ನಾಯಕನಹಟ್ಟಿ : ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿ ಎಂದು ರಾಜ್ಯಾಂದ್ಯಂತ ಪ್ರವಾಸ ಮಾಡಿ ಶ್ರಮವಹಿಸಿ ಕೆಲಸ ಮಾಡಿದ್ದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಜೆ.ಜಯಲಕ್ಷಿ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಕೂಡ ವಿದ್ಯಾವಂತ ಮಹಿಳೆ ನನ್ನ ಸ್ವ ಕ್ಷೇತ್ರ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬುಡಕಟ್ಟು ಸಮಾಜದ ಹೆಣ್ಣು ಮಗಳು ನಾನು ನನ್ನ ಕಣ್ಣಮುಂದೆ ನೂರಾರು ಜನ ಹೆಣ್ಣು ಮಕ್ಕಳಿಗೆ ತೊಂದರೆಯಾಗುತ್ತಿದೆ. ಮೊಳಕಾಲ್ಮೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಸರಿಯಾದ ವೈದ್ಯರು ಇಲ್ಲ. ಆಡಳಿತ ವ್ಯವಸ್ಥೆ ಕೂಡ ಸರಿಯಿಲ್ಲ. ಒಬ್ಬ ಅಧಿಕಾರಿಯೂ ರೋಗಿಗಳಿಗೆ ಸ್ಪಂದಿಸುತ್ತಿಲ್ಲ. ನಾನು ಒಬ್ಬ ಹೆಣ್ಣು ಮಗಳಾಗಿ ಹೆಣ್ಣು ಮಕ್ಕಳ ಪರವಾಗಿ ಧ್ವನಿ ಎತ್ತಿದ್ದಕ್ಕೆ ನನ್ನ ಫೆಸ್‌ಬುಕ್ ಖಾತೆಯಲ್ಲಿ ಹಾಕಿಕೊಂಡಾಗ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಎನ್.ವೈ.ಗೋಪಾಲಕೃಷ್ಣ ರವರು ಏಳು ಬಾರಿ ಗೆದ್ದಿದ್ದಾರೆ. ಅವರ ಮನೆಯ ಹತ್ತಿರ ಹೋದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಅವರ ಭಾಷೆಯನ್ನು ಕೇಳಿದರೆ ತುಂಬಾ ನೋವಾಗುತ್ತದೆ. ನಾನು ಅವರ ಮುಂದೆ ಹೋಗಿ ನಿಂತುಕೊಂಡು ಬೇಡಿಕೊಂಡು, ಬೈಯಿಸಿಕೊಂಡು ಬರಲು ಇಷ್ಟವಿಲ್ಲ. ಬಹಳ ವರ್ಷಗಳಿಂದ ನಾವುಗಳು ಹತ್ತಿರದಿಂದ ನೋಡಿದ್ದೇವೆ. ಸುಮಾರು 30 ವರ್ಷಗಳಿಂದ ಅವರ ವರ್ತನೆ ಹೇಗೆ ಎಂಬುವುದು ಕಣ್ಣಾರೆ ನೋಡಿದ್ದೇವೆ. ಆಗಾಗಿ ನನ್ನ ಸಾಮಾಜಿಕ ಜಾಲತಾಣದಲ್ಲಿ ಅಭಿವ್ಯಕ್ತ ಸ್ವಾತಂತ್ರದಿಂದ ಸರ್ಕಾರದ ಗಮನ ಸೇಳೆಯಲಿಕ್ಕೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನ ಸೇಳಿಯಲಿಕ್ಕೆ ಬರೆದುಕೊಂಡಿದ್ದೆ ಎಂದರು.

ನಮ್ಮ ಗ್ರಾಮದಲ್ಲಿ ಸ್ತಿ ರೋಗ ತಜ್ಞರು ಇಲ್ಲ, ತಾಲ್ಲೂಕಿನ ಗರ್ಭಿಣಿ ಹೆಣ್ಣು ಮಕ್ಕಳಿಗೆ ಹೆಚ್ಚು ಕಮ್ಮಿಯಾದರೆ ಕೇಳುವವರು ದಿಕ್ಕಿಲ್ಲ. ನನ್ನ ಸಾಮಾಜಿ ಜಾಲತಾಣದಲ್ಲಿ ಮನನೊಂದು ಬರೆದುಕೊಂಡಿದ್ದೆನೆ. ಸ್ತಿ ರೋಗ ವೈದ್ಯರನ್ನು ನೇಮಕ ಮಾಡಿಸಿ, ಏಳು ಬಾರಿ ಶಾಸಕರಾಗಿದ್ದಿರಿ ನಾನೇನು ಅವರ ತೋಜೊವಧೆ ಮಾಡಬೇಕೆಂಬುವ ಉದ್ದೇಶವಿರಲಿಲ್ಲ. ಆಡು ಬಾಷೆಯಲ್ಲಿ ಹೇಳುವಂತೆ ನನಗೆ ಮಕ್ಕಳು ಇದ್ದಿದ್ದರೆ ಗೊತ್ತಾಗುತ್ತಿತ್ತು ಅಂದರೆ ನಿಮ್ಮ ಮನೆಯಲ್ಲಿ ಹೆಣ್ಣು ಮಗು ಇದ್ದಿದ್ದರೆ ಗೊತ್ತಾಗುತ್ತಿತ್ತು ಅಂತ ಹೇಳಿದ್ದು ನಿಜ. ನಾನು ಅವರಿಗೆ ವೈಯಕ್ತಿಕ ನಿಂದನೆ ಮಾಡುವುದಾಗಲಿ ಅಥವಾ ತೇಜೋವಧೆ ಮಾಡುವಂತಹ ಉದ್ದೇಶವಿರಲಿಲ್ಲ. ಜನಪರ ಹಾಗೂ ಹೆಣ್ಣು ಮಕ್ಕಳ ಪರವಾಗಿ ಒಂದು ಪ್ರಶ್ನೆ ಮಾಡಿದೆ. ನಾನು ಒಬ್ಬ ಬುಡಕಟ್ಟು ಸಮುದಾಯದ ಹೆಣ್ಣು ಮಗಳಾಗಿ ಹೆಣ್ಣು ಮಕ್ಕಳ ಕಷ್ಟಗಳನ್ನು ಕಣ್ಣುತುಂಬಾ ನೋಡಿ ನನಗೆ ನೋವಾಗಿದೆ ಅದಕ್ಕೆ ಕೇಳಿದೆ. ಆ ಒಂದು ನೋವನ್ನು ಕೇಳಿದಕ್ಕೆ ಇವರು ಕೆಪಿಸಿಸಿಗೆ ನನ್ನ ವಿರುದ್ಧ ಅಷ್ಟು ಜನ ಹೋಗಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಹತ್ತಿರ ದೂರು ನೀಡಿದ್ದಾರೆ. ಕೆಪಿಸಿಸಿ ಮಹಿಳಾ ಅಧ್ಯಕ್ಷೆ ವಿದ್ಯಾವಂತೆನಾ? ಅಯಮ್ಮ ಏನು ಓದಿದ್ದಾರೆ ಗೊತ್ತಿಲ್ಲ! ಸೌಮ್ಯರೆಡ್ಡಿ ಹತ್ತಿರ ನನ್ನನ್ನು ಮೆಂಟೆಲ್ ಕೇಸ್ ಅಂತ ಹೇಳಿಸಿದ್ದಾರೆ. ನಾನು ಮೆಂಟೆಲ್ ಹೌದು, ಇಲ್ಲ ಎಂದು ಸರ್ಟೀಫಿಕೆಟ್ ನೀಡುವವರು ಡಾಕ್ಟರ್, ಸೌಮ್ಯರೆಡ್ಡಿ ಡಾಕ್ಟರ್ ಹೌದಾ, ಇಲ್ಲ ಗೊತ್ತಿಲ್ಲ. ಅವರಿಗೆ ನನ್ನನ್ನು ಮೆಂಟೆಲ್ ಕೇಸ್ ಎನ್ನಲಿಕ್ಕೆ ಯಾವುದೇ ಅಧಿಕಾರ ಇಲ್ಲ. ನನಗೆ ತುಂಬಾ ನೋವಾಗಿದೆ ಯಾಕೇಂದರೆ ಬುಡಕಟ್ಟು ಸಮಾಜದಲ್ಲಿ ರಾಜಕೀಯವಾಗಿ ಮಹಿಳೆಯರು ಮುಂದೆ ಬರುವುದು ಕಷ್ಟ ಅಂತವುದರಲ್ಲಿ ನಾನು ನನ್ನ ವೈಯಕ್ತಿಕ ಜೀವನವನ್ನು ತೊರೆದು, ನನ್ನ ಸರ್ಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ನನ್ನ ಸಮುದಾಯ ಗುಡ್ಡಗಾಡು ಜನರು ಎಷ್ಟು ಕಷ್ಟ ಪಡುತ್ತಿದ್ದಾರೆ ಎಂದು ಅವರಿಗೆ ನನ್ನ ಕೈಲಾದಷ್ಟು ಸಹಾಯ ಮಾಡಬೇಕೆಂದು ಬಂದಿರುವವಳು. ಸಾಮಾಜಿಕ ಹೋರಾಟಗಾರ್ತಿ ವರ್ಷಪೂರ್ತಿ ನಿರಂತರ 24 ಗಂಟೆನೂ ಕೆಲಸ ಮಾಡುವಂತಹ ಮಹಿಳೆ ನಾನು. ನನ್ನಂತಹ ಕಾಂಗ್ರೆಸ್ ಕಾರ್ಯಕರ್ತೆಯನ್ನು ಅವಹೇಳನ ಮಾಡುತ್ತಾರೆ ಎಂದರೆ ನಾನು ಸಹ ಕಾನೂನು ಪದವಿದರೆ, ನನಗೆ ನೋವಾಗಿದೆ ಎಲ್ಲಾ ಮಾದ್ಯಮಗಳಲ್ಲಿ ಪ್ರಸಾರಗೊಂಡಿದೆ. ನನ್ನ ತಾಲೂಕಿನಲ್ಲಿ, ಸಮಾಜದಲ್ಲಿ, ಹೇಗೆ ತಲೆ ಎತ್ತಿ ಜೀವಿಸಬೇಕು. ಸೌಮ್ಯರೆಡ್ಡಿ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಲಾಗುವುದು ಜೊತೆಗೆ ಕಾನೂನು ಕ್ರಮ ಕೂಡ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ನಂತರ ಕಾನೂನು ಪ್ರಕಾರ ನನ್ನ ಬಗ್ಗೆ ಮಾತನಾಡಲು ಯಾವ ಅಧಿಕಾರವಿಲ್ಲ, ನನಗೆ ನೋಟೀಸ್ ಜಾರಿಗೊಳಿಸಬಹುದಿತ್ತು. ಪಕ್ಷದ ವ್ಯಾಪ್ತಿಯಲ್ಲಿ ಕೇಳಬಹುದಿತ್ತು. ಸಾರ್ವಜನಿಕವಾಗಿ ನನ್ನನ್ನು ನಿಂದಲಿಸಲಿಕ್ಕೆ ನೂರಾರು ಜನ ಶಾಸಕ ಬೆಂಬಲಿಗರು ಹೋಗಿದ್ದಾರೆ. ಅಂತವರ ಮಧ್ಯೆ ನನ್ನನ್ನು ಅವಹೇಳನಕಾರಿಯಾಗಿ ಮಾತನಾಡಿರುವುದು ನನಗೆ ನೋವಾಗಿದೆ, ಅವಮಾನವಾಗಿದೆ, ದುಖಃವಾಗಿದೆ. ಸಮಾಜದಲ್ಲಿ ಘನತೆ ಇರುವಂತಹ ಕುಟುಂಬದಿಂದ ಬಂದಿರುವಂತಹ ವಿದ್ಯಾವಂತೆ ನಾನು ನನ್ನ ತಂದೆ, ತಾಯಿ, ಬಂಧು ಬಳಗದವರಿಗೆ ನೋವಾಗಿದೆ ಅದಕ್ಕೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಯಾರು ಯಾರು ಹೋಗಿದ್ದರು ಸೌಮ್ಯರೆಡ್ಡಿ ಬಾಯಿಯಲ್ಲಿ ಮೆಂಟೆಲ್ ಅನ್ನಿಸಿದರು ಅವರ ವಿರುದ್ಧ ಸಹ ಕಾನೂನು ಹೋರಾಟ ನಡೆಸಲಾಗುವುದು, ಹಿಂದೆ ನಿಂತು ಚಪ್ಪಾಳೆ ಹೊಡೆದು ನಕ್ಕರು ಅವರ ವಿರುದ್ಧ ಸಹ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

About The Author

Namma Challakere Local News
error: Content is protected !!