ಚಳ್ಳಕೆರೆ :
ಚಿತ್ರದುರ್ಗ: ಯಮ ಸ್ವರೂಪಿಗಳಾದ CNG ಗುಂಡಿಗಳು
ಬೈಕ್ ಸವಾರ ಪಾರು
ಕೋಟೆನಾಡು ಚಿತ್ರದುರ್ಗದಲ್ಲಿ CNG ಗುಂಡಿಗಳು ತೆರೆದುಕೊಂಡು
ರಸ್ತೆಗಳು ಯಮ ಸ್ವರೂಪಿ ರಸ್ತೆಗಳಾಗಿ ಮಾರ್ಪಟ್ಟಿವೆ. ನಗರದ
ಹಲವು ಕಡೆ ಮನೆಗಳಿಗೆ CNG ಗ್ಯಾಸ್ ಒದಗಿಸುವ ಕಾಮಗಾರಿ
ಮಂದ ಗತಿಯಲ್ಲಿ ಸಾಗಿದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.
ಶುಕ್ರವಾರ ಸ್ಟೇಡಿಯಂ ರಸ್ತೆಯಲ್ಲಿ CNG ಪೈಪ್ ಲೈನ್ ಕಾಮಗಾರಿ
ಹಂತದ ಗುಂಡಿಯಲ್ಲಿ, ಬಿದ್ದ ಬೈಕ್ ಸವಾರರು ಪ್ರಾಣಾಪಾಯದಿಂದ
ಪಾರಾಗಿದ್ದಾರೆ. ಸಾರ್ವಜನಿಕರು ಶಾಲಾ ಮಕ್ಕಳಿಗೆ ವೃದ್ಧರಿಗೆ
ಸಂಚಕಾರ ತಂದಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರ
ಹಾಕಿದ್ದಾರೆ.

