ಚಳ್ಳಕೆರೆ : ರಸ್ತೆ ಒತ್ತುವರಿಯನ್ನು ನಾವು ಕೇವಲ ನಗರ ಪ್ರದೇಶಗಳಲ್ಲಿ ಮಾತ್ರ ನೋಡುತ್ತಿದ್ದೆವೆ ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ರಸ್ತೆ ಒತ್ತುವರಿ ಮಾಡಿ ಕಾಂಪೌಂಡ್, ಮನೆ, ಶೆಡ್ ನಿರ್ಮಾಣ ಮಾಡಿರುವುದನ್ನು ಗ್ರಾಮೀಣ ಪ್ರದೇಶಗಳಲ್ಲಿ ಕೀಡ ಕಾಣವಲಬಹುದಾಗಿದೆ.
ಅದರಂತೆ ಚಳ್ಳಕೆರೆ ತಾಲೂಕಿನ ಜಡೆಕುಂಟೆ ಗ್ರಾಮದಲ್ಲಿ ಒತ್ತುವರಿ ಮಾಡಿಕೊಂಡಿರುವುದು ಕಂಡುಬಂದಿದೆ
ಹೌದು ಜಡೆಕುಂಟೆ ಗ್ರಾಮದ ಮೂಲಕ ಹಾದುಹೊದ ಸಾಣಿಕೆರೆ ಸಿಡ್ಲಯ್ಯನಕೋಟೆಗೆ ಸಂಪರ್ಕಿಸುವ
ಜಿಲ್ಲಾ ಮುಖ್ಯ ರಸ್ತೆ ಗ್ರಾಮದಲ್ಲಿ ಹಾದು ಹೋಗಿರುವ ಈ ರಸ್ತೆ ಅಕ್ಕ ಪಕ್ಕದ ಮನೆಗಳು ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಾಣ ಮಾಡಿಕೊಂಡಿದ್ದರು.
ಇದರಿಂದ ಸಾರ್ವಜನಿಕರಿಗೆ ಪ್ರಯಾಣಿಕರಿಗೆ ರಸ್ತೆ ಕಿರಿದಾಗಿದ್ದು ತೊಂದರೆಯಾಗುತ್ತಿತ್ತು ಇದನ್ನು ಮನಗಂಡ ಲೋಕೋಪಯೋಗಿ ಇಲಾಖೆ ಹಾಗೂ ಕಂದಾಯ ಇಲಾಖೆಯ ತಂಡ ತಹಶಿಲ್ದಾರ್ ರೇಹಾನ್ ಪಾಷ ನೇತೃತ್ವದಲ್ಲಿ ರಸ್ತೆಗೆ ಅಕ್ರಮವಾಗಿ ಒತ್ತುವರಿ ಮಾಡಿಕೊಂಡ ಹತ್ತುಕ್ಕೂ ಹೆಚ್ಚು ಮನೆಯ ಕಾಂಪೌಂಡ್ ಗೋಡೆಗಳನ್ನು ಜೆಸಿಬಿ ಯಂತ್ರದ ಮೂಲಕ ಪೋಲಿಸ್ ಸರ್ಪ ಗವಾಲಿನಲ್ಲಿ ತೆರುವು ಕಾರ್ಯಚರಣೆ ಮಾಡಿದ್ದಾರೆ.
ರಸ್ತೆ ವಿಸ್ತರಣೆಗೆ ಪದೇಪದೇ ಸಮಸ್ಯೆ ಉದ್ಭವಿಸಿದ ಗ್ರಾಮದಲ್ಲಿ ತಹಶೀಲ್ದಾರ್ ಹಾಗೂ ಪಿಡಬ್ಲ್ಯೂಡಿ ಅಧಿಕಾರಿಗಳು ಮತ್ತು ಪೋಲಿಸ್ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಜೆಸಿಬಿ ಯಂತ್ರ ಬಳಸಿ ರಸ್ತೆಯೇ ಜಾಗದಲ್ಲಿ ಆಳವಡಿಸಿಕೊಂಡಿದ್ದ ಕಾಂಪೌಂಡ್ ಗೋಡೆಗಳನ್ನು ಹೊಡೆದು ರಸ್ತೆ ವಿಸ್ತರಣೆಗೆ ಅವಕಾಶ ಮಾಡಿದರು.
ಚಳ್ಳಕೆರೆ ತಾಲೂಕಿನ ಜಡೆಕುಂಟೆ ಗ್ರಾಮದಲ್ಲಿ ಇಕ್ಕಟ್ಟಾದ ರಸ್ತೆಯಿಂದ ಪದೇಪದೇ ಅಪಘಾತಗಳು ಆಗುತ್ತಿದ್ದು ಇದರಿಂದ ರಸ್ತೆ ಅಗಲಿ ಕಾಣಕ್ಕೆ ಸಾಕಷ್ಟು ಬಾರಿ ಪ್ರಯತ್ನ ಮಾಡಿದರು ಇಲ್ಲಿನ ಗ್ರಾಮಸ್ಥರು ರಸ್ತೆ ಅಗಲೀಕರಣ ಅಡ್ಡಿಪಡಿಸುತ್ತಿದ್ದರು ಆದರೆ ಇಂದು ಅಧಿಕಾರಿಗಳ ನೇತೃತ್ವದಲ್ಲಿ ರಸ್ತೆ ಅಗಲೀಕರಣ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ರಸ್ತೆ ಅಗಲೀಕರಣ ಎರಡು ಕೋಟಿ ರೂ.ನೂತನ ರಸ್ತೆ ಮಂಜೂರು ಮುನ್ನುಡಿ :
ಕಾಪರಹಳ್ಳಿ ಹಾಗೂ ಜಡೆಕುಂಟೆ ಗ್ರಾಮಕ್ಕೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಇತಸಕ್ತಿ ಮೂಲಕ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಸು.ಎರಡು ಕೋಟಿ ರೂಪಾಯಿಗಳು ಅನುದಾನ ಸರಕಾರದಿಂದ ಮಂಜೂರಾಗಿರುವ ಕಾರಣ ಅಗತ್ಯವಾಗಿ ರಸ್ತೆ ಅಗಲೀಕರಣ ಅನಿವಾರ್ಯ ಗಿದೆ ಎನ್ನಲಾಗಿದೆ.
ಈಗಾಗಲೇ ಕಾಪರಹಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿ ಮುಗಿದಿದ್ದು ಜಡೆಕುಂಟೆ ಗ್ರಾಮದಲ್ಲಿ ಸು.300 ಮೀಟರ್ ಉದ್ದದ ರಸ್ತೆಗೆ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ಹಕೀಂ ಮಾಧ್ಯಮದೊಟ್ಟಿಗೆ ಮಾಹಿತಿ ಹಂಚಿಕೊಂಡರು.

