ಚಳ್ಳಕೆರೆ :
ಮೊಳಕಾಲ್ಕೂರು: ಸಂತೆ ಜಾಗಕ್ಕೆ ಹೈ ಕೋರ್ಟ್ ನಿಂದ
ಮಧ್ಯಂತರ ಆದೇಶ
ಮೊಳಕಾಲ್ಮುರಿನಲ್ಲಿ ಸಂತೆ ನಡೆಯುವ ಜಾಗ ತನ್ನದೆಂದು
ವ್ಯಕ್ತಿಯೊಬ್ಬ, ಹೈಕೋರ್ಟಿನಿಂದ ಮಧ್ಯಂತರ ಆದೇಶ ತಂದಿರುವ
ಹಿನ್ನೆಲೆಯಲ್ಲಿ ಸಂತೆಯಲ್ಲಿಂದು ವ್ಯಾಪಾರಸ್ಥರು ಪರದಾಡುವ
ಸ್ಥಿತಿ ನಿರ್ಮಾಣವಾಗಿತ್ತು. ಎರಡು ವರ್ಷದ ಹಿಂದೆ ಪ ಪಂ
ಪಕ್ಕದ ಜಾಗದಲ್ಲಿ ಸಂತೆ ನಡೆಸಲು ಜಾಗ ಗುರುತಿಸಲಾಗಿತ್ತು.
ಸಂತೆಯೂನಡೆಯುತ್ತಿತ್ತು. ಆದರೆ ಲಕ್ಷ ನಾರಾಯಣ್ ಎನ್ನವ ವ್ಯಕ್ತಿ
ಈ ಜಾಗ ನನ್ನದೆಂದು ಹೈ ಕೋರ್ಟ್ ನಿಂದ ಮಧ್ಯಂತರ ಆದೇಶ
ತಂದಿದ್ದಾನೆ. ಕೋರ್ಟ್ ಜಾಗ ಯಥಾ ಸ್ಥಿತಿ ಕಳೆದುಕೊಳ್ಳುವಂತೆ
ಆದೇಶಿಸಿದೆ.

