ತ್ಯಾಗ ಬಲಿದಾನದ ಸಂಕೇತ 79ನೇ ಸ್ವಾತಂತ್ರ್ಯ ದಿನಾಚರಣೆ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಸ್ವಾತಂತ್ರ‍್ಯೋತ್ಸವವು ನಮ್ಮ ರಾಷ್ಟ್ರಕ್ಕೆ ಮಹತ್ವದ ದಿನಾಚರಣೆ. ದೇಶವು ಮಹಾನ್ ನಾಯಕರ ತ್ಯಾಗ ಬಲಿದಾನ ಹೋರಾಟದ ಮೂಲಕ ದಾಸ್ಯದ ಸಂಕೋಲೆಯಿಂದ ಹೊರಬಂದ ಅಪೂರ್ವ ದಿನವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಅವರು ನಗರದ ಬಿಸಿನೀರು ಮುದ್ದಪ್ಪ ಪ್ರೌಡಶಾಲಾ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಸ್ವಾತಂತ್ರ್ಯ ದಿನಾಚರಣೆ ಎಂದರೆ ಶಿಸ್ತಿನ ಆಚರಣೆ. ಶಿಸ್ತನ್ನು ಸಂತೋಷವಾಗಿ ಆಚರಿಸುವುದು ಈ ದಿವಸವಾಗಿದೆ, ಇಂದು ಪ್ರತಿಯೊಬ್ಬರು ವಿದ್ಯಾವಂತರಾಗಬೇಕು. ಶಿಕ್ಷಣ ಎಲ್ಲ ರಂಗದಲ್ಲೂ ಇರಬೇಕು. ಪ್ರತಿಯೊಬ್ಬರಿಗೂ ಅವಕಾಶಗಳು ದೊರೆತು ಪ್ರಾಮಾಣಿಕತೆಯಿಂದ ಅವುಗಳನ್ನು ನಿಭಾಯಿಸುವಂತಾಗಬೇಕು ಎಂದರು.

ಪ್ರಾಸ್ತವಿಕವಾಗಿ ಮಾತನಾಡಿದ ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ದೇಶದ ತುಂಬೆಲ್ಲ ಮನೆಮಾಡಿದೆ ಅಂದು ಬ್ರಿಟೀಷರು ಭಾರತಕ್ಕೆ ಬಂದು, ನಮ್ಮವರ ಸಾಮಾಜಿಕ ಸ್ಥಿತಿಗತಿಯನ್ನು ಅಧ್ಯಯಿಸಿ ಭಾರತಕ್ಕೆ ಬೇಕಾದ ಒಡೆದು ಆಳುವ ತಂತ್ರವನ್ನು ಅನ್ವಯಿಸುತ್ತ ಹೋದರು. ಅದರಿಂದ ದೇಶವು ಅಭದ್ರವಾಯಿತು. ಹಂತ ಹಂತವಾಗಿ ನಾವು ಪರಕೀಯರಿಗೆ ಗುಲಾಮರಾದೆವು. ದೇಶವನ್ನು ಅಭದ್ರಗೊಳಿಸಲು ನಮ್ಮೊಳಗಿನ ಪಟ್ಟಭದ್ರ ಹಿತಾಸಕ್ತಿಯನ್ನು ಬಳಸಿಕೊಂಡರು, ಸ್ವಾತಂತ್ರ್ಯವು ಪ್ರತಿಯೊಬ್ಬ ಪ್ರಜೆಗೂ ನ್ಯಾಯ ಸಮ್ಮತ ಹಕ್ಕನ್ನು ನೀಡಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶಿಲ್ಪ, ಉಪಾಧ್ಯಕ್ಷೆ ಕವಿತಾ ಮಾತನಾಡಿದರು,

ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ,
ಸದಸ್ಯ ರಾಘವೇಂದ್ರ, ಬಿ.ಟಿ.ರಮೇಶ್‌ಗೌಡ, ವಿರುಪಾಕ್ಷ, ಜಯಣ್ಣ, ವಿ.ವೈ.ಪ್ರಮೋದ್, ಚಳ್ಳಕೆರೆಪ್ಪ, ಶ್ರೀನಿವಾಸ್, ಮಂಜುಳಪ್ರಸನ್ನ, ನಿರ್ಮಲ, ಕವಿತಾ, ಸುಜಾತ್, ಸಾಕಮ್ಮ, ನಾಗವೇಣಿ, ಸುಮಭರಮಯ್ಯ, ಬಿಇಒ.ಸುರೇಶ್, ಇಓ.ಶಶಿಧರ್, ಡಿವೈಎಸ್‌ಪಿ ಬಿಟಿ.ರಾಜಣ್ಣ, ವೃತ್ತ ನಿರೀಕ್ಷಕ ಕುಮಾರ್, ಮಂಜುನಾಥ್, ಪೌರಾಯುಕ್ತ ಜಗರೆಡ್ಡಿ, ಅಬಕಾರಿ ನೀರಿಕ್ಷಕ ತಿಪ್ಪಯ್ಯ, ಇತರ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

About The Author

Namma Challakere Local News
error: Content is protected !!