filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43;

ಚಳ್ಳಕೆರೆ : ಕೇಂದ್ರ ಸರ್ಕಾರದ ವಿಮಾ ಪಾಲಿಸಿಗಳನ್ನು ಮಾಡಿಸಿಕೊಳ್ಳುವುದರ ಮೂಲಕ ಸಾರ್ವಜನಿಕರು ತಮ್ಮ ಕುಟುಂಬಕ್ಕೆ ಆಶ್ರಯವಾಗಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್ ಶಶಿಧರ್ ಹೇಳಿದ್ದಾರೆ

ಅವರು ನಗರದ ನೂರು ಹಾಸಿಗೆಯ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆನರಾ ಬ್ಯಾಂಕ್, ತಾಲೂಕು ಸಾರ್ವಜನಿಕ ಆಸ್ಪತ್ರೆ, ಹಾಗೂ ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಪ್ರದಾನ ಮಂತ್ರಿ ವಿಮಾ ಯೋಜನೆ ಪಾಲಿಸಿಗಳು ಸಾರ್ವಜನಿಕರೊಂದಿಗೆ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ
ಅವರು

ಸಾರ್ವಜನಿಕರು ಒಂದು ವರ್ಷಕ್ಕೆ ಕೇವಲ 500 ರೂಪಾಯಿಗಳನ್ನು ತಮ್ಮ ಖಾತೆಯಲ್ಲಿ ಉಳಿಸಿದರೆ ಎರಡು ಇನ್ಸೂರೆನ್ಸಿ ಪಾಲಿಸಿಗಳಿಗೆ ತಾನಾಗಿಯೇ ಜಮಾ ಆಗುವುದು ಈ ಇನ್ಶುರೆನ್ಸ್ ಪಾಲಿಸಿಗಳಿಂದ ತಮ್ಮ ಕುಟುಂಬಕ್ಕೆ ನೆರವಾಗಬಹುದು ಪ್ರಧಾನಮಂತ್ರಿ ವಿಮಾ ಯೋಜನೆಗಳು ನಾಗರಿಕರಿಗೆ ವರದಾನವಾಗಿದ್ದು ತಮ್ಮ ಅಕಾಲಿಕ ಮರಣ , ಅಪಘಾತ ಸಂದರ್ಭದಲ್ಲಿ ತಮ್ಮನ್ನೇ ನಂಬಿಕೊಂಡ ಕುಟುಂಬದ ಸದಸ್ಯರಿಗೆ ನೆರವಾಗಲೆಂದೆ ಈ ವಿಮಾ ಪಾಲಿಸಿಗಳನ್ನು ತೆರೆಯಲಾಗಿದೆ.

ಆದ್ದರಿಂದ ನೀವು ಕೇವಲ ನಿಮ್ಮ ಬ್ಯಾಂಕ್ ಖಾತೆ ನಂಬರ್ ನಮೂದಿಸಿ ಸಹಿ ಮಾಡಿಕೊಟ್ಟರೆ ನಿಮ್ಮ ಹೆಸರಿಗೆ ನಮೂದು ಆಗುತ್ತವೆ. ಕೇವಲ 20 ರೂಪಾಯಿಗಳ ಇನ್ಸೂರೆನ್ಸ್, ಮತ್ತೊಂದು ಇನ್ ಶೂರೆನ್ಸ್ ಕೇವಲ 436 ರೂಪಾಯಿಗಳು ಮಾತ್ರ ಇದರಿಂದ ನಿಮ್ಮ ಅಕಾಲಿಕ ಮರಣ ಹಾಗೂ ಅಪಘಾತ ಸಂದರ್ಭದಲ್ಲಿ ನಿಮ್ಮ ಕುಟುಂಬಕ್ಕೆ ನಾಲ್ಕು ಲಕ್ಷ ರೂಪಾಯಿಗಳ ನಿಮ್ಮ ಕುಟುಂಬಕ್ಕೆ ನೆರವಾಗುತ್ತದೆ ಎಂದರು.

ಇನ್ನೂ ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ಮೆಹಬೂಬ್ ಸಾಬ್ ಮಾತನಾಡಿ, ವಿಮಾ ಪಾಲಿಸಿಗಳಿಂದ ನಿಮ್ಮ ಕುಟುಂಬ ಸದಾ ನಿಮ್ಮ ಜೊತೆಯಲ್ಲಿ ಇರುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ವಿಮಾ ಪಾಲಿಸಿಗಳನ್ನು ಮಾಡಿಸಿ ತಮ್ಮ ಕುಟುಂಬದ ರಕ್ಷಣೆಗೆ ನೆರವಾಗಿ, ಕಡಿಮೆ ಹಣ ಕಟ್ಟಿ, ಹೆಚ್ಚಿನ ಮೊತ್ತದ ಪಾಲಿಸಿ ಪಡೆಯಲು ನಮ್ಮ ಬ್ಯಾಂಕ್ ಗೆ ಬೇಟಿ ನೀಡಿ, ಪಾಲಿಸಿ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ವತ್ರೆಯ ಆಡಳಿತ ಅಧಿಕಾರಿ ಡಾ. ಮಂಜಪ್ಪ, ಪ್ರಸೂತಿ ವೈದ್ಯಧಿಕಾರಿಗಳಾದ ಡಾ.ನಾಗರಾಜ್ ತಾವೇ ಖುದ್ದಾಗಿ ವಿಮಾ ಪಾಲಿಸಿಗೆ ಸಹಿ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಕನೆ ನೀಡಿದರು.

ಇದೇ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಕಾಶಿನಾಥ್, ತಾಲೂಕು ಸಾರ್ವಜನಿಕ ಆಸ್ಪತ್ರೆ ಆಡಳಿತ ಅಧಿಕಾರಿ ಡಾ. ಮಂಜಪ್ಪ , ಪ್ರಸೂತಿ ವೈದ್ಯಾಧಿಕಾರಿಗಳಾದ ಡಾ. ನಾಗರಾಜ್ , ಶ್ರೂಶುಕಿ ಮಂಜುಳಾ, ತಿಪ್ಪೀರಮ್ಮ, ಆರೋಗ್ಯ ಸಹಯಾಕಿ ರೇಷ್ಮಾ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು,
ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!