ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ..
ಸ್ವಾಮೀಜಿಯವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ.
ಚಳ್ಳಕೆರೆ : ಯಾದವನಂದ ಸ್ವಾಮೀಜಿ ಹಾಗೂ ಡಿಟಿ.ಶ್ರೀನಿವಾಸ್ ಸಮಾಜವನ್ನು ಒಡೆಯವ ಕೆಲಸ ಮಾಡುತ್ತಿದ್ದಾರೆ. ಸ್ವಾಮೀಜಿ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಹೇಳಿದರು ..
ಚಳ್ಳಕೆರೆ ನಗರದ ಗೊಲ್ಲರ ಹಾಸ್ಟಲ್ ನಲ್ಲಿ ನಡೆದ ಕಾಡುಗೊಲ್ಲರ ಸಮೀಕ್ಷೆ ಕುರಿತಂತೆ ಸಭೆಯ ಅಧ್ಯಕ್ಷೆತೆ ವಹಿಸಿ ಮಾತನಾಡಿದ ಅವರು ಸ್ವಾಮೀಜಿಯವರು ಯಾವುದೋ ಒಂದು ಕುಟುಂಬಕ್ಕೆ ಅನುಕೂಲ ಮಾಡಲು ಸಮಾಜವನ್ನೇ ಹೊಡೆಯುವಂತಹ ಕೆಲಸ ಮಾಡುತ್ತಿದ್ದಾರೆ.. ಸ್ವಾಮೀಜಿ ಪೀಠಾಧ್ಯಕ್ಷರಾಗಿ ಎಲ್ಲವನ್ನೂ ಸರಿ ಸಮಾನವಾಗಿ ಕಾಣಬೇಕು ಆದರೆ ಸ್ವಾಮೀಜಿಗಳು ಸಮಾಜವನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನ ಮಾಡುತ್ತಿದ್ದಾರೆ.
66 ಜಾತಿಗಳಿಗೆ ಒಕ್ಕೂಟದ ಅಧ್ಯಕ್ಷ ಎಂದು ಹೇಳಿಕೊಂಡು ಶ್ರೀನಿವಾಸ್ ಕಾಡುಗೊಲ್ಲ ಸಮುದಾಯವನ್ನು ತುಳಿದುಕೊಂಡು ರಾಜಕಾರಣ ಮಾಡಲು ಹೊರಟ್ಟಿದ್ದಾರೆ. ಡಿ.ಟಿ.ಶ್ರೀನಿವಾಸ್.ಯಾವುದೇ ನಮ್ಮ ಕಾಡುಗೊಲ್ಲ ಸಮುದಾಯಕ್ಕೆ ಪ್ರಾತಿನಿತ್ಯ ಕೊಡದೆ ನಮ್ಮ ಕಾಡುಗೊಲ್ಲ ಸಮುದಾಯವನ್ನು ಪರಿಗಣನೆಗೆ ತಾಳದೆ ಕೆಪಿಎಸ್ಸಿಯಲ್ಲಿ ಸಹ ರಾಜಕೀಯ ಮಾಡಿದರು.
ಕಾಡುಗೊಲ್ಲ ನಿಗಮ ಆಗುವ ಸಮಯದಲ್ಲೂ ಸಹ ರಾಜಕೀಯ ಮಾಡಿದ್ರು ಅವರ ಮನೆಯಲ್ಲಿ ಮೂರು ಮಂದಿ ಸಹ ಕಾಂಗ್ರೆಸ್ ಪಕ್ಷದಲ್ಲಿ ಇರುವುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರವೇ. ಇವರಿಗೆ ಯಾವುದೇ ಕಿಮ್ಮತ್ತು ಕೊಡದೆ ನಮ್ಮ ಕಾರ್ಯವನ್ನು ನಾವು ಮುಂದುವರಿಸೋಣ. ನಾವೆಲ್ಲರೂ ಬೇರೆ ಬೇರೆ ಪಕ್ಷದಲ್ಲಿ ಇದ್ದರೂ ಸಹ ಜಾತಿ ವಿಚಾರವಾಗಿ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ… ಈಗಾಗಲೆ ಜಾತಿ ಸಮೀಕ್ಷೆ ಪ್ರಾರಂಭವಾಗಿದೆ ಪ್ರತಿಯೊಬ್ಬರೂ ಕಾಡುಗೊಲ್ಲರು ಸಮೀಕ್ಷೆಯಲ್ಲಿ ಮೂರು ಕಾಲಂ ನಲ್ಲೂ ಸಹ ಕಾಡುಗೊಲ್ಲ ಎಂದು ನಮೂದಿಸಬೇಕು..
ಯಾರು ಏನೇ ಹೇಳಿದರೂ ನಮ್ಮ ನಿಲುವೊಂದೆ ಕಾಡುಗೊಲ್ಲ ಎಂದರು….
ಕಾಡುಗೊಲ್ಲರ ಪ್ರಧಾನ ಕಾರ್ಯದರ್ಶಿ ಮೀಸೆ ಮಹಾಲಿಂಗಪ್ಪ ಮಾತನಾಡಿ.. ನಮ್ಮ ಕಾಡುಗೊಲ್ಲ ಸಮುದಾಯ ತುಂಬಾ ಹಿಂದುಳಿದ ಸಮುದಾಯವಾಗಿದೆ. ಮಕ್ಕಳ ಶೈಕ್ಷಣಿಕ ಪ್ರಗತಿ ಸಾಧಿಸಲು ನಮ್ಮ ಸಮುದಾಯ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಲು ಜಾತಿ ಗಣತೆ ಆರಂಭವಾಗಿರುವುದರಿಂದ ಪ್ರತಿಯೊಬ್ಬರು ಪ್ರತಿಹಟ್ಟಿಗಳಲ್ಲೂ ಕಾಡುಗೊಲ್ಲ ಎಂದು ನಮೂದಿಸಬೇಕು ಮುಖಂಡರು ಇದರ ಬಗ್ಗೆ ಜಾಗೃತಿ ವಹಿಸಿ ಎಲ್ಲಾ ಗ್ರಾಮಗಳ ಗೊಲ್ಲರಹಟ್ಟಿ ಗೆ ಹೋಗಿ ಜನಗಣತಿ ಕುರಿತಂತೆ ಮಾಹಿತಿ ನೀಡಿ ಕಾಡು ಗೊಲ್ಲ ಎಂದೇ ಬರಸಬೇಕು ಎಂದರು…
ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರು ಹಾಗೂ ಗೊಲ್ಲರ ಸಂಘದ ತಾಲೂಕು ಅಧ್ಯಕ್ಷರಾದ ರವಿ ಕುಮಾರ್ ಮಾತನಾಡಿ..
ಸಮೀಕ್ಷೆ ಮೊಬೈಲ್ ಆ್ಯಪ್ ನಲ್ಲು ಸಹ ಮಾಡಬಹುದಾಗಿದ್ದು ಪ್ರತಿಯೊಬ್ಬರೂ ಇದರ ಬಗ್ಗೆ ಎಚ್ಚರವಹಿಸಿ ಕಾಡುಗೊಲ್ಲ ಎಂದೆ ಬರೆಸಬೇಕು ಪ್ರತಿ ಗ್ರಾಮದ ಹಟ್ಟಿಗಳಿಗೆ ಹೋಗಿ ಇದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು….
ಕಾಡುಗೊಲ್ಲರ ಯುವ ಘಟಕದ ಅಧ್ಯಕ್ಷ ಪ್ರಭು,ತುಮಕೂರು ಕಾಡುಗೊಲ್ಲರ ಜಿಲ್ಲಾಧ್ಯಕ್ಷ ದೊಡ್ಡಯ್ಯ, ಕಾಡುಗೊಲ್ಲರ ಸಂಘದ ತಾಲೂಕು ಅಧ್ಯಕ್ಷ ಬೂದಿಹಳ್ಳಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಂಗಸ್ವಾಮಿ ಮಾತನಾಡಿದರು….
ಈ ಸಂದರ್ಭದಲ್ಲಿ ಕಾಡುಗೊಲ್ಲರ ಸಮುದಾಯದ ಹೊನ್ನೂರು ಗೋವಿಂದಪ್ಪ, ಕಾಡುಗೊಲ್ಲರ ಸಂಘದ ಸರ್ಕಾರಿ ನೌಕರರ ಸಂಘದ ತಾಲ್ಲೂಕಿ ಅಧ್ಯಕ್ಷ ಶ್ರೀಕಾಂತ,ಡಾ.ಮಂಜುನಾಥ,ತಿಪ್ಪೇಸ್ವಾಮಿ ಮೊಳಕಾಲ್ಮೂರು ಕೃಷ್ಣಪ್ಪ. ದೇವಿರಪ್ಪ, ಮಂಜಣ್ಣ,ಚಿಕ್ಕಣ್ಣ, ಜಿಟಿ.ಶಶಿಧರ್,ಹುಲಿಕುಂಟೆ ಕಾಂತರಾಜ್,ಮೂಡಲಗಿರಿಯಪ್ಪ ನಾಗರಾಜ,ಡಿ.ಈರಣ್ಣ,ಶಿವಮೂರ್ತಿ ಸೇರಿದಂತೆ ಕಾಡುಗೊಲ್ಲ ಸಂಘದ ಮುಖಂಡರು ಇದ್ದರು…..

