಿ ಮಾಹಿತಿ ನೀಡಿದರು.
ತಾಲೂಕಿನಲ್ಲಿ ಸುಮಾರು ಹತ್ತು ವರ್ಷಗಳಿಂದ 7 ಅಂಗನವಾಡಿ ಕಟ್ಟಡಗಳು ಅಪೂರ್ಣಗೊಂಡಿವೆ, ತಾಲೂಕು ಪಂಚಾಯತಿ ಅನುದಾನ ನೀಡಿ ಎಂದು ಸಿಡಿಪಿಓ ಕೃಷ್ಣಾಪ್ಪ ಸಭೆಯ ಗಮನಹರಿಸಿದರು.
ಈದೇ ಸಂಧರ್ಭದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ದಯಾನಂದ, ರೇಷ್ಮೆ ಇಲಾಖೆ ಅಧಿಕಾರಿ ಕೆಂಚಾಜಿರಾವ್, ಪಶು ಸಂಗೋಪನಾ ಇಲಾಖೆ ವೈಧ್ಯಾಧಿಕಾರಿ ರೇವಣ್ಣ, ಕಾರ್ಮಿಕ ಇಲಾಖೆ ಅಧಿಕಾರಿ ಕುಸುಮಾ, ಜಿಲ್ಲಾ ಪಂಚಾಯಿತ್ ಇಂಜಿನಿಯಾರ್ ಇಲಾಖೆ ಎಇಇ ಕಾವ್ಯ, ಆರೋಗ್ಯ ಇಲಾಕೆ ಡಾ.ಕಾಶಿ, ತಿಪ್ಪೆಸ್ವಾಮಿ, ಅಕ್ಷರ ದಾಸೋಹ ಅಧಿಕಾರಿ ತಿಪ್ಪೆಸ್ವಾಮಿ, ಇತರರು ಪಾಲ್ಗೊಂಡಿದ್ದರು.

Namma Challakere Local News
error: Content is protected !!