ಚಳ್ಳಕೆರೆ :
ಮೊಳಕಾಲ್ಕೂರು: ಗುಡ್ಡದಲ್ಲಿ ಚಿರತೆ ದಾಳಿ, ನಾಯಿ ಬಲಿ
ಮೊಳಕಾಲ್ಕೂರಿನ ಅಶೋಕ ಶಿಲಾಶಾಸನದ ಗುಡ್ಡದಲ್ಲಿ ಹಗಲು
ಹೊತ್ತಲ್ಲೇ ಚಿರತೆಯೊಂದು ನಾಯಿಯನ್ನು ಕಚ್ಚಿಕೊಂಡು ಹೋಗಿದೆ.
ಕಳೆದ ಎರಡು ದಿನಗಳ ಹಿಂದೆ ನಾಯಿ ಮರಿಯನ್ನು ಹಿಡಿದು
ಕೊಂಡೊಯ್ದಿದ್ದ ಚಿರತೆ, ಇದೀಗ ಮತ್ತೊಂದು ನಾಯಿಯನ್ನು ಹಿಡಿದು
ಹೋಗಿದೆ. ಈ ಘಟನೆಯಿಂದ ಗುಡ್ಡದ ಸುತ್ತಮುತ್ತಲಿನ ಜನರು
ಭಯಭೀತರಾಗಿದ್ದು, ಚಿರತೆ ಜನರ ಮೇಲೆ ದಾಳಿ ಮಾಡುವ ಸಾಧ್ಯತೆ
ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಕೂಡಲೇ ಚಿರತೆಯನ್ನು
ಹಿಡಿಯುವಂತೆ ಅರಣ್ಯ ಇಲಾಖೆಯನ್ನು ಸಾರ್ವಜನಿಕರು
ಆಗ್ರಹಿಸಿದ್ದಾರೆ.

