ಚಳ್ಳಕೆರೆ : ಖಾಸಗಿ ಬಸ್ ಮಾಲೀಕರ ಜೊತೆಗೆ ಆರ್ ಟಿಓ ಅಧಿಕಾರಿಗಳು ಶಾಮಿಲಾಗಿ ಪ್ರಯಾಣಿಕರ ಜೀವಕ್ಕೆ ಕುತ್ತು ತರುತ್ತಿದ್ದಾರೆ ಎಂದು ಡಿವಿ.ಪ್ರವೀಣ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸ್ ಟಾಪ್ ಪ್ರಯಾಣ ಜೀವಕ್ಕೆ ಹಾನಿ ಎಂಬುದು ಮನಗಂಡಿದ್ದರು ಕೂಡ ಆರ್ ಟಿ ಒ ಅಧಿಕಾರಿಗಳು ಚಳ್ಳಕೆರೆ ಮಾರ್ಗ ದಿಂದ ಪಾವಗಡ ಮಾರ್ಗವಾಗಿ ಖಾಸಗಿ ಬಸ್ ನವರು ಟಾಪ ಮೇಲೆ ಪ್ರಯಾಣಿಕರನ್ನು ಕರೆದೊಯ್ಯುವುದನ್ನು ತಡೆದು ಪ್ರಕರಣ ದಾಖಲಿಸದೆ ಮೌನವಹಿಸಿರುವುದು ಅನುಮಾನಕ್ಕೆ ಕಾರಣವಾಗುತ್ತದೆ.

ಎಷ್ಟೋ ಬಾರಿ ಹೇಳಿದರು ಆರ್ ಟಿ.ಓ ಅಧಿಕಾರಿಗಳು ಇಂತಹ ಕೃತ್ಯಗಳನ್ನು ನಡೆಯಲು ಒಳಸಂಚು ನೀಡುವುದು ಸಾರ್ವಜನಿಕರ ಪ್ರಾಣಕ್ಕೆ ಬೆಲೆಇಲ್ಲವಾಗಿದೆ.

ಇದರ ಸಂಬಂಧ ಜಿಲ್ಲಾಧಿಕಾರಿಗಳಿಗೆ , ಚಿತ್ರದುರ್ಗ ಆರ್ ಟಿ ಓ ಗಳಿಗೆ ಮನವಿ ಸಲ್ಲಿಸಿದೆ, ಆದರೆ ಆರ್ ಟಿ ಓ ಅಧಿಕಾರಿಗಳ ಮೌನಕ್ಕೆ ಶರಣಾಗಿರುವುದು ಶೋಚನೀಯ ಎಂದು ಆರ್ ಟಿ ಓ ಅಧಿಕಾರಿಗಳ ನಡೆಗೆ ಕಿಡಿಕಾರಿದ್ದಾರೆ.

About The Author

Namma Challakere Local News
error: Content is protected !!