ಸಾರ್ವಜನಿಕರು ಗ್ರಾಮ ಪಂಚಾಯತಿ ಸರ್ವ ಸದಸ್ಯರು ಬೆಂಬಲ ನೀಡಿದಲ್ಲಿ ಮಾದರಿಯ ಗ್ರಾಮ ಪಂಚಾಯತಿಯನ್ನಾಗಿ ಮಾಡಲಾಗುವುದು ಎಂದು ನೂತನ ಗ್ರಾಮ ಪಂಚಾಯತಿ ಅಧ್ಯಕ್ಷರು ಕೆ ಎಸ್ ಮಂಜಣ್ಣ ಹೇಳಿದ್ದಾರೆ
ನಾಯಕನಹಟ್ಟಿ:: ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ನೂತನವಾಗಿ ಕೆ ಎಸ್ ಮಂಜಣ್ಣ ಪದ ಗ್ರಹಣ ಮಾಡಿ ಅಧಿಕಾರ ವಹಿಸಿಕೊಂಡು ನಂತರ ಮಾಧ್ಯಮದೊಂದಿಗೆ ಮಾತನಾಡಿ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳನ್ನ ಮಾದರಿ ಗ್ರಾಮಗಳನ್ನಾಗಿ ಮಾಡಲಾಗುವುದು ಎಂದು ನೂತನ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೆ ಎಸ್ ಮಂಜಣ್ಣ ಹೇಳಿದ್ದಾರೆ.
ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿಯ ಕಾರ್ಯಾಲಯದಲ್ಲಿ ಅಧ್ಯಕ್ಷರ ಸ್ಥಾನ ಅಲಂಕರಿಸಿ ಮಾತನಾಡಿದವರು ಅತಿ ಶೀಘ್ರದಲ್ಲಿ ಗೂಳಿ ಹೋಗುವ ಜನರಿಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ನೀಡಲಾಗುವುದು ಶಾಲೆಗಳ ಅಭಿವೃದ್ಧಿ ಅಂಗನವಾಡಿ ಗ್ರಾಮದಲ್ಲಿ ಸ್ವಚ್ಛತೆ ಕುಡಿಯುವ ನೀರಿನ ವ್ಯವಸ್ಥೆ ಚರಂಡಿ ವ್ಯವಸ್ಥೆನ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ ಉಪಾಧ್ಯಕ್ಷರಾದ ಪಾಲಮ್ಮ ಜಿ ಬೋರಯ್ಯ, ಮಾಜಿ ಅಧ್ಯಕ್ಷರಾದ ಓ. ಒಬಣ್ಣ ಸದಸ್ಯರಾದ ಟಿ ಅಶೋಕ್, ಡಿ ರೇವಣ್ಣ, ಟಿ ಎಸ್ ಶೈಲಾಮ್ಮ, ಬಿ ಎಸ್ ವಿಜಯ್ ಕುಮಾರ್, ಅನಿತಾ, ಎಂ ತಿಪ್ಪೇಸ್ವಾಮಿ, ರಾಧಮ್ಮ, ಶಾಂತಮ್ಮ, ಪ್ರೇಮಲತಾ, ಬಸಕ್ಕ ತಿಪ್ಪೇಸ್ವಾಮಿ, ಮಲ್ಲಮ್ಮ, ಶ್ರೀಮತಿ ಲಕ್ಷ್ಮಿ, ಸೋಮಶೇಖರ್ ಗೀತಮ್ಮ, ಮಲ್ಲಮ್ಮ ಯುವ ಮುಖಂಡರಾದ ರಾಮಸಾಗರ ಪಿ ಪಿ ಮಹಾಂತೇಶ್ ನಾಯಕ, ಅನಿಲ್ ಕುಮಾರ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಜಿ ಬಿ ತಿಪ್ಪೇಸ್ವಾಮಿ, ಇನ್ನು ಮುಂತಾದವರು ಉಪಸ್ಥಿತರಿದ್ದರು