ಚಳ್ಳಕೆರೆ : ನಗರದಲ್ಲಿ ಅಧಿಕಾರಿಗಳು ಅಭಿವೃದ್ಧಿ ಹೆಸರಿನಲ್ಲಿ ಸಾರ್ವಜನಿಕರಿಗೆ ಮಂಕುಬೂದಿ ಎರಚುತ್ತಿದ್ದಾರೆ ಎನ್ನುವುದಕ್ಕೆ ತಜಾ ಉದಾಹರಣೆ ನಗರದ ಸಂಗೋಳ್ಳಿ ರಾಯಣ್ಣ ರಸ್ತೆ ಸಾಕ್ಷಿ ಕರಿಸುತ್ತದೆ.
ಹೌದು ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 31 ವಾರ್ಡ್ ಗಳು ಇವೆ ಆದರೆ ಯಾವುದೇ ವಾರ್ಡ್ ನಲ್ಲಿ ಸರಿಯಾದ ರಸ್ತೆ, ಚರಂಡಿ ಇಲ್ಲದೆ, ಸಾರ್ವಜನಿಕರು ರೋಸಿ ಹೋಗಿದ್ದಾರೆ.
ಇನ್ನೂ ಕಳೆದ ಇಪ್ಪತ್ತು ರಿಂದ ಮೂವತ್ತು ವರ್ಷಗಳ ಹಿಂದೆ ನಿರ್ಮಿಸಿದ ರಸ್ತೆಗಳು ಆಳಾಗುದ್ದು ತಗ್ಗು ಗುಂಡಿಗಳ ಬಿದ್ದು ವಾಹನ ಸಾವರರಿಗೆ ಸಂಚಾಕಾರ ತರುವಂತೆ ಇವೆ.
.ಇನ್ನೂ ಎಷ್ಟೋ ಬಾರಿ ವಾಹನ ಸವಾರರು ಗುಂಡಿಯಲ್ಲಿ ಬಿದ್ದು ಪ್ರಾಣವನ್ನೆ ತೆತ್ತಿರುವ ಉದಾಹರಣೆಗಳು ಇವೆ, ಜಿಲ್ಲಾ ಮಂತ್ರಿ ಡಿ.ಸುಧಾಕರ್ , ಹಾಗೂ ಸ್ಥಳೀಯ ಶಾಸಕ ಟಿ.ರಘುಮೂರ್ತಿ ನಿವಾಸಗಳಿಗೆ ಸಂಪರ್ಕಿಸುವ ರಸ್ತೆಗಳೆ ಈ ರೀತಿಯಲ್ಲಿ ಇದ್ದರೆ ಇನ್ನೂ ಸಾಮಾನ್ಯ ಜನರ ಪಾಡೆನು ಎಂದು ಸ್ಥಳೀಯರ ಮಾತಾಗಿದೆ.
ಮಳೆ ಬಂದರೆ ಮೊಣಕಾಲು ಉದ್ದ ರಸ್ತೆಯಲ್ಲಿ ನೀರು ನಿಂತು ವಾಹನಗಳ ಓಡಾಡಲು ಹಾಗದೆ ಶಾಲಾ ಮಕ್ಕಳು ಪ್ರತಿ ನಿತ್ಯ ನಗರಸಭೆಗೆ ಶಾಪಾ ಹಾಕುತ್ತಿದ್ದರೆ.
ಇನ್ನೂ ಅಧಿಕಾರಿಗಳ ಬಳಿ ರಸ್ತೆ ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಿದರೆ ನಮ್ಮ ಮನೆಯನ್ನು ಹಿಂದಕ್ಕೆ ಕಟ್ಟಿಕೊ, ಸರಿಸಿಕೊ ಎಂಬೆಲ್ಲ ಅತ್ತಿಕ್ಕುವ ಮಾತುಗಳಿಗೆ ಸಾರ್ವಜನಿಕರ ತಮ್ಮ ಪಾಡಿಗೆ ತಾವು ಇದ್ದರೆ.
ಆದರೆ ಅದೇ ಮಾರ್ಗವಾಗಿ ಶಾಲಾ ಕಾಲೇಜುಗಳಿಗೆ ತೆರಳುವ ಮಕ್ಕಳ ಪಾಡು ಹೇಳತಿರದಾಗಿದೆ.
ಕೇವಲ ನಗರದಲ್ಲಿ ಮುಖ್ಯ ರಸ್ತೆಗಳು ಮಾತ್ರವೇ ಸ್ವಲ್ಪ ಮಟ್ಟಿಗೆ ಚೆನ್ನಗಿವೆ ಹೊರತು ನಗರದ ಒಳಗಡೆ ಯಾವ ರಸ್ತೆಗಳು ಸರಿಯಲ್ಲ ದುರಸ್ತಿ ಹಾಗದೆ ಎಷ್ಟೋ ವರ್ಷಗಳು ದಾಟಿವೆ.
ಆದ್ದರಿಂದ ಅಧಿಕಾರಿಗಳು, ಜನಪ್ರತಿನಿಧಿಗಳು ಒಮ್ಮೆಯಾದರೂ ಇಂತಹ ರಸ್ತೆಯ ಮೇಲೆ ಓಡಾಡುವ ಮೂಲಕ ಶಾಲಾ ಮಕ್ಕಳ, ವಯೋ ವೃದ್ದರ ಪಾಲಿಗೆ ನೆರವಾಗಿ ರಸ್ತೆ ಅಭಿವೃದ್ಧಿ ಪಡಿಸಿ ಎಂದು ಸಾರ್ವಜನಿಕರ ಆಗ್ರಹಿಸಿದ್ದಾರೆ.


