ಚಳ್ಳಕೆರೆ : ನಾವು ಇಲ್ಲಿ ರಾಜಕಾರಣ ಮಾಡಲು ಬಂದಿಲ್ಲ ಸಾರ್ವಜನಿಕರ ಆರೋಗ್ಯದ ಮೇಲೆ ಆಗುವಂತ ದುಷ್ಪರಿಣಾಮಗಳನ್ನು ತಡೆಗಟ್ಟಲು ಇಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದೇವೆ. ಆದರೆ ಕಾಂಗ್ರೆಸ್‌ನ ಕಾರ್ಯಕರ್ತರು ಸುಖ ಸುಮ್ಮನೆ ಬಿಜೆಪಿಯ ಮೇಲೆ ಗೂಬೆಕೂರಿಸುವುದು , ಅಜ್ಞಾನಿಗಳ ತರ ಮಾತನಾಡುತ್ತಿದ್ದಾರೆ ಎಂದು ತಾಲ್ಲೂಕು ಮಂಡಲ ಅಧ್ಯಕ್ಷ ಸುರೇಶ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮಾತಿಗೆ ತಿರುಗೇಟು ನೀಡಿದರು.
ಅವರು ನಗರದ ಪಾವಗಡ ರಸ್ತೆಯ ರೈಲ್ವೆ ನಿಲ್ದಾಣ ಸಮೀಪ ಎರಡು ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸ್ಥಳೀಯ ಶಾಸಕರು ಕ್ಷೇತ್ರದ ಮತದಾರರಿಗೆ ಮೈನಿಂಗ್ ಧೂಳಿನ ದುಷ್ಪರಿಣಾಮ ಉಂಟುಮಾಡುವುದು ಮತದಾರರ ಆರೋಗ್ಯದ ಮೇಲೆ ಚೆಲ್ಲಾಟ ಆಡುವುದು ಸರಿಯಲ್ಲ, ಈ ಕೂಡಲೇ ಮೈನಿಂಗ್ ಡಂಪಿಂಗ್ ಯಾರ್ಡನ್ನು ಸ್ಥಳಾಂತರಿಸಿಗೊಳಿಸಬೇಕು ಸುಖ ಸುಮ್ಮನೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಎಂದು ಗೂಬೆ ಕೂರಿಸುವ ಬದಲು ಸ್ಥಳೀಯವಾಗಿ ನಿಮ್ಮ ಸಹಕಾರವಿಲ್ಲದೆ ತಾಲೂಕಿನಲ್ಲಿ ಇಂತಹ ಕೆಲಸಗಳು ಜರುಗುವುದು ಸಾಧ್ಯವಿಲ್ಲ, ಇನ್ನು ಪ್ರತಿ ಇಲಾಖೆಯಲ್ಲೂ ಕಾಂಗ್ರೆಸ್ ಪಕ್ಷದ ಶಾಸಕರು ಅಧಿಕಾರಿಗಳನ್ನು ಕೈಗೊಂಬೆಯಾಗಿಸಿಕೊಂಡು ಸಾರ್ವಜನಿಕ ಕೆಲಸಗಳಿಗೆ ಹಿನ್ನಡೆಯನ್ನು ಉಂಟುಮಾಡುತ್ತಾರೆ.
ಇನ್ನು ಶಾಸಕರ ಭವನವನ್ನು ಕಾಂಗ್ರೆಸ್ ಪಕ್ಷದ ಕಚೇರಿಯನ್ನಾಗಿ ಮಾಡಿಕೊಂಡಂತಹ ನಿಮ್ಮ ಕಾರ್ಯಕರ್ತರಿಗೆ ಬುದ್ಧಿ ಹೇಳುವಂತಹ ನೈತಿಕ ಹೊಣೆಗಾರಿಕೆ ಶಾಸಕರು ಹೊರಬೇಕಾಗಿದೆ ಎಂದು ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವಂತಹ ಕೆಲಸ ಇನ್ನಾದರೂ ಮಾಡದೆ ತ್ವರಿತವಾಗಿ ಮೈನಿಂಗ್ ಡಂಪಿಂಗ್ ಯಾರ್ಡ್ ಸ್ಥಳಾಂತಸಗೊಳಿಸಬೇಕು,
ರೈತರ ಬೆಳೆಗಳು ಮೈನಿಂಗ್ ದೂಳಿನಿಂದ ಹಾಳಾಗುತ್ತಿವೆ. ಇನ್ನು ಮನುಷ್ಯರ ಮೇಲೆ ಮೈನಿಂಗ್ ಧೂಳು ಪ್ರಭಾವ ಬೀರುತ್ತದೆ. ಶಾಸಕರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸುವುದು ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಶೋಭೆಯಲ್ಲ ,
ಸ್ಥಳೀಯ ಶಾಸಕರ ಕುಮ್ಮಕ್ಕಿಲ್ಲದೆ ತಾಲೂಕಿನಲ್ಲಿ ಯಾವುದೇ ಕೆಲಸ ಕಾರ್ಯಗಳು ಜರಗುವುದಿಲ್ಲ ರೈಲ್ವೆ ನಿಲ್ದಾಣದಲ್ಲಿ ಮೈನಿಂಗ್ ಡಂಪಿಂಗ್ ಯಾರ್ಡ್ ಮಾಡಿರುವುದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಇದನ್ನು ಮನಗಂಡಿದ್ದರು ಇದಕ್ಕೆ ಸಹಕರ ಕೊಟ್ಟಂತ ಸ್ಥಳೀಯ ಶಾಸಕರು ನೈತಿಕ ಹೊಣೆ ಹೊರಬೇಕು ಎಂದು ಬಿಜೆಪಿ ಮುಖಂಡ ಈಶ್ವರ್ ನಾಯ್ಕ್ ಆಕ್ರೋಶ ವ್ಯಕ್ತಪಡಿಸಿದರು
ಬಿಜೆಪಿ ಮುಖಂಡ ಚಿದಾನಂದ ಮಾತನಾಡಿ,
ಸ್ಥಳೀಯ ಶಾಸಕರು ನಗರದಲ್ಲಿ ಮೂಲಭೂತ ಸೌಲಭ್ಯಗಳು ಕೊಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಕೇವಲ ಸಮುದಾಯ ಭವನಗಳನ್ನು ಕಟ್ಟಿಸಿದರೆ ಸಾಲದು ಮೂಲಭೂತವಾಗಿ ಚರಂಡಿ, ರಸ್ತೆ ಬೀದಿ ದೀಪಗಳನ್ನು ಸಾರ್ವಜನಿಕರಿಗೆ ಅಗತ್ಯ ಇರುವಂತಹ ಸೌಲಭ್ಯಗಳನ್ನು ದೊರಕಿಸಿ ಕೊಡುವುದು ಅವರ ಕರ್ತವ್ಯ ಇಂತಹ ಸಮಸ್ಯೆಗಳ ಮಧ್ಯೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುವಂತೆ ಮಾಡಿಸಿರುವುದು ಖಂಡನೀಯ.
ಈ ಕೂಡಲೇ ಶಾಸಕರು ಸ್ಥಳಾಂತರಸಲು ಸೂಚಿಸಬೇಕು ಎಂದು ಒತ್ತಾಯಿಸಿದರು.
ಇನ್ನೂ ಬಿಜೆಪಿ ಮುಖಂಡ ಡಾ. ರಾಜಾರಾಮ್ ಮಾತನಾಡಿ ಮೈನಿಂಗ್ ಡಂಪಿಂಗ್ ಯಾರ್ಡ್ ನಲ್ಲಿ ಮುಗಿಲೆತ್ತರಕ್ಕೆ ಹೋಗುವ ಧೂಳಿನ ಕಣಗಳು ಜನರ ಮೇಲೆ ಮಕ್ಕಳ ಮೇಲೆ ದುಷ್ಪರಿಣಾಮ ಉಂಟಾಗಿ ಹೃದಯ ಸಂಬಂಧಿತ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ.
ಆದ್ದರಿಂದ ನಿರ್ಜನ ಪ್ರದೇಶದಲ್ಲಿ ಡಬ್ಬಿಂಗ್ ಯಾರ್ಡ್ ಮಾಡಬೇಕು ದೂಳಿನ ಕಣಗಳು ಮನುಷ್ಯನ ಶ್ವಾಸಕೋಶ ಹೃದಯ ಸಂಬಂಧಿ ಕಾಯಿಲೆ, ಹೀಗೆ ಕುಡಿಯುವ ನೀರಿನಲ್ಲಿ ತಿನ್ನುವ ಆಹಾರದಲ್ಲಿ ಸೇರಿದರೆ ಮನುಷ್ಯನಿಗೆ ಅಪಾಯಕಾರಿ ಕಟ್ಟಿಟ್ಟ ಬುತ್ತಿ. ಆದ್ದರಿಂದ ಮೈನಿಂಗ್ ಯಾರ್ಡ್ ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಧರಣಿ ಸ್ಥಳದಲ್ಲಿ ಹಾಜರಿದ್ದ ಬಿಜೆಪಿ ಜಿಲ್ಲಾ ಅಧ್ಯಕ್ಷ ಕೆ ಟಿ ಕುಮಾರಸ್ವಾಮಿ, ನಾಯಕನಹಟ್ಟಿ ಮಂಡಲ ಅಧ್ಯಕ್ಷ ಮಲ್ಲೇಶ್ , ರಾಮದಾಸ್, ರಾಮರೆಡ್ಡಿ, ಮಂಜುನಾಥ್, ವೀರೇಶ್, ಅಲ್ಪಸಂಖ್ಯಾತ ಮೋರ್ಚಾದ ಮಂಡಲ ಅಧ್ಯಕ್ಷ ಚನ್ನಗಾನಹಳ್ಳಿಬಾಬು, ದಿನೇಶ್ ರೆಡ್ಡಿ ,ಸಣ್ಣ ಸೂರಯ್ಯ, ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಲಕ್ಷ್ಮಣ್, ಹಾಗೂ ಇತರರು ಮಹಿಳಾ ಕಾರ್ಯಕರ್ತರು ಧರಣಿ ನಿರತರಾಗಿದ್ದರು.


