ಚಳ್ಳಕೆರೆ :
ಚಳ್ಳಕೆರೆ: ಬ್ಯಾಂಕ್ ಲಾಕರ್ ನಲ್ಲಿ ಸಿಕ್ಕಿದ್ದು 17
ವಜ್ರದುಂಗುರಗಳು
ಚಿತ್ರದುರ್ಗದ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರ ಮನೆ ಮೇಲೆ
ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಶನಿವಾರ ಮೂರನೇ ಬಾರಿಗೆ ನಡೆದ ಈ ದಾಳಿಯಲ್ಲಿ, ಕೋಟಕ್
ಮಹೀಂದ್ರಾ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್‌ಗಳ ಲಾಕರ್‌ಗಳನ್ನು
ತೆರೆಸಲಾಗಿತ್ತು. ಈ ವೇಳೆ 24.2 ಕೆಜಿ ಚಿನ್ನದ ಬಿಸ್ಕಟ್‌ಗಳು
ಮತ್ತು 17 ವಜ್ರದ ಉಂಗುರಗಳು ಪತ್ತೆಯಾಗಿವೆ. ಇದನ್ನು ಕಂಡು
ಅಧಿಕಾರಿಗಳು ಆಶ್ಚರ್ಯಚಕಿತರಾಗಿದ್ದಾರೆ. ವಶಪಡಿಸಿಕೊಂಡಿರುವ
ಈ ವಸ್ತುಗಳ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಇಂದು
ಕೂಡ ಬ್ಯಾಂಕ್‌ಗಳ ಲಾಕರ್‌ಗಳನ್ನು ಪರಿಶೀಲಿಸಲಿದ್ದಾರೆ ಎಂದು
ತಿಳಿದುಬಂದಿದೆ.

