ಡಾ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಹಾಕಿದ ಒಂದು ಸಸಿ ಇಂದು ಬಿಜೆಪಿ ಪಕ್ಷ ಎಮ್ಮರವಾಗಿ ಬೆಳೆದಿದೆ ಎಸ್ ಟಿ ಮೊರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಪಾಪೇಶ್ ನಾಯಕ ಅಭಿಪ್ರಾಯ

ನಾಯಕನಹಟ್ಟಿ :: ಡಾ ಶಾಮ್ ಪ್ರಸಾದ್ ಮುಖರ್ಜಿ ರವರು 1901ರಲ್ಲಿ ಪಶ್ಚಿಮ ಬಂಗಾಳದ ಕಲ್ಕತ್ತಾದಲ್ಲಿ ಜನಿಸಿದ್ದಾರೆ ಎಂದು ಎಸ್ ಟಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಪಾಪೇಶ್ ನಾಯಕ ಹೇಳಿದ್ದಾರೆ.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಡಾ ಶ್ಯಾಮ್ ಪ್ರಸಾದ್ ಮುಖರ್ಜಿ ರವರ ಜನ್ಮ ದಿನದ ಡಾ ಶ್ಯಾಮ್ ಪ್ರಸಾದ್ ಮುಖರ್ಜಿ ರವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಗೌರವಿಸಿ ಮಾತನಾಡಿ ಅವರು
ರಾಜಕೀಯ ಧೀಮಂತ ನಾಯಕರಾಗಿ ಬೆಳೆದು 1951 ರಲ್ಲಿ ಜನಸಂಘ ಎಂಬ ಪಕ್ಷವನ್ನು ಕಟ್ಟಿದರು ಅವರು ಹಾಕಿದ ಒಂದು ಸತಿ ಇಂದು ಎಮ್ಮರವಾಗಿ ಬೆಳೆದು ಸುಮಾರು 20 ಕೋಟಿ ಸದಸ್ಯತ್ವವನ್ನು ಹೊಂದಿದ ಏಕೈಕ ಪಕ್ಷ ಏನಾದರೂ ಈ ದೇಶದಲ್ಲಿ ಇದ್ದರೆ ಅದು ಬಿಜೆಪಿ ಪಕ್ಷ ಈ ನಿಟ್ಟಿನಲ್ಲಿ ಅವರ ಮಾಡಿದಂತ ಕಾರ್ಯ ಶ್ಲಾಘನೀಯ ಅವರು ಹಾಕಿಕೊಟ್ಟಂತ ದಾರಿ ಮಾರ್ಗದರ್ಶನದಲ್ಲಿ ನಮ್ಮ ಬಿಜೆಪಿ ಪಕ್ಷ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ ಈ ನಿಟ್ಟಿನಲ್ಲಿ ನಮ್ಮ ನಾಯಕನಹಟ್ಟಿ ಮಂಡಲ ವತಿಯಿಂದ ಇಂದು ಒಟ್ಟಾರೆ 151 ಬೂತ್ ಮಟ್ಟದಲ್ಲಿ ನಮ್ಮ ಬಿಜೆಪಿ ಪಕ್ಷದ ಧ್ವಜವನ್ನು ಹಾರಿಸಿ ಡಾ ಶಾಮ್ ಪ್ರಸಾದ್ ಮುಖರ್ಜಿ ರವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುವುದು ಎಂದು ಎಸ್ ಟಿ ಮೋರ್ಚ ರಾಜ್ಯ ಕಾರ್ಯಕಾರಣಿ ಸದಸ್ಯ ಪಾಪೇಶ್ ನಾಯಕ ತಿಳಿಸಿದ್ದಾರೆ.

ಇ ವೇಳೆ ಮಂಡಲ ಅಧ್ಯಕ್ಷ ಈ ರಾಮರೆಡ್ಡಿ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಜಿ ಅವರು ಉಚಿತವಾಗಿ ವ್ಯಾಕ್ಸಿನ್ ಲಸಿಕೆ ನೀಡಿ ಇಡೀ ನಮ್ಮ ದೇಶಕ್ಕೆ ಮರುಜನ್ಮ ಕೊಟ್ಟಿದ್ದಾರೆ ಆದ್ದರಿಂದ ನಮ್ಮ ಬಿಜೆಪಿ ಪಕ್ಷ ಹರಿಯುವ ನದಿಯಂತೆ ವೇಗವಾಗಿ ದೇಶದ ಎಲ್ಲಾ ಮನಸ್ಸುಗಳನ್ನು ಬಿಜೆಪಿ ಪಕ್ಷ ಮುಟ್ಟುತ್ತದೆ ಹರಿವ ನದಿ ಸಣ್ಣ ಹಳ್ಳಗಳನ್ನ ತನ್ನಡಿಗೆ ಸೆಳೆದು ಸುಂದರ ನದಿಯಾಗಿ ರೂಪಗೊಳ್ಳುವ ಹಾಗೆ ಇಂದು ಬಿಜೆಪಿ ಪಕ್ಷ ಸಾಕಷ್ಟು ಬೆಳೆಯುತ್ತದೆ ಅದರಂತೆ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ ರವರ ಆಡಳಿತವನ್ನು ಇಡಿ ಪ್ರಪಂಚವೇ ಒಪ್ಪಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಬೆಂಕಿ ಗೋವಿಂದಪ್ಪ, ಚನ್ನಗಾನಹಳ್ಳಿ ಮಲ್ಲೇಶ್, ರೈತ ಮೋರ್ಚಾ ಅಧ್ಯಕ್ಷರಾದ ಬಾಲರಾಜ್ ಯಾದವ್, ಬಿಜೆಪಿ ಮುಖಂಡ ಸೋಮು ಚಿತ್ರದುರ್ಗ, ಎಸ್ಸಿ ಮೋರ್ಚಾ ಅಧ್ಯಕ್ಷರಾದ ಟಿ ಶಿವದತ್ತ, ಮಂಡಲ ಉಪಾಧ್ಯಕ್ಷರಾದ ಮಮತಾ ಟಿ,
ರೈತ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಬೋರೇಶ ಗಿಡ್ಡಾಪುರ, ನಗರ ಘಟಕ ಪ್ರಧಾನ ಕಾರ್ಯದರ್ಶಿ ತ್ರಿಶೂಲ್, ರಾಜು, ಓಬಣ್ಣ, ಮನಮೈನಹಟ್ಟಿ ನಿರಂಜನ್, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೆ ಟಿ ಜಯಂತಿ ಮನಮೈನಹಟ್ಟಿ, ಶಾಂತಕುಮಾರ್ ಗ್ರಾಮ ಪಂಚಾಯತಿ ಸದಸ್ಯರು ತಳಕು, ಅಬ್ಬೇನಹಳ್ಳಿ ಎಸ್ ಮಲ್ಲಿಕಾರ್ಜುನ್, ಟಿ ರುದ್ರೇಶ್, ಕಚೇರಿಯ ಗಣಕಯಂತ್ರ ತಿಪ್ಪೇಸ್ವಾಮಿ ಸೇರಿದಂತೆ ಮುಂತಾದವ್ರು ಉಪಸ್ಥಿತರಿದ್ದರು

Namma Challakere Local News
error: Content is protected !!