ಚಳ್ಳಕೆರೆ:ಮಕ್ಕಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಬಿತ್ತನೆಗೆ ಶಾಲಾ ಸಂಸತ್ ಚುನಾವಣೆ ಸಹಕಾರಿ ಎಂದು ಹೆಗ್ಗೆರೆ ತಾಯಮ್ಮ ಸರ್ಕಾರಿ ಬಾಲಕಿಯರ ಪ್ರೌಡಶಾಲೆಯ ಮುಖ್ಯಶಿಕ್ಷಕ ಎ.ವೀರಣ್ಣ ತಿಳಿಸಿದರು.

ನಗರದ ಹೆಗ್ಗೆರೆ ತಾಯಮ್ಮ ಬಾಲಕಿಯರ ಪ್ರೌಡಶಾಲೆಯಲ್ಲಿ
2025 26 ನೇ ಸಾಲಿನ ಶಾಲಾ ಸಂಸತ್ ಚುನಾವಣೆ ಮುಖ್ಯ ಚುನಾವಣಾಧಿಕಾರಿಯಾಗಿ ಭಾಗವಹಿಸಿ ಮಾತನಾಡಿದ ಅವರು ಇಂದಿನ ಮಕ್ಕಳು ಮುಂದಿನ ಪ್ರೆಜೆಗಳು ಶಾಲಾ ಸಂಸತ್ ಚುನಾವಣೆ ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಲ್ಲಿಯೇ ನಾಯಕತ್ವದ ಗುಣಗಳನ್ನು ಬೆಳೆಸುವುದು ಪ್ರಜಾ ಪ್ರಭುತ್ವದ ಮೌಲ್ಯಗಳನ್ನು ತಿಳಿಸುವಂತಾಗಿದೆ ಎಂದರು.

ಈ ಸಂಸತ್ ಚುನಾವಣೆಯಲ್ಲಿ 8ರಿಂದ 10 ನೇ ತರಗತಿ ಯಿಂದ 70 ವಿದ್ಯಾರ್ಥಿ ಗಳು ಸ್ಪರ್ಧಿಸಿದ್ದು ಇವರಲ್ಲಿ 30 ವಿದ್ಯಾರ್ಥಿಗಳು ಆಯ್ಕೆಯಾದರು .
ಮೊಬೈಲ್ ಆಪ್ ನಲ್ಲಿ ವಿದ್ಯಾರ್ಥಿಗಳು ಮತದಾನ ಮಾಡಿದರು..

ವಿದ್ಯಾರ್ಥಿಗಳು ಪೊಲೀಸ್ ಹಾಗೂ ಸೇವಾದಳ ವೇಷ ಧರಿಸಿ ಮತದಾನಕ್ಕೆ ಭದ್ರತೆ ಒದಗಿಸಿದರು.
ವಿದ್ಯಾರ್ಥಿಗಳೇ ಮತದಾರರಾಗಿದ್ದ ಈ ಚುನಾವಣೆಯಲ್ಲಿ ಶೇ.95 % ರಷ್ಟು ದಾಖಲೆಯ ಮತದಾನವಾಯಿತು.
ಈ ವೇಳೆ ಶಾಲೆಯ ಹಿರಿಯಾ ಶಿಕ್ಷಕಿ ಉಮಾ ಮಾತನಾಡಿ. ಶಾಲಾ ಸಂಸತ್ ಚುನಾವಣೆಯು ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮಹತ್ವ ಮತದಾನದ ಪ್ರಾಮುಖ್ಯತೆ ಚುನಾವಣಾ ಪ್ರಕ್ರಿಯೆ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ
ಚುನಾವಣಾ ಪ್ರಕ್ರಿಯೆಗಳ ಬಗ್ಗೆ ತಿಳಿಸಿಕೊಂಡುವಂತಹ ಕಾರ್ಯಕ್ರಮ ಇದಾಗಿದೆ ಎಂದರು.
ಚುನಾವಣೆಯಲ್ಲಿ ಮುಖ್ಯ ಚುನಾವಣೆ ಅಧಿಕಾರಿಯಾಗಿ ನಿವೃತ್ತ ಮುಖ್ಯ ಶಿಕ್ಷಕರಾದ ಎ .ವೀರಣ್ಣ ವಹಿಸಿದ್ದರು

ವಿದ್ಯಾರ್ಥಿಗಳು ಮತಗಟ್ಟೆಗೆ ಸಾಲಾಗಿ ಬಂದ ಮತ ಹಾಕುವುದರಮೂಲಕ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಸಂತಸ ವ್ಯಕ್ತಪಡಿಸಿದರು..
ಮತದಾನ ಎಣಿಕೆ ಕಾರ್ಯವು ನಡೆದಿದ್ದು ಪ್ರಧಾನಮಂತ್ರಿ, ರಕ್ಷಣಾ ಸಚಿವೆ. ಆರೋಗ್ಯ ಸಚಿವೆ, ವಾರ್ತಾ ಸಚಿವೆ, ಸೇರಿದಂತೆ ವಿವಿಧ ಸಚಿವರನ್ನು ಆಯ್ಕೆ ಮಾಡಲಾಯಿತು. ಆಯ್ಕೆಯಾದ ಎಲ್ಲಾ ಮಂತ್ರಿಗಳು ಪ್ರಮಾಣವಚನ ಸ್ವೀಕಾರ ಮಾಡಿದರು..
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ಪ್ರದೀಪ್ ,ಪ್ರಾಣೇಶ್, ಎಸ್.ಸುಜಾತ, ಗಂಗೂಬಾಯಿ, ರಾಜಮ್ಮ, ವೇಣಿ, ಶಿವಣ್ಣ ,ಶಂಕರ್, ಗೀತಾ, ಸೇರಿದಂತೆ ಶಿಕ್ಷಕರು ಹಾಗೂ ಶಿಕ್ಷಕರು ಸಿಬ್ಬಂದಿಗಳು ಇದ್ದರು….

About The Author

Namma Challakere Local News
error: Content is protected !!