filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 36;

ಮಳೆ ಬಾರದೆ
ಹಿಂದಿನಿಂದಲೂ ಬರಗಾಲದ ಪ್ರದೇಶವೆಂಬ ಹಣೆ
ಪಟ್ಟಿ ಕಟ್ಟಿಕೊಂಡು ರಾಜ್ಯದಲ್ಲಿ ಖ್ಯಾತಿ ಪಡೆದಿದ್ದರೆ
ಇನ್ನೊಂದೆಡೆ ನಗರ ವನ್ನು ತಂಪಾಗಿಟ್ಟಿದ್ದರೆ
ಅದು ರಸ್ತೆ ಬದಿಯಲ್ಲಿರುವ ಮರಗಳು ಮಾತ್ರ ಉಳಿದಿದ್ದವು.

ಕಳೆದ 20
ವರ್ಷಗಳಿಂದ ರಸ್ತೆ ಬದಿಯಲ್ಲಿ ನೆಟ್ಟ ಮರಗಳು
ಹೆಮ್ಮರವಾಗಿದ್ದು, ಈಗ ತಂಪು ನೀಡುವುದಲ್ಲದೇ,
ಪುಟ್ಟ ಪ್ರಾಣಿ ಪಕ್ಷಿಗಳಿಗೂ ಆಸರೆಯಾಗಿವೆ.
ಕಾಂಕ್ರಿಟ್ ಕಾಡಿನ ನಡುವೆ ಅಳಿದುಳಿದ
ಮರಗಳು ಜನರಿಗೆ ನೆಮ್ಮದಿ ತಂದಿದೆ.
ಆದರೆ ನಗರ ಬೆಳೆದಂತೆಲ್ಲ ರಸ್ತೆಗಳ ವಿಸ್ತರಣೆ
ಅನಿವಾರ್ಯವಾಗುತ್ತಿದ್ದು, ಅನಿವಾರ್ಯವಾಗಿ
ರಸ್ತೆ ಬದಿಯ ಮರವನ್ನು ಕಡಿಯುವುದು
ಅನಿವಾರ್ಯವಾಗುತ್ತಿದೆ.

ಸುಮಾರು ವರ್ಷಗಳಿಂದ ಹೆಮ್ಮರವಾಗಿ ಬೆಳೆದುನಿಂತ ಮರಗಳು ನೆಲಕ್ಕೆ ಉರುಳಿದ್ದರಿಂದ ಪರಿಸರ ಪ್ರೇಮಿಗಳ ಆಕ್ರೋಶ ವ್ಯಾಪಕವಾಗಿ ಚರ್ಚೆ ನಡೆಯುತ್ತಿದೆ.

ಈಗಾಗಲೇ ನಗರದ ಬೆಂಗಳೂರು ರಸ್ತೆ
ಅಗಲೀಕರಣಕ್ಕೆ ಮರಗಳ ಮಾರಣ ಹೋಮ
ನಡೆದಿತ್ತು ಈಗ ಬಳ್ಳಾರಿ ರಸ್ತೆಯ ಸರದಿ
ಬಂದಿದ್ದು ನಗರದ ಎಚ್‌ಪಿ ಪೆಟ್ರೋಲ್ ಬಂಕ್
ಓಂ ಶಿವ ಕಾಂಪ್ಲೆಕ್ಸ್ ಮುಂಬಾಗದಲ್ಲಿ ರಸ್ತೆ
ಅಗಲೀಕರಣಕ್ಕಾಗಿ ಮರಗಳನ್ನು ಕಡಿಯುತ್ತಿದ್ದು
ಪರಿಸರ ಪ್ರೇಮಿಗಳ ನಿದ್ದೆಗೆಡಿಸಿದೆ.

ಚಿಗುರಿ
ಹಸಿರಿನಿಂದ ನಳನಳಿಸುತ್ತಿದ್ದ ಮರಗಳು
ರಸ್ತೆಗುರುಳಿದ್ದು ಅದನ್ನು ನೋಡಿದವರು ಬೇಸರ
ವ್ಯಕ್ತಪಡಿಸುತ್ತಿದ್ದಾರೆ.ನಗರಸಭೆ ವತಿಯಿಂದ
ರಸ್ತೆ ಅಗಲೀಕರಣ ನಡೆಯುತ್ತಿದ್ದು, ಸುಮಾರು
50 ಮೀಟರ್ ಉದ್ದದ ರಸ್ತೆಯನ್ನಾಗಿ
ಪರಿವರ್ತನೆ ಮಾಡುವ ಸಲುವಾಗಿ ರಸ್ತೆ ಬದಿಯಲ್ಲಿ
ಬೆಳೆದಿದ್ದ ಸುಮಾರು 80 ಮರಗಳನ್ನು ಕಡಿಯಲಾಗಿದೆ ಎಂದು
ಹೇಳಲಾಗುತ್ತಿದೆ.

ನಗರದಲ್ಲಿ ರಸ್ತೆ ಅಗಲೀಕರಣಕ್ಕೆ ಅನಿವಾರ್ಯ ವಾಗಿ ಮರಗಳನ್ನು ಕತ್ತರಿಸಬೇಕಾಗುತ್ತದೆ‌ ಅದರ ಬದಲಾಗಿ ಖಾಲಿ ಜಾಗದಲ್ಲಿ ಗಿಡಗಳನ್ನು ನೆಡುವ ಪಧ್ಧತಿ ಹಾಗೂ ರಸ್ತೆ ಅಗಲೀಕರಣ ಆದ ನಂತರ ರಸ್ತೆ ಪಕ್ಕದ ಪುಟ್ ಬಾತ್ ಮೇಲೆ ಗಿಡಗಳನ್ನು ನೆಡೆಸಲು ಯೋಜನೆ ರೂಪಿಸಲಾಗುತ್ತದೆ ಎಂದು ನಗರಸಭೆ ಇಂಜಿನಿಯರ್ ವಿನಯ್, ಪ್ರಾದೇಶಿಕ ವಲಯ ಅರಣ್ಯಧಿಕಾರಿ ಮಂಜುನಾಥ್ ಹೇಳುತ್ತಾರೆ.

About The Author

Namma Challakere Local News
error: Content is protected !!