ಚಳ್ಳಕೆರೆ :
ಶ್ರಾವಣ ಮಾಸದ ಮೊದಲನೆಯ ವಾರದ ಪ್ರಯುಕ್ತ ಚಳ್ಳಕೆರೆಯ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಹಮ್ಮಿ ಕೊಂಡಿದ್ದ 12 ಸಾರಿ ಹನುಮಾನ್ ಚಾಲಿಸ್ ಪಠಣ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಈ ಸಂದರ್ಭದಲ್ಲಿ ಪಠಣ ಮಾಡಿದ ಶ್ರೀ ಬ್ರಹ್ಮ ಚೈತನ್ಯ ಭಜನಾ ಮಂಡಳಿ, ಅಕ್ಕಮಹಾದೇವಿ ಭಜನಾ ಮಂಡಳಿ ಹಾಗೂ ಬನಶಂಕರಿ ಭಜನಾ ಮಂಡಳಿ# ಯ ಸರ್ವ ಸದಸ್ಯರಿಗೆ ದತ್ತ ಮಂಡಳಿ ಸೇವಾ ಟ್ರಸ್ಟ್ ನ ಸದಸ್ಯರಾದ ಶ್ರೀಯುತ. ವೆ. ಬ್ರ. ಶ್ರೀ. ಶ್ರೀನಾಥ್ ರವರು ಧನ್ಯವಾದಗಳನ್ನು ಹೇಳಿದರು. ಈ ಕಾರ್ಯಕ್ರಮದ ಪ್ರಾರ್ಥನೆ ಶ್ರೀಮತಿ ಸುಮ ಪ್ರಕಾಶ್ ನೆರವೇರಿಸಿದರು ಮುಖ್ಯ ಅತಿಥಿ. ಭಾಷಣ ವನ್ನು ಶ್ರೀಯುತ. ರವೀಂದ್ರ ನಾಥ್ ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಯು ಅಧ್ಯಕ್ಷರಾದ ಶ್ರೀ ಮಹೇಶ್ ಹನುಮಾನ್ ಚಾಲಿಸ್ ವಿಚಾರದ ಬಗ್ಗೆ ಮಾತನಾಡಿದರು.ಈ ಕಾರ್ಯಕ್ರಮವನ್ನು ಶ್ರೀ ಪ್ರಕಾಶ್ ಆಯೋಜಿಸಿದ್ದರು.ಸಾಕಷ್ಟು ರೀತಿಯಲ್ಲಿ ಭಕ್ತಾದಿಗಳು ಆಗಮಿಸಿ ಕಾರ್ಯಕ್ರಮ ಯಶಸ್ಸು ಗೊಳಿಸಿದರು.

About The Author

Namma Challakere Local News
error: Content is protected !!