ಚಳ್ಳಕೆರೆ :
50,000 ಹಣ ಹಾಗೂ ದಾಖಲಾತಿ ಇರುವ ಚಿಕ್ಕ ಬ್ಯಾಗನ್ನು ಮರಳಿ ನೀಡಿ ಮಾನವೀಯತೆ ಮೆರೆದ ಮುಖಂಡ
ಚಳ್ಳಕೆರೆ: ರಸ್ತೆಯಲ್ಲಿ 10 ರೂಪಾಯಿ ಸಿಕ್ರು ಸಹ ವಾಪಸ್ ಕೊಡದಂತಹ ಈ ಕಾಲದಲ್ಲಿ ತನಗೆ ಸಿಕ್ಕ 50.000 ರೂಪಾಯಿ ಹಾಗೂ ದಾಖಲಾತಿಗಳ ವಾಪಾಸ್ ನೀಡುವ ಮೂಲಕ ಮಾನವೀಯತೆ ಮೆರೆದ ಕಾಂಗ್ರೆಸ್ ಮುಖಂಡ ನಗರಗೆರೆ ರಂಗನಾಥ್…
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಸಮೀಪ ಎಸ್ ಆರ್ ಎಸ್ ಶಾಲಾ ಬಳಿ ಗೋವರ್ಧನ ಎನ್ನು ವ್ಯಕ್ತಿ ಬ್ಯಾಗಿನಲ್ಲಿ 50,000 ಹಾಗೂ ದಾಖಲಾತಿಗಳನ್ನ ಇಟ್ಟುಕೊಂಡು ಶಾಲೆಯಿಂದ ಮಗಳನ್ನು ಕರೆದುಕೊಂಡು ಬರುವ ವೇಳೆ ಬೈಕಲ್ಲಿದ್ದ ಬ್ಯಾಗು ಶಾಲಾ ಮುಂದೆ ಬಿಳಿಸಿಕೊಂಡು ಹೋಗಿದ್ದು .ಇದೆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಗಳನ್ನ ಕರೆದುಕೊಂಡು ಬರಲು ಬಂದುದ್ದ ಕಾಂಗ್ರೇಸ್ ಮುಖಂಡ ರಂಗನಾಥ ಕೈಗೆ 50.000 ಸಾವಿರ ಹಣ ಹಾಗೂ ಹಲವು ದಾಖಲಾತಿ ಇರುವ ಬ್ಯಾಗ್ ಸಿಕ್ಕಿದ್ದು ತಕ್ಷಣವೇ ಆ ಬ್ಯಾಗನ್ನು ಚಳ್ಳಕೆರೆ ಪೊಲೀಸ್ ಠಾಣೆಗೆ ತಂದು. ಕಳೆದುಕೊಂಡ ವ್ಯಕ್ತಿಯನ್ನ ಹುಡುಕಿ ಪೋಲಿಸ್ ಸಬ್ ಇನ್ಸ್ಪೆಕ್ಟರ್. ಈರೇಶ್ ಹಾಗೂ ಧರಪ್ಪ ಇವರ ಮುಖಾಂತರ ಬ್ಯಾಗ್ ಕಳೆದುಕೊಂಡ ಗೋವರ್ಧನ ಇವರಿಗೆ ವಾಪಸ್ ನೀಡಿ ಮಾನವೀಯತೆ ಮೆರೆದಿದ್ದಾರೆ…
ಬ್ಯಾಗು ಹಾಗು ಹಣ ನೀಡಿದ ರಂಗನಾಥನಿಗೆ ಗೋವರ್ಧನ ಹಾಗೂ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ…

