ನಾಯಕನಹಟ್ಟಿ ಪಟ್ಟಣದಲ್ಲಿ ಶ್ರೀ ಹಟ್ಟಿ ಮಲ್ಲಪ್ಪ ನಾಯಕ ಸಂಘ ಹಾಗೂ ಹೋಬಳಿಯ ಸಮಸ್ತ ನಾಯಕ ಸಮುದಾಯ ವತಿಯಿಂದ ಮಹಾಋಷಿ ವಾಲ್ಮೀಕಿ ಪುತ್ಥಳಿ ಭೂಮಿ ಪೂಜೆ ಅದ್ದೂರಿಯಾಗಿ ನೆರವೇರಿಸಿದರು.
ಇದೇ ವೇಳೆ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಾಟೀಲ್ ಜಿಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ಮಾತನಾಡಿ, ಮಹರ್ಷಿ ವಾಲ್ಮೀಕಿಯನ್ನು ಹಿಂದೂ ಧರ್ಮದವ ಪ್ರತಿಯೊಂದು ಜಾತಿ ಜನಾಂಗದವರು ಪೂಜಿಸುತ್ತಾರೆ. ರಾಮಾಯಣ ಮಹಾ ಕಾವ್ಯದ ಸೃಷ್ಟಿಕರ್ತ ಎನಿಸಿಕೊಂಡಿರುವ ಇವರನ್ನು ನಾವು ಪೂಜ್ಯನೀಯ ಭಾವನೆಯೊಂದಿಗೆ ಕಾಣುತ್ತಿದ್ದೇವೆ, ಎರಡು ವರ್ಷಗಳ ಸತತ ಪ್ರಯತ್ನದಿಂದಾಗಿ ನಾಯಕನಹಟ್ಟಿ ಪಟ್ಟಣದಲ್ಲಿ ಪುತ್ತಳಿ ನಿರ್ಮಾಣ ಮಾಡಲು ಮುಂದಾಗಿದ್ದೇವೆ, ಇಂದು ನಡೆಯುತ್ತಿರುವ ಭೂಮಿ ಪೂಜೆ ಕಾರ್ಯಕ್ರಮ ಶೀಘ್ರದಲ್ಲಿ ಪುತ್ತಳಿ ನಿರ್ಮಾಣ ಪೂರ್ಣಗೊಳ್ಳಬೇಕು, ವಾಲ್ಮೀಕಿ ಜಯಂತಿಗೆ ಕೆಲವೇ ದಿನಗಳು ಬಾಕಿ ಇದ್ದು ಜಯಂತಿಯ ಆಚರಣೆ ವೇಳೆಗೆ ಪುತ್ತಳಿ ನಿರ್ಮಾಣವಾಗಬೇಕು. ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯಲ್ಲಿ ನಾಯಕ ಸಮುದಾಯದ ಜನಾಂಗ ಹೆಚ್ಚಿದ್ದು ಪ್ರತಿಯೊಬ್ಬರೂ ಪುತ್ತಳಿ ನಿರ್ಮಾಣಕ್ಕೆ ಸಹಕರಿಸಬೇಕು ಎಂದರು.
ಸಂದರ್ಭದಲ್ಲಿ ನಾಯಕನಹಟ್ಟಿ ಹೋಬಳಿಯ ಸಮಸ್ತ ನಾಯಕ ಸಮುದಾಯದ ಮುಖಂಡರು ಯುವಕರು ಮಹಿಳೆಯರು ಸೇರಿದಂತೆ ಇದ್ದರು

