ಬ್ರಿಟಿಷರ ವಿರುದ್ಧ ತ್ಯಾ, ಬಲಿದಾನ ಹೋರಾಟದ ಫಲವೇ ಭಾರತೀಯರ ಸ್ವಾತಂತ್ರ್ಯ....
ಚಳ್ಳಕೆರೆ : 1947 ಆಗಸ್ಟ್ 15 ಭಾರತ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತವಾಗಿ ಪ್ರಜಾಸಾತ್ತಾತ್ಮಕ ಸಾರ್ವಭೌಮ ರಾಷ್ಟ್ರವಾದ ದಿನ ಸ್ವಾತಂತ್ರ್ಯವು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು.ವೈವಿಧ್ಯತೆಯಲ್ಲಿ ಏಕತೆ, ಸಮಗ್ರತೆ, ಸ್ವಾತಂತ್ರ್ಯದ ಉಸಿರು. ಎಂದು ಟಿ. ತಿಪ್ಪೇಸ್ವಾಮಿ
ಪ್ರ : ಕಾರ್ಯದರ್ಶಿ
CITU ಚಳ್ಳಕೆರ ಹೇಳಿದರು.
ಅವರು ನಗರದ ಎಪಿಎಂಸಿ ಪಕ್ಕದಲ್ಲಿ ಸಿಐಯುಟಿಸಿ ಕಛೇರಿಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಗೆ ಧ್ವಜಾರೋಹಣ ನೆರೆವೆರಿಸಿ ಮಾತನಾಡಿದರು.
ದಕ್ಕಿರುವ ಸ್ವತಂತ್ರ್ಯವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರದು. ಸ್ವತಂತ್ರ್ಯಕ್ಕಾಗಿ ನಡೆದ ನಿರಂತರ ಹೋರಾಟದ ಇತಿಹಾಸದ ಜ್ಞಾನ ತಿಳಿದರೆ ಮಾತ್ರವೇ ಉತ್ತಮ ಭವಿಷ್ಯ ಕಂಡು ಕೊಳ್ಳುವುದಕ್ಕೆ ಸಾಧ್ಯ.
79ನೇ ಸ್ವಾತಂತ್ರ್ಯ ಸಂದರ್ಭದಲ್ಲಿ ನಾವು ಬೈಯಿಸುವಂತೆ ಎಲ್ಲರಿಗೂ ಉಚಿತ ವಿದ್ಯಾಭ್ಯಾಸ, ಎಲ್ಲರಿಗೂ ಉಚಿತ ಅರೋಗ್ಯ, ಎಲ್ಲರಿಗೂ ಉದ್ಯೋಗ ಸೌಲಭ್ಯ, ಕಾರ್ಮಿಕರಿಗೆ ಸಂವಿಧಾನದ ಪ್ರಕಾರ 8ಗಂಟೆ ಕೆಲಸ,ಸರ್ವರಿಗೂ ಸಮಾನತೆಯಹಕ್ಕು, ಸಿಗಬೇಕೆಂದು ಎಂದರು.
79ನೇ ವರ್ಷದ ಸ್ವಾತಂತ್ರ್ಯ ಮಹೋತ್ಸವದ ಶುಭಾಶಯಗಳನ್ನು ಕೋರಿದರು.
ಈ ಕಾರ್ಯಕ್ರಮದಲ್ಲಿ ಟಿ. ನಿಂಗಣ್ಣನವರು ಧ್ವಜಾರೋಹಣ ಮಾಡಿದರು. ಈ. ನಾಗರಾಜ್, ಪಿ. ಸತೀಶ್, ಹಾಗೂ ನೂರಾರು ಕಾರ್ಮಿಕರು ಸೇರಿದ್ದರು.

