ಚಳ್ಳಕೆರೆ :
ಇಂದಿನ ಆಧುನಿಕತೆಗೆ ತಕ್ಕಂತೆ ಶೈಕ್ಷಣಿಕವಾಗಿ ಆಂಗ್ಲ ಭಾಷೆಯನ್ನು ಗ್ರಾಮೀಣ ಭಾಗದ ಮಕ್ಕಳು ಕಲಿಯಬೇಕು ಎನ್ನುವ ಮಹತ್ವಾಕಾಂಕ್ಷೆಯೊಂದಿಗೆ ಆಂಗ್ಲ ಮಾಧ್ಯಮ ಶಿಕ್ಷಣ ತೆರೆಯಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಹೇಳಿದರು.
ಅವರು ತಾಲೂಕಿನ ಘಟಪರ್ತಿ ಕ್ಲಸ್ಟರ್ ನ ಹೊನ್ನುರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಗೆ ಆಂಗ್ಲ ಭಾಷೆಯ ಶಿಕ್ಷಣ ವನ್ನು 2025 ನೇ ಸಾಲಿನ ಪ್ರಸ್ತುತ ವರ್ಷ ಪ್ರಾರಂಬಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳು ಪ್ರಾಥಮಿಕ ಹಂತದಿಂದ ಆಂಗ್ಲ ಮಾಧ್ಯಮ ಶಿಕ್ಷಣ ಪಡೆದರೆ ಮುಂದೆ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುತ್ತದೆ ಆದ್ದರಿಂದ ಪೋಷಕರು ಕನ್ನಡ ಭಾಷೆಯ ಜೊತೆಗೆ ದ್ವಿಭಾಷಾ ಆಂಗ್ಲ ಮಾಧ್ಯಮ ಶಿಕ್ಷಣ ಕೊಡಿಸಬೇಕು ಎಂದರು
ಇದೇ ಸಂಧರ್ಭದಲ್ಲಿ ಶಿಕ್ಷಣ ಸಂಯೋಜಕ ಮಾರುತಿ ಭಂಡಾರಿ, ಬಿ ಆರ್ ಸಿ ತಿಪ್ಪೇಸ್ವಾಮಿ, ಘಟಪರ್ತಿ ಕ್ಲಸ್ಟರ್ ನ ಸಿಆರ್ ಟಿ ಶಿವಣ್ಣ, ಎಸ್ ಡಿಎಂಸಿ ಅಧ್ಯಕ್ಷ ಗುರುಸ್ವಾಮಿ, ಮುಖ್ಯ ಶಿಕ್ಷಕ ನಾರಾಯಣರೆಡ್ಡಿ, ರವಿಕುಮಾರ್, ಲೋಕೇಶ್, ಹೊನ್ನುರು ಮಾರಣ್ಣ, ಇತರರು ಪೋಷಕರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.

