ಚಳ್ಳಕೆರೆ :
ಚಿತ್ರದುರ್ಗ: ಕೋಟೆ ನಾಡಲ್ಲಿ ಚಂದ್ರಗ್ರಹಣ ಕಂಡಿದ್ದು
ಹೀಗೆ
ಭಾನುವಾರ ರಾತ್ರಿ 9.56 ಕ್ಕೆ ಆರಂಭವಾದ ರಕ್ತ ಚಂದ್ರ ಗ್ರಹಣವು,
ಚಂದ್ರ ಕೆಂಪು ಬಣ್ಣಕ್ಕೆ ತಿರುಗುತ್ತಾ ಆಕರ್ಷಕವಾಗಿ ಕಂಡುಬಂತು.
ಚಿತ್ರದುರ್ಗದ ಖಗೋಳ ಶಾಸ್ತ್ರಜ್ಞ ಹೆಚ್.ಎಸ್.ಟಿ. ಸ್ವಾಮಿ ಅವರು
ಇದು ಭೂಮಿ ಮತ್ತು ಆಕಾಶಗಳ ನಡುವಿನ ನೆರಳು-ಬೆಳಕಿನ
ಆಟವಾಗಿದ್ದು, ಬರಿಗಣ್ಣಿನಿಂದ ನೋಡಬಹುದು ಎಂದು ತಿಳಿಸಿದರು.
ಚಿತ್ರದುರ್ಗದಲ್ಲಿ ಗ್ರಹಣವನ್ನು ನೋಡುವ ಆಸಕ್ತರು ಈ ಅಪರೂಪದ
ಖಗೋಳ ವಿದ್ಯಮಾನವನ್ನು ಕಣ್ಣುಂಬಿಕೊಂಡರು.

