ಅವರು ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಆವರಣದಲ್ಲಿ ನಡೆದ 2025-26ನೇ ಸಾಲಿನ ತಾಲ್ಲೂಕು ಮಟ್ಟದ ಪ್ರಾಥಮಿಕ ಶಾಲೆಯ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ದೊಡ್ಡದೊಡ್ಡ ಗುರಿಗಳನ್ನು ಇಟ್ಟುಕೊಂಡು ಜೀವನದಲ್ಲಿ ಉತ್ತಮ ಕ್ರೀಡಾಪಟುವಾಗಬಹುದು. ಜೊತೆಗೆ ಕ್ರೀಡೆಗಳಿಂದ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ದಿಯಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಒಂದಲ್ಲಾ ಒಂದು ಕ್ರೀಡೆಯಲ್ಲಿ ಆಸಕ್ತಿ ಬೆಳಸಿಕೊಳ್ಳಬೇಕು. ಕ್ರೀಡೆಗಳನ್ನು ಹಾಡುವುದರಿಂದ ದೃಢ ಶರೀರದ ಜೊತೆಗೆ ಆರೋಗ್ಯವಂತ ಮನಸ್ಸು ನಿರ್ಮಾಣವಾಗುತ್ತೆದೆ. ಕ್ರೀಡೆಯಲ್ಲಿ ಶ್ರದ್ದೆ, ದೃಡ ನಿರ್ಧಾರ, ನಿಶ್ಚಯ ಸಮರ್ಪಣೆ ಅತ್ಯಗತ್ಯ, ಉತ್ತಮ ಕ್ರೀಡಾಪಟುವಾಗಲು ದೇಹದ ಸಾಮಥ್ಯದೊಂದಿಗೆ ಸಕಾರಾತ್ಮಕ ಭಾವನೆ ಅತ್ಯಗತ್ಯ ಆಹಾರ, ವ್ಯಾಯಾಮ, ವಿಶ್ರಾಂತಿಗಳೆರೆಡೂ ಹಿಡಿತದಲ್ಲಿಟ್ಟು ಕೊಳ್ಳಬೇಕು.

ಸರ್ಕಾರವು ಸಹ ಕ್ರೀಡೆಗಳಿಗೆ ಹೆಚ್ಚಿನ ಹೋತ್ತು ನೀಡುತ್ತಿದೆ. ಪ್ರತಿಭೆ ಮತ್ತು ಏಕಾಗ್ರತೆ, ಇದ್ದಲ್ಲಿ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದರು.

ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರಾದ ಸುನಿಲ್ ನಾಯ್ಕ್,
ಮುಖ್ಯ ಶಿಕ್ಷಕ ಪಾಲಯ್ಯ, ಇತರ ಶಿಕ್ಷಕರು, ಮಕ್ಕಳು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!