ಚಿತ್ರದುರ್ಗ ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್. ಲಕ್ಷ್ಮಣ ರವರು ಗುಲಬರ್ಗಾ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಅಧಿಕಾರ ವಹಿಸಿಕೊಂಡಿರುವ ಪ್ರೊ. ಶಶಿಕಾಂತ ಎಸ್. ಉಡಿಕೇರಿ ಅವರನ್ನು ಅವರ ಕಚೇರಿಯಲ್ಲಿ ಸನ್ಮಾನಿಸಿದರು.
ಸನ್ಮಾನಿಸಿದ ನಂತರ ಮಾತನಾಡಿ ನೂತನ ಕುಲಪತಿಗಳು ದಾರವಾಡ ಕೃಷಿ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ, ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಮೌಲ್ಯಮಾಪನ ಕುಲಸಚಿವರಾಗಿ ಸೇವೆ ಸಲ್ಲಿಸಿ ಅಪಾರ ಆಡಳಿತ ಅನುಭವ ಜೊತೆಗೆ ದಕ್ಷತೆ ಮತ್ತು ಪ್ರಾಮಾಣಿಕತೆ ಮೈಗೂಡಿಸಿಕೊಂಡಿದ್ದಾರೆ.
ಒಬ್ಬ ಕೃಷಿ ವಿಜ್ಞಾನಿ ವಿಶ್ವವಿದ್ಯಾಲಯ ಚುಕ್ಕಾಣಿ ಹಿಡಿದು ಮುನ್ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಕುಲಪತಿಯವರ ಧರ್ಮಪತ್ನಿ ಸಹ ಪ್ರಸ್ತುತ ದಾರವಾಡ ಕೃಷಿ ವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತವರು ಚಿತ್ರದುರ್ಗ ಎಂಬುದನ್ನು ಸ್ಮರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ನೂತನ ಕುಲಪತಿಗಳನ್ನು ಪ್ರವಾಸೋದ್ಯಮ ಇಲಾಖೆ ಗುಲಬರ್ಗಾ ವಿಭಾಗದ ಜಂಟಿ ನಿರ್ದೇಶಕರಾದ ಡಾ. ಎಸ್. ತಿಪ್ಪೇಸ್ವಾಮಿ ಸನ್ಮಾನಿಸಿ ನಂತರ ಮಾತನಾಡಿ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಉದ್ಯೋಗಾವಕಾಶಗಳನ್ನು ಕೊಡುವ ಇಲಾಖೆಯೆಂದರೆ. ಅದು ಪ್ರವಾಸೋದ್ಯಮ ಇಲಾಖೆ. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ವಿಶ್ವವಿದ್ಯಾಲಯಕ್ಕೆ ನೀಡುವ ಸೌಲಭ್ಯಗಳ ಬಗ್ಗೆ ಕ್ರಮ ವಹಿಸುತ್ತೇನೆ ಎಂದರು.
ಸನ್ಮಾನ ಸ್ವೀಕರಿಸಿದ ನೂತನ ಕುಲಪತಿಗಳು ಮಾತನಾಡಿ ವ್ಯಕ್ತಿಗಿಂತ ವಿಶ್ವವಿದ್ಯಾಲಯ ಸಾಧನೆ ಮುಖ್ಯ ನಿಮ್ಮ ಸಹಕಾರದಿಂದ ವಿ. ವಿ. ಯ ಸಾಧನೆಯನ್ನು ಎತ್ತರಕ್ಕೆ ಬೆಳೆಸುವ ಧ್ಯೇಯ ನಮ್ಮದಾಗಬೇಕು ನನ್ನ ತಂದೆ ಒಬ್ಬ ಪ್ರಾಮಾಣಿಕ ಶಿಕ್ಷಕರಾಗಿದ್ದರು ಶಾಲೆ ಕಲಿಕಾ ಜೊತೆಗೆ ಮನೆಯಲ್ಲಿ ಕೂಡ ನನ್ನ ತಂದೆ ತಾಯಿ ನನಗೆ ನೀಡಿದ ಸಂಸ್ಕಾರ ಮತ್ತು ಮಾರ್ಗದರ್ಶನ ನನ್ನ ಕುಟುಂಬ ವರ್ಗದ ಕಾಳಜಿ ಮತ್ತು ಮುತುವರ್ಜಿಯೇ ಕುಲಪತಿ ಸ್ಥಾನ ಅಲಂಕರಿಸಲು ಸಾಧ್ಯವಾಗಿದೆ. ನನ್ನ ಅಧಿಕಾರ ಅವಧಿಯಲ್ಲಿ ವಿಶ್ವವಿದ್ಯಾಲಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

