ನಟನ ಆದರ್ಶ ಮೆರೆಯಬೇಕಿದ್ದ ನೆಲದಲ್ಲಿ ಡಾ.ವಿಷ್ಣು ಸಮಾದಿ ಧ್ವಂಸ ಅಪಮಾನ…
ಚಳ್ಳಕೆರೆ :
ಡಾ.ವಿಷ್ಣುವರ್ಧನ್ ಅಭಿಮಾನಿಗಳು ಎಲ್ಲರೂ ಸೇರಿ ಎರಡೆರಡು ಸಾವಿರ ಹಣ ಕೊಡುತ್ತೇವೆ..
ಅದೇ ಜಾಗವನ್ನು ಬಿಟ್ಟು ಕೊಡಿ, ಸ್ಮಾರಕಕ್ಕೆ ಅವಕಾಶ ಮಾಡಿಕೊಡಿ ಇಲ್ಲವಾದರೆ ರಾಜ್ಯದ್ಯಾಂತ ಉಗ್ರವಾದ ಹೋರಾಟ ಮಾಡುತ್ತೇವೆ. ಚಳ್ಳಕೆರೆಯಿಂದ ಬೆಂಗಳೂರಿಗೆ ಜಾಥ ಮಾಡುತ್ತೇವೆ ಎಂದು ಚಳ್ಳಕೆರೆ ವಿಷ್ಣುಸೇನಾ ಅಭಿಮಾನಿ ಬಳಗದ ಅಧ್ಯಕ್ಷ ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು…
ಚಳ್ಳಕೆರೆ ನಗರದ ವಿಷ್ಣುವರ್ಧನ್ ಸಮಾದಿ ನೆಲಸಮ ಕುರಿತು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ವಿಷ್ಣುವರ್ಧನ್ ವೃತ್ತದಿಂದ ಪ್ರತಿಭಟನೆ ಹೊರಟ ಪ್ರತಿಭಟನಾಕಾರರು. ನಗರದ ಮುಖ್ಯರಸ್ತೆಯಲ್ಲಿ ಸಂಚರಿಸಿ ನಂತರ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ನೀಡಿ ವಿಷ್ಣುವರ್ಧನ್ ರವರ ಸಮಾಧಿಯ ನೆಲಸಮ ಮಾಡಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು..
ವಿಷ್ಣುಸೇನಾ ಸಮಿತಿ ಅಧ್ಯಕ್ಷರಾದ ರಾಘವೇಂದ್ರ ಮಾತನಾಡಿ. ಕನ್ನಡದ ಮೆರು ನಟ ಡಾ. ವಿಷ್ಣುವರ್ಧನ್ ಅವರ ಸಮಾಧಿ ನೆಲಸಮ ಮಾಡಿರುವುದು ನಿಜಕ್ಕೂ ಅಭಿಮಾನಿಗಳಾದ ನಮಗೆ ಬೇಸರ ತಂದಿದೆ ರಾತ್ರೋ ರಾತ್ರಿ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನು ತೆರವು ಮಾಡಿರುವುದು ಕನ್ನಡ ನಾಡಿನ ಮೇರು ನಟ ಮತ್ತು ಕನ್ನಡ ಅಭಿಮಾನವಾಗಿ ಬದುಕು ನಡೆಸಿದ ನಟನ ಆದರ್ಶವನ್ನ ಮೆರೆಯಬೇಕಿದ್ದ ನೆಲದಲ್ಲಿ ಅಪಮಾನ ಮಾಡಿದಂತಾಗಿದೆ…. ಕನ್ನಡಕ್ಕಾಗಿ ದುಡಿದ ಹಿರಿಯ ನಟ ಅವರಿಗೆ ಕೊಡುವ ಮರ್ಯಾದೆ ಇಷ್ಟೆನಾ ಇದು ಸರಿಯಲ್ಲ ಅವರಿಗೆ ನ್ಯಾಯ ಸಿಗಬೇಕು ಅದೇ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದರು..
ಅಭಿಮಾನ್ ಸ್ಟುಡಿಯೋನಲ್ಲಿದ್ದ ವಿಷ್ಣುವರ್ಧನ್ ಅವರ ಪುಣ್ಯಭೂಮಿಯನ್ನು ನೆಲಸಮ ಮಾಡಲಾಗಿದೆ. ಇದು ಸಹಜವಾಗಿಯೇ ವಿಷ್ಣುವರ್ಧನ್ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಹಲವು ವರ್ಷಗಳಿಂದಲೂ ಅಭಿಮಾನ್ ಸ್ಟುಡಿಯೋನಲ್ಲಿ ವಿಷ್ಣುವರ್ಧನ್ ಸಮಾಧಿಯನ್ನು ಉಳಿಸಿಕೊಂಡು ಅಲ್ಲೊಂದು ಸ್ಮಾರಕ ನಿರ್ಮಾಣ ಮಾಡಲು ಅಭಿಮಾನಿಗಳು ಹೋರಾಡುತ್ತಲೇ ಇದ್ದರು. ಆದರೆ ಈಗ ಅಭಿಮಾನ್ ಸ್ಟುಡಿಯೋನಲ್ಲಿ ಇದ್ದ ಒಂದು ಕುರುಹನ್ನು ಒಡೆದು ಹಾಕಲಾಗಿದೆ. ಇದು ನಮಗೆ ನೋವು ತಂದಿದೆ.. ಕನ್ನಡಕ್ಕಾಗಿ ದುಡಿದು ಒಳ್ಳೆತನವನ್ನೇ ಮೈಗೂಡಿಸಿಕೊಂಡಿದ್ದ ಇಂತಹ ಕನ್ನಡ ಮೇರು ನಟನಿಗೆ ಇದು ಅವಮಾನ ಆದಂತಾಗಿದೆ ನಾವೆಲ್ಲರೂ ಸೇರಿ ಜಾಗಕ್ಕೆ ಎರಡರಷ್ಟು ಹಣವನ್ನು ಕೊಡುತ್ತೇವೆ ನಮ್ಮ ಡಾಕ್ಟರ್ ವಿಷ್ಣುವರ್ಧನ್ ಅವರ ಸಮಾಧಿ ನಿರ್ಮಾಣಕ್ಕೆ ಅವಕಾಶ ಕೊಡಿ ಎಂದು ರವಿ ಮನವಿ ಮಾಡಿದರು….
ಈ ಸಂದರ್ಭದಲ್ಲಿ ವಿಷ್ಣುಸೇನಾ ಅಭಿಮಾನಿಬಳಗ ಪದಾಧಿಕಾರಿಗಳಾದ ಪ್ರಕಾಶ್ ,ಇಮ್ರಾನ್ ,ತಿಪ್ಪೇಸ್ವಾಮಿ. ರವಿ ಇತರರು ಇದ್ದರು.

