ಸಂಭ್ರಮದ ರೇಖಲಗೆರೆ ಶ್ರೀ ಕಾವಲು ಆಂಜನೇಯಸ್ವಾಮಿಯ ಶ್ರಾವಣ ಮಾಸದ ನಾಲ್ಕನೇ ಶನಿವಾರ ಪೂಜೆ ಅದ್ಧೂರಿಯಾಗಿ ಜರುಗಿದವು.
ನಾಯಕನಹಟ್ಟಿ: ಹೋಬಳಿಯ ಗುಂತಕೋಲಮ್ಮನಹಳ್ಳಿ ಸಮೀಪದ ರೇಖಲಗೆರೆ ಕಾವಲಿನಲ್ಲಿ ಶ್ರೀ ಕಾವಲು ಆಂಜನೇಯ ಸ್ವಾಮಿಯ ಶ್ರಾವಣ ಮಾಸದ ನಾಲ್ಕನೇ ಶನಿವಾರದ ವಿಶೇಷ ಪೂಜೆ ಅಭಿಷೇಕ ಅಲಂಕಾರ ಕಾರ್ಯಗಳು ನಡೆಸಲಾಗಿದೆ ಎಂದು ಸೇವಾ ಸಮಿತಿಯ ಕಾರ್ಯದರ್ಶಿ ಕೋಲಂನಳ್ಳಿ ಪೀತಾಂಬರ್ ಹೇಳಿದರು.
ಶನಿವಾರ ಹೋಬಳಿಯ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಂತಕೋಲಮನಹಳ್ಳಿ ಸಮೀಪದ ರೇಖಲಗೆರೆ ಶ್ರೀ ಕಾವಲು ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದವರು ಶ್ರೀ ಕಾವಲು ಆಂಜನೇಯ ಸ್ವಾಮಿಯ ನಾಲ್ಕನೇ ಶನಿವಾರ ಪೂಜಾ ಕಾರ್ಯಗಳು ಅದ್ಧೂರಿಯ ಜರುಗಿವೆ, ಈ ದಿನದ ಪೂಜಾ ಸೇವಕರ್ತರು ಶ್ರೀಮತಿ ವೀಣಾ ಕೋಲಮ್ಮನಹಳ್ಳಿ ಪೀತಾಂಬರ್ ಹಾಗೂ ರಾಜಣ್ಣ ಸಹೋದರರು ಮತ್ತು ಲಕ್ಷ್ಮಣ್ ಸಹೋದರರು ಮಲ್ಲೂರಹಳ್ಳಿ ಇವರಿಗೆ ಶ್ರೀ ಆಂಜನೇಯ ಸ್ವಾಮಿ ಆಯುಷ್ಯ ಆರೋಗ್ಯ ಸುಖ ಶಾಂತಿ ನೆಮ್ಮದಿ ನೀಡಲಿ ಎಂದು ಶುಭ ಹಾರೈಸಿದರು, ಈ ವರ್ಷ ಶ್ರಾವಣ ಮಾಸದಲ್ಲಿ ೫ ಶನಿವಾರ ಬಂದಿದ್ದು ಮುಂದಿನ ವಾರ 23.08.2025ರಂದು ಕಡೇಯ ಶ್ರಾವಣ ಮಾಸದ ಶನಿವಾರ ಪೂಜಾ ಕಾರ್ಯದಲ್ಲಿ ಹೆಚ್ಚಿನ ಭಕ್ತಾರು ಭಾಗವಹಿಸಿ ದೇವರ ಕೃಪಗೆ ಪಾತ್ರರಾಗಬೇಕೆಂದು ತಿಳಿಸಿದರು.
ಇದೇ ವೇಳೆ ಅಧ್ಯಕ್ಷ ಜೆಸಿಬಿ ತಿಪ್ಪೇಸ್ವಾಮಿ ಮಾತಾನಾಡಿದರು ಶ್ರಾವಣ ಮಾಸ ಎಂದರೆ ಬಹಳ ವಿಶೇಷ ದಿನ ಈ ಮಾಸದಲ್ಲಿ ಅನೇಕ ದೇವಾ ದೇವತೆಗಳಿಗೆ ಪೂಜೆ ಸಲ್ಲಿಸುವುದು, ಪುರಾತನ ಕಾಲದಿಂದಲೂ ಈ ಒಂದು ಸಂಪ್ರದಾಯವನ್ನು ನಡೆಸಲಾಗುವುದು, ಸದ್ಧಭಕ್ತರು ಹೆಚ್ಚಿನ ಸಂಖ್ಯೆಯಲಿ ಭಾಗವಹಿಸಿ ಶ್ರೀ ಆಂಜನೇಯ ಸ್ವಾಮಿಗೆ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿಕೊಂಡರು.
ಅಬ್ಬೇನಹಳ್ಳಿ ಗ್ರಾ.ಪಂ.ಸದಸ್ಯ ಕೋಲಂನಹಳ್ಳಿ ಕೆ.ಜಿ ತಿಪ್ಪೇಸ್ವಾಮಿ ಮಾತನಾಡಿದರು
ಈ ಸಂಧರ್ಭದಲ್ಲಿ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾಪಮ್ಮ ಆನಂದಪ್ಪ ಸದಸ್ಯ ಕೆ ಜಿ ತಿಪ್ಪೇಸ್ವಾಮಿ, ಸಣ್ಣೋಬಯ್ಯ, ಶ್ರೀ ಕಾವಲು ಆಂಜನೇಯ ಸ್ವಾಮಿ ಸೇವಾ ಸಮಿತಿಯ ಗೌರವಧ್ಯಕ್ಷ ರೇಖಲಗೆರೆ ಎಂ ಚಿನ್ನಯ್ಯ, ಸಹ ಕಾರ್ಯದರ್ಶಿ ಸಿ ರಮೇಶ್, ಖಜಾಂಚಿ ಮಾರುತಿರೆಡ್ಡಿ, ಎ ಟಿ ಅಶೋಕ, ಬಿ ಓ ಆರ್ ಓಬಣ್ಣ, ಪ್ರೋ|| ತಿಪ್ಪೇಸ್ವಾಮಿ, ಶಿಕ್ಷಕ ಅರುಣ್ ಕುಮಾರ್, ಮಲ್ಲೂರಹಳ್ಳಿ ಬಿ ಕಾಟಯ್ಯ ಸೇರಿದಂತೆ ಭಕ್ತಾರು ಇದ್ದರು.

