ಚಳ್ಳಕೆರೆ : ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು, ಮುಂಬರುವ ಬಕ್ರಿದ್ ಹಬ್ಬಕ್ಕೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾರ್ವಜನಿಕರು ಸೌಜನ್ಯದಿಂದ ವರ್ತಿಸಬೇಕು ಎಂದು ನೂತನ ಡಿವೈಎಸ್ಪಿ ರಮೇಶ್‌ಕುಮಾರ್ ಹೇಳಿದ್ದಾರೆ.
ಅವರು ನಗರದ ವಾಲ್ಮಿಕಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಕ್ರಿದ್ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು, ನಗರದಲ್ಲಿ ಹಿಂದೂ ಮುಸ್ಲಿಂ ಸಂಬAಧ ತುಂಬಾ ಭಾಂದ್ಯವ್ಯದ ಮೂಲಕ ಹಾಸು ಹೊಕ್ಕಾಗಿದೆ ಆದರೆ ಹಬ್ಬಗಳ ಸಂಧರ್ಭದಲ್ಲಿ ಕೊಮುಗಲಭೆಗಳಿಗೆ ಆಸ್ಪಾಧ ನೀಡದೆ ಸ್ನೇಹದಿಂದ ವರ್ತಿಸಬೇಕು ಎಂದರು.
ಇನ್ನೂ ಮುಖಂಡ ಸೈಯದ್ ಮಾತನಾಡಿ, ಸುಮಾರು 70 ವರ್ಷಗಳಿಂದ ನಗರದಲ್ಲಿ ಹಿಂದೂ ಹಾಗೂ ಮುಸ್ಲಿಂ ಎಂಬ ಭೇದ ಭಾವ ಇಲ್ಲ, ಅಣ್ಣ ತಮ್ಮಂದಿರು ಎಂಬ ಭಾವನೆಗಳಿಂದ ಇಂದಿಗೂ ಹಬ್ಬಗಳ ಸಂಧರ್ಭದಲ್ಲಿ ಮುಸ್ಲಿಂರ ಮನೆಯಿಂದ ಹಿಂದೂಗಳು ಆಹ್ವಾನ ಮಾಡುವ ಸಂಪ್ರಾದಾಯ ರೂಡಿಯಾಗಿದೆ ಆದ್ದರಿಂದ ಪೊಲೀಸ್ ಇಲಾಖೆ ಆತಂಕ ಪಡುವ ಅಗತ್ಯವಿಲ್ಲ ಎಂದರು.
ಇನ್ನೂ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಟಿ.ವಿಜಯ್ ಕುಮಾರ್ ಮಾತನಾಡಿ, ಈಡೀ ರಾಜ್ಯದ ಯಾವ ಜಿಲ್ಲೆಯಲ್ಲಿ ಇರದ ಮುಸ್ಲಿಂ ಹಾಗೂ ಹಿಂದೂಗಳ ಸ್ನೇಹವನ್ನು ಇಲ್ಲಿ ಕಾಣಬಹುದು, ಚಳ್ಳಕೆರೆ ಎಂದರೆ ವಿಶೇಷ, ಇಲ್ಲಿ ಪ್ರತಿಯೊಂದು ಹಿಂದೂಗಳ ಹಬ್ಬಕ್ಕೆ ಮುಸ್ಲಿಂರ ಆಹ್ವಾನ, ಹಾಗೆಯೇ ಯಾವುದೇ ಕೊಮು ಗಲಭೆಗಳು ಇಲ್ಲಯವರೆಗೆ ನಡೆದಿಲ್ಲ, ಇನ್ನೂ ಮುಂದಿನ ದಿನಗಳಲ್ಲಿ ಕೂಡ ಪ್ರೀತಿ ವಿಶ್ವಾಸ ಈಗೇ ಮುಂದುವರೆಯುತ್ತದೆ ಎಂದರು.
ಈದೇ ಸಂಧರ್ಭದಲ್ಲಿ ಇನ್ಸ್ಪೆಕ್ಟೆರ್ ಜೆ.ಎಸ್.ತಿಪ್ಪೆಸ್ವಾಮಿ, ವೃತ್ತ ನೀರಿಕ್ಷ ಕೆ.ಸಮ್ಮಿವುಲ್ಲಾ, ಪಿಎಸ್‌ಐ ಕೆ.ಸತೀಶ್‌ನಾಯ್ಕ್, ತಳಕು ಪಿಎಸ್‌ಐ ಮಾರುತಿ, ನಾಯಕನಹಟ್ಟಿ ಪಿಎಸ್‌ಐ ಶಿವರಾಜ್, ಪರುಶುರಾಂಪುರ ಪಿಎಸ್‌ಐ ಸ್ವಾತಿ ಹಾಗೂ ರಾಜ್ಯ ರೈತ ಸಂಘದ ಹಸಿರು ಸೇನೆಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ನನ್ನಿವಾಳ ನಾಗರಾಜ್, ಪರೀದ್ ಖಾನ್, , ನಯಾಜ್, ಸೈಯದ್ ಸಾಬ್, ಕಾಂಗ್ರೆಸ್ ಮುಖಂಡ ಶಿವಕುಮಾರ್, ಹಳೆನಗರದ ವೀರಭದ್ರ, ವಿನೋದ್ ಕುಮಾರ್, ಅನ್ವಾರ್ ಸಾಬ್, ಬಷೀರ್ ಆಯಾತ್ ಬಷೀರ್, ಇತರರು ಪಾಲ್ಗೋಂಡಿದ್ದರು.