ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಹೊತ್ತಿ ಉರಿದ ಕಾರು…
ಚಳ್ಳಕೆರೆ:ನಿಲ್ಲಿಸಿದ ಕಾರಿನಲ್ಲಿ ಬ್ಯಾಟರಿಯಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಕಾರಿನ ಮುಂಭಾಗದ ಇಂಜಿನ್ ಸುಟ್ಟು ಕರಕಲಾಗಿರುವ ಘಟನೆ ಇಂದು ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಬಿ ಎಂ ಜಿ ಎಚ್ ಎಸ್ ಪ್ರೌಢಶಾಲೆಯ ಆವರಣದಲ್ಲಿ ನಿಲ್ಲಿಸಿದ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು ಉರಿದಿದ್ದು ಕಾರಿನ ಮುಂಭಾಗ ಸಂಪೂರ್ಣ ಸುಟ್ಟು ಹೋಗಿದೆ..
ಚಳ್ಳಕೆರೆ ವಿಶ್ವಕರ್ಮ ಮಾಜಿ ಅಧ್ಯಕ್ಷರಾದ ವೆಂಕಟೇಶ್ ಇವರಿಗೆ ಸೇರಿದ ಕಾರು ಇದಾಗಿದ್ದು ಬಯಲು
ರಂಗಮಂದಿರದ ಮುಂಭಾಗದಲ್ಲಿ ಇಂದು ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ವೀಕ್ಷಿಸಲು ಬಂದಿದ್ದ ಅವರು ಶಾಲೆ ಮುಂಭಾಗದಲ್ಲಿ ಕಾರು ನಿಲ್ಲಿಸಿ ಕಾರ್ಯಕ್ರಮ ವೀಕ್ಷಣೆ ವೇಳೆ ನಿಲ್ಲಿಸಿದ ಕಾರು ಹೊತ್ತಿ ಉರಿದಿದೆ.
ತಕ್ಷಣವೇ ಅಲ್ಲೇ ಇದ್ದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ…

