ಚಳ್ಳಕೆರೆ : ದೀನ ದಲಿತರ ಏಳಿಗೆಗೆ ಶ್ರಮಿಸುವ ಅವರ ಕಷ್ಟಗಳಿಗೆ ಸದಾ ಬೆನ್ನುಲುಬಾಗಿ ನಿಲ್ಲುವ ಹಾಗೂ ನ್ಯಾಯಾಕ್ಕಾಗಿ ಹೋರಾಡುವ ವರ್ಗ ಎಂದರೆ ಅದು ದಲಿತ ಸಂಘರ್ಷ ಸಮಿತಿ ಮಾತ್ರ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಡಿ.ಆರ್.ಪಾಂಡುರಂಗಸ್ವಾಮಿ ಹೇಳಿದ್ದಾರೆ
ಅವರು ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಟ್ಟದ ಸಂಚಾಲಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು ನೊಂದವರ ಬಾಳಿಗೆ ಬೆಳಕಾಗುವ ನಿಟ್ಟಿನಲ್ಲಿ, ಅನ್ಯಾಯದ ವಿರುದ್ಧ ಹೋರಾಡಿ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದರು.
ಈದೇ ಸಂಧರ್ಭದಲ್ಲಿ ಜಿಲ್ಲಾ ಸಂಚಾಲಕ ದಿವಾಕರ್, ರಾಜ್ಯ ಸಂಚಾಲಕ ಶಿವುಕುಮಾರ್, ದ್ಯಾವರನಹಳ್ಳಿ ಹೆಚ್.ಮಧುಕುಮಾರ್, ಆನಂದ್, ಚಿಕ್ಕಮ್ಮನಹಳ್ಳಿ ತಿಪ್ಪೆಸ್ವಾಮಿ, ದಂಡಿಗೇನಹಳ್ಳಿ, ಎನ್.ಡಿ.ಸತೀಶ್ ನನ್ನಿವಾಳ, ವಿ.ಚಂದ್ರಶೇಖರ್, ಲಿಂಗರಾಜ್, ಇತರರು ಪಾಲ್ಗೊಂಡಿದ್ದರು.