ಚಳ್ಳಕೆರೆ :
ನಗರದಲ್ಲಿ ಸ್ವತಃ ಸೂರು ಇಲ್ಲದವರು ಸ್ವಂತ ಸ್ವತಃ ಸೂರು ಪಡಿಯಲು ನಗರಸಭೆಗೆ ನಗರ ವ್ಯಾಪ್ತಿ ಒಳಗೆ ಇರುವಂತಹ ಸಾರ್ವಜನಿಕರು ಅರ್ಜಿ ಸಲ್ಲಿಸಿ ಸ್ವಂತ ಸೂರು ನಿಮ್ಮದಾಗಿಸಿಕೊಳ್ಳಿ, ಎಂದು ನಗರಸಭೆ ಅಧ್ಯಕ್ಷೆ ಶಿಲ್ಪ ಮುರಳಿಧರ್ ಹೇಳಿದರು.
ಅವರು ನಗರದ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು, ನಗರದ ಪಾವಗಡ ರಸ್ತೆಯಲ್ಲಿ ಸರ್ಕಾರದ ವತಿಯಿಂದ ಮನೆಗಳನ್ನು ಕಟ್ಟಿಸಿ ಬಡಜನರಿಗೆ ನೀಡಲಾಗುವುದು ಆದ್ದರಿಂದ ಸೂಕ್ತ ದಾಖಲೆಗಳೊಂದಿಗೆ ನಗರಸಭೆಗೆ ಅರ್ಜಿ ಸಲ್ಲಿಸಿ ಸ್ವತಃ ಮನೆಯನ್ನು ನಿಮ್ಮದಾಗಿಸಿಕೊಳ್ಳಬಹುದು ಎಂದು ಹೇಳಿದರು.
ಜಿ+ ಟು ಮನೆಗೆ ಆಡಳಿತ ಪಕ್ಷದ ವಿರೋಧ ಪಕ್ಷದ ಸದಸ್ಯರ ಮಧ್ಯೆ ಜಟಾಪಟಿ :
ಜಿ ಪ್ಲಸ್ ಟು ಮಾದರಿಯ ಮನೆಗಳಿಗೆ ಸಾರ್ವಜನಿಕರಿಂದ ಅರ್ಜಿ ಪಡೆದು ಮನೆಗಳನ್ನು ಹಸ್ತಾಂತರ ಮಾಡಲಾಗುವುದು ಎಂದು ಸಭೆಯ ಗಮನಕ್ಕೆ ತಂದಾಗ ಸದಸ್ಯರಾದ ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ಮಲ್ಲಿಕಾರ್ಜುನ್, ಕೆ.ವೀರಭದ್ರಪ್ಪ ಶಾಸಕ ಟಿ.ರಘುಮೂರ್ತಿಯ ಕನಸಿನ ಯೋಜನೆ ಇದಾಗಿದ್ದು ಬಡವರ ಬಾಳಿಗೆ ನಂದ ದೀಪವಾಗಿದೆ, ಆದ್ದರಿಂದ ಎಲ್ಲಾ ವಾರ್ಡಗಳಲ್ಲಿ ಜಾಗೃತಿ ಮೂಡಿಸಲಾಗಿದೆ , ಎಂದಾಗ ವಿರೋಧ ಪಕ್ಷದ ಸದಸ್ಯರಾದ ಶ್ರೀನಿವಾಸ್, ಜಯಣ್ಣ, ಪ್ರಮೋದ್ ಆಕ್ರೋಶ ವ್ಯಕ್ತಪಡಿಸಿ, ಜಿ ಪ್ಲಸ್ ಟು ಮಾದರಿ ಮನೆ ಗಳನ್ನು ಸಾರ್ವಜನಿಕರಿಗೆ ಹಸ್ತಾಂತರಿಸುವುದು ನಮ್ಮ ವಿರೋಧವಿಲ್ಲ ಆದರೆ ಅದೇ ಸ್ಥಳದಲ್ಲಿ 2013 ರ ಹಿಂದೆ ಅಧಿಕಾರದಲ್ಲಿ ಇದ್ದ ಸ್ಥಳೀಯ ಶಾಸಕ ತಿಪ್ಪೇಸ್ವಾಮಿ ರವರು, 192 ಫಲಾನುಭವಿಗಳಿಗೆ ಸ್ವಂತ ನೀವೇಷನ ನೀಡುವ ಮೂಲಕ ಹಕ್ಕು ಪತ್ರ ನೀಡಿದ್ದರು, ಆದರೆ ಈಗಿನ ಶಾಸಕ ಟಿ.ರಘುಮೂರ್ತಿ ರವರು ಅವರ ಆದೇಶವನ್ನು ದಿಕ್ಕರಿಸಿ ಹಕ್ಕು ಪತ್ರಕ್ಕೆ ಬೆಲೆಕೊಡದೆ, ಅದೇ ಸ್ಥಳದಲ್ಲಿ ಜಿ+ಟು ಮಾದರಿ ಮನೆ ಕಟ್ಟಿರುವುದು ಬಡಜನರ ಹೊಟ್ಟೆ ಮೇಲೆ ಬರೆ ಎಳೆದಂತಿದೆ, ಯಾವುದೇ ಶಾಸಕರು ಆದರೆ ಅವರ ಗೌರವಕ್ಕೆ ದಕ್ಕೆ ತರುವ ಕೆಲಸ ಮಾಡಬಾರದು,
ನೊಂದ ಫಲಾನುಭವಿಗಳಿಗೆ ನ್ಯಾಯ ದೊರಕಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ನಗರ ಸಭೆ ಸದಸ್ಯ ಕೆ ವೀರಭದ್ರಯ್ಯ ಮಾತನಾಡಿ 192 ನಿವೇಶನ ಫಲಾನುಭವಿಗಳಿಗೆ ಜಿ+ಟು ಮಾದರಿಯ ಕೆಳ ಮಹಡಿಯ ಮನೆಗಳನ್ನು ನೀಡಲು ಸಭೆಯಲ್ಲಿ ತೀರ್ಮಾನ ವಾಗಿದೆ ಆದ್ದರಿಂದ ಕೇವಲ ನಿವೇಶನ ಬದಲಿಗೆ ಮನೆಯನ್ನು ನೀಡುವುದು ಶಾಸಕರ ಒತ್ತಾಸೆಯಾಗಿದೆ, ಆದ್ದರಿಂದ ನಗರಸಭೆ ಜಾಗೃತಿ ಸಭೆಗಳಿಗೆ ಸದಸ್ಯರು ಭಾಗವಹಿಸಬೇಕು ಎಂದಾಗ ಸದಸ್ಯ ಶ್ರೀನಿವಾಸ್ ನಿಮಗಿಂತ ಮೊದಲು ನಮಗೆ ಜಿ+ಟು ಮಾದರಿ ಮನೆಯ ಬಗ್ಗೆ ಮಾಹಿತಿ ಇದೆ, ಮನೆಗಳು ಸರಿಯಿಲ್ಲ, ಗುಣ ಮಟ್ಟ ಇಲ್ಲ, ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ, ಒಂದು ವೇಳೆ ಮನೆಗಳು ಸರಿಯಿದ್ದರೆ, ಜಾಗೃತಿ ಮೂಡಿಸುವ ಅಗತ್ಯ ವಿರಲಿಲ್ಲ ಎಂದು ಪ್ರಮೋದ್ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಾಯಿ ಸಮಿತಿ ರಚನೆಗೆ ವಿರೋಧ ಪಕ್ಷದ ನಾಯಕರ ತೀವ್ರ ವಿರೋಧ :
ಸರ್ಕಾರದ ಸುತ್ತೋಲೆಯಂತೆ ಸ್ಥಳೀಯ ನಗರಸಭೆಯಲ್ಲಿ ನಾಲ್ಕು ಸ್ಥಾಯಿ ಸಮಿತಿ ರಚನೆ ಮಾಡುವ ಅವಕಾಶ ಇದೆ ಆದರಿಂದ ಸ್ಥಾಯಿ ಸಮಿತಿ ರಚಿಸುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಗಮನಕ್ಕೆ ತಂದಾಗ, ಸದಸ್ಯರ ಅವಧಿಗೆ ಕೇವಲ ಎರಡರಿಂದ ಮೂರು ತಿಂಗಳು ಬಾಕಿ ಇದೆ, ನಗರಸಭೆ ಸದಸ್ಯರು ಸ್ವಂತ ಕಟ್ಟಡವಿಲ್ಲದೆ ರಂಗಮಂದಿರದಲ್ಲಿ ಕುಳಿತುಕೊಂಡಿದ್ದೇವೆ, ಇರುವ ಸದಸ್ಯರಿಗೆ ಜಾಗವಿಲ್ಲ ಆದರೆ ಸ್ಥಾಯಿ ಸಮಿತಿ ಸದಸ್ಯರಿಗೆ ಜಾಗ ಎಲ್ಲಿದೆ, ಮೊದಲು ಸ್ವಂತ ನಗರಸಭೆ ಕಟ್ಟಡ ಕಟ್ಟಿಸಿ ತದನಂತರ ಆಲೋಚಿಸೋಣ ಸುಮಾರು ವರ್ಷಗಳಿಂದ ನೆನಗುದಿಗೆ ಬಿದ್ದಿರುವಂತಹ ನಗರಸಭೆ ಕಟ್ಟಡಕ್ಕೆ ಮರುಜೀವ ತನ್ನಿ ಎಂದು ನಗರಸಭೆ ಸದಸ್ಯ ಜಯಣ್ಣ ಆಕ್ರೋಶ ವ್ಯಕ್ತಪಡಿಸಿದ್ದರು
ಖಾಸಗಿ ಜಾಹಿರಾತು ಫಲಕ ತೆರವಿಗೆ ಸದಸ್ಯರ ಆಕ್ರೋಶ :
ನಗರದ ನೆಹರು ವೃತ್ತದಲ್ಲಿ ಅಳವಡಿಸಿರುವ ಖಾಸಗಿ ಜಾಹಿರಾತು ಫಲಕ ಬೆಂಗಳೂರು ರಸ್ತೆ ಹಾಗೂ ಚಿತ್ರದುರ್ಗ ರಸ್ತೆಯ ಮಧ್ಯಭಾಗದಲ್ಲಿ ಅಳವಡಿಸಿರುವಂತಹ ಜಾಹೀರಾತು ಸೂಚನಾ ಫಲಕ ಈ ಕೂಡಲೇ ತೆರವುಗೊಳಿಸಬೇಕು ನಗರಸಭೆಯಿಂದ ಅನುಮೋದಿತ ಜಾಹೀರಾತು ಫಲಕವನ್ನು ಅಳವಡಿಸಬೇಕು ಎಂದು ಸದಸ್ಯ ವಿ ವೈ ಪ್ರಮೋದ್, ಶ್ರೀನಿವಾಸ್ ಆರೋಪಿಸಿದರು
ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣದ ಮುಂಬಾಗದಲ್ಲಿ ನಗರಸಭೆ ವತಿಯಿಂದ ಸಾರ್ವಜನಿಕ ಜಾಹೀರಾತು ಫಲಕ ಹಾಕುವುದಕ್ಕೆ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಂಡು ಸೂಚಿಸಲಾಗಿತ್ತು ಆದರೆ ಖಾಸಗಿಯವರಿಗೆ ನೆಹರು ವೃತ್ತದ ಎರಡು ರಸ್ತೆ ಮಧ್ಯದಲ್ಲಿ ಅನುಮತಿ ನೀಡಿರುವುದು ಆಕ್ಷ್ಯಮ್ಯ ಅಪರಾಧ ಈ ಕೂಡಲೇ ಖಾಸಗಿಯವರು ರಸ್ತೆ ರಸ್ತೆ ಮಧ್ಯಭಾಗದಲ್ಲಿ ಅಳವಡಿಸಿ ದಂತಹ ಜಾಹಿರಾತು ಫಲಕಗಳನ್ನು ಈ ಕೂಡಲೇ ತೆರವುಗೊಳಿಸಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು ಇದಕ್ಕೆ ಸಂಬಂಧಿಸಿದಂತೆ ಪೌರಾಯುಕ್ತ ಜಗರೆಡ್ಡಿ ಯವರು ಕೂಡ ಜುಲೈ 29ರಂದು ಅಳವಡಿಸಿರುವ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಸೂಚಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶಿಲ್ಪ ಮುರುಳಿಧರ್, ಉಪಾಧ್ಯಕ್ಷೆ ಕವಿತಾ ಬೋರಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ ಮಲ್ಲಿಕಾರ್ಜುನ , ಸದಸ್ಯ ವೀರಭದ್ರಪ್ಪ, ಶ್ರೀನಿವಾಸ್ , ಪ್ರಮೋದ್, ಜಯಣ್ಣ, ಹೊಯ್ಸಳ ಗೋವಿಂದ್, ಜಯಲಕ್ಷ್ಮಿ, ಸುಮಾ ಸುಜಾತ, ನಾಗಮಣಿ, ನಾಮನಿರ್ದೇಶನ ಸದಸ್ಯ ಹಳೆನಗರದ ವೀರಭದ್ರಪ್ಪ, ಹಾಗೂ ಇತರ ಸದಸ್ಯರು, ಪೌರಾಯುಕ್ತ ಜಗರೆಡ್ಡಿ, ಇಂಜಿನಿಯರ್ ವಿನಯ್, ತಿಪ್ಪೇಸ್ವಾಮಿ , ಭೂತಯ್ಯ, ಇತರ ಸಿಬ್ಬಂದಿ ಹಾಜರಿದ್ದರು

