ಚಳ್ಳಕೆರೆ :
ಕಾರು ರಸ್ತೆ ಪಕ್ಕದ ಗುಂಡಿಗೆ ಬಿದ್ದು ಪ್ರಣಾಪಾಯದಿಂದ ಪಾರು.
ಹೌದು ಇದು ಚಳ್ಳಕೆರೆ ನಗರದ ಭಾನುವಾರ ರಾತ್ರಿ 11 ಗಂಟೆ ಸುಮಾರಿನಲ್ಲಿ ಬೆಂಗಳೂರು ರಸ್ತೆಯ ಕುಲುಮೆ ರಸ್ತೆ ಮೀನು ಮಾರುಕಟ್ಟೆ ಬಳಿ ದುರಸ್ತಿ ಮಾಡದೆ ಇರುವುದು ವಾಹನಗಳ ಅವಘಡಕ್ಕೆ ಕೈ ಬೀಸಿ ಕರೆಯುವಂತಿದೆ.
ಚರಂಡಿ ಕಿತ್ತು ಹೋಗಿ ಗುಂಡಿಗಳು ಬಿದ್ದು ಮುಖ್ಯ ರಸ್ತೆಗೆ ಹೊಂದುಕೊಂಡ ಡಕ್ಕ್ ಕಿರಿದಾಗಿದ್ದು ಕೊರೆತ ಉಂಟಾಗಿ ಇದೇ ಸ್ಥಳದಲ್ಲಿ ಅನೇಕ ಬಾರಿ ವಾಹನಗಳು ಗುಂಡಿಗೆ ಬಿದ್ದ ನಿದರ್ಶನಗಳಿದ್ದರೂ ಸಹ ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ದುರಸ್ತಿ ಪಡಿಸಲು ಮುಂದಾಗುತ್ತಿಲ್ಲ.
ಅಫಘಾತಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುವ ಮುನ್ನ ಇಲ್ಲಿನರಸ್ತೆ ದುರಸ್ತಿ ಪಡಿಸುವರೇ ಕಾದು ನೋಡ ಬೇಕಾಗಿದೆ.

