ಚಳ್ಳಕೆರೆ : ವರವು ಗ್ರಾಮದ ಸರ್ವೇ ನಂಬರ್ 16ರಲ್ಲಿ ನಾಲ್ಕು ಎಕರೆ ಪ್ರದೇಶವನ್ನು ಪ್ರಭಾವಿ ಅಧಿಕಾರಿ ಒಬ್ಬರು ಅಂದಾಜು ನಾಲ್ಕು ಎಕರೆ ಪ್ರದೇಶವನ್ನು ಅತಿಕ್ರಮ ಮಾಡಿ ತಂತಿ ಕಂಬಗಳನ್ನು ಹಾಕಿ ಸಾರ್ವಜನಿಕ ಆಸ್ತಿಯನ್ನು ಕಬಳಿಸಿದ್ದು ತಕ್ಷಣ ಈ ಬಗ್ಗೆ ಕ್ರಮವಹಿಸುವಂತೆ ವರವು ಗ್ರಾಮಸ್ಥರು ತಹಶೀಲ್ದಾರ್ ಅವರನ್ನು ಆಗ್ರಹಿಸಿದ್ದರು.
ಎಚ್ಚೆತ್ತು ಕೊಂಡ ತಹಶೀಲ್ದಾರ್ ಎನ್.ರಘುಮೂರ್ತಿ ಅಧಿಕಾರಿಗಳ ತಂಡದ ಮೂಲಕ ರಾಜಸ್ವ ನಿರೀಕ್ಷಕ ಚೇತನ್ ಕುಮಾರ್ ಮತ್ತು ಗ್ರಾಮ ಲೆಕ್ಕಾಧಿಕಾರಿಗಳೊಂದಿಗೆ ಇಂದು ವರವು ಗ್ರಾಮದ ಸದರಿ ವಿವಾದಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿನೆ ನಡೆಸಿ ಒತ್ತುವರಿ ತೆರುವ ಕಾರ್ಯ ಮಾಡಿದ್ದಾರೆ.
ತದನಂತರ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ಎನ್.ರಘುಮೂರ್ತಿ, ಈ ದಿನ ಈ ವಿಚಾರ ನನ್ನ ಗಮನಕ್ಕೆ ಬಂದಿದ್ದು ತಕ್ಷಣ ಬಂದು ಪರಿಶೀಲಿಸಿದ್ದೇನೆ ವರುವು ಗ್ರಾಮದ ಸರ್ವೆ ನಂಬರ 16 ರಲ್ಲಿ 67 ಎಕರೆ ಸರ್ಕಾರಿ ಜಮೀನಿದೆ ಈ ಜಮೀನನ್ನು ಪರಿಪೂರ್ಣವಾಗಿ ಅಳತೆ ಮಾಡಿಸಲಾಗುವುದು ಒಂದು ಗುಂಟೆ ಕೂಡ ಜಮೀನು ಯಾರು ಅತಿಕ್ರಮಿಸಿಕೊಂಡಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ಇವರುಗಳ ಮೇಲೆ ಕ್ರಮ ವಹಿಸಲಾಗುವುದು.
ಗ್ರಾಮದ ಜನತೆಗೂ ಕೂಡ ನಿಮಗೆ ಜವಾಬ್ದಾರಿ ಇರಬೇಕು ಯಾವುದೇ ಕಾರಣಕ್ಕೂ ಗ್ರಾಮಸ್ಥರು ಕೂಡ ಸರ್ಕಾರಿ ಜಮೀನನ್ನು ಅತಿಕ್ರಮಿಸಲು ಮುಂದಾಗಬಾರದು ಸರ್ಕಾರದ ನಿಯಮಾವಳಿಗಳಲ್ಲಿ ಕಟ್ಟುನಿಟ್ಟಿನ ನಿಬಂಧನೆ ಇದೆ ಮುಂದಿನ ಪೀಳಿಗೆಗೆ ಮತ್ತು ಜನಜಾನುವಾರುಗಳಿಗೆ ಸರ್ಕಾರಿ ಜಮೀನು ಅಗತ್ಯವಿದೆ ಸರ್ಕಾರಿ ಜಮೀನನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಕಟ್ಟುನಿಟ್ಟಿನ ನಿಗಾ ವಹಿಸಿದ್ದು ಇಲಾಖೆಯ ಒಂದಿAಚು ಜಮೀನು ಭೂಗಳ್ಳರ ಪಾಲಾಗದಂತೆ ಎಚ್ಚರವಹಿಸಿದ್ದೇವೆ ಗ್ರಾಮಸ್ಥರುಗಳು ಅಷ್ಟೇ ಸರ್ಕಾರಿ ಜಮೀನು ಗ್ರಾಮದ ಜಮೀನು ಎಂದು ಭಾವಿಸಿ ಸಂರಕ್ಷಣೆ ಮಾಡುವ ಹೊಣೆಗಾರಿಕೆ ಗ್ರಾಮಸ್ಥರ ಮೇಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎನ್.ದೇವರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಾ.ಕಾಟಮ್ ಲಿಂಗಯ್ಯ, ರಾಜಸ್ವ ನಿರೀಕ್ಷಕ ಚೇತನ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿ ಚನ್ನಬಸವ ಉಪಸ್ಥಿತರಿದ್ದರು