ಚಳ್ಳಕೆರೆ : ಡಾ: ಬಾಬು ಜಗಜೀವನ್ ರಾಮ್ ರವರ ಪುಣ್ಯ ದಿನದ ಪ್ರಯುಕ್ತ ಶಾಸಕ ಟಿ.ರಘುಮೂರ್ತಿ ಪ್ರತಿಮೆಗೆ ಮಾಲಾರ್ಪಣೆಯನ್ನು ಅರ್ಪಿಸಿ, ತದನಂತರ ಶಾಸಕರ ಭವನದಲ್ಲಿ ಪುಣ್ಯದಿನದ ಪ್ರಯುಕ್ತ ಆಯೋಜಿಸಿದ್ದ ಸಭೆಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು,

ಬಾಬೂಜಿ” ಎಂದು ಖ್ಯಾತರಾದ ಜಗಜೀವನ ರಾಮ್ ಸ್ವಾತಂತ್ರ ಹೋರಾಟಗಾರರಷ್ಟೆ ಅಲ್ಲದೇ, ಸಮಾಜ ಸೇವಕರೂ ಆಗಿದ್ದರು. ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಇವರು ನೆಹರು ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು ಎಂದು ಸ್ಮರಿಸಿದರು.

ಈದೇ ಸಂಧರ್ಭದಲ್ಲಿ ನಗರಸಭೆ ಸದಸ್ಯ ಕೆ.ವೀರಭದ್ರಯ್ಯ ಮಾತನಾಡಿ, ಮೊರಾರ್ಜಿ ದೇಸಾಯಿಯವರ ಕಾಲದಲ್ಲಿ ಭಾರತದ ಉಪ ಪ್ರಧಾನಿಯೂ ಆಗಿದ್ದರು. ಜಗಜೀವನ ರಾಮ್ ರವರು ಅಸ್ಪ್ರಶ್ಯತಾ ನಿವಾರಣೆಯ ಹೋರಾಟದ ಮಹಾನ್ ದಲಿತ ನಾಯಕರಾಗಿದ್ದರು ಹಸಿರಿ ಕ್ರಾಂತಿಯ ಪಿತಾಮಹ ಹಾಗಿದ್ದಾರೆಂದು ಮೆಲುಕು ಹಾಕಿದ್ದಾರು.

ಈ ಸಂಧರ್ಭದಲ್ಲಿ ನಗರಸಭೆ ಸದಸ್ಯ ಮಲ್ಲಿಕಾರ್ಜುನಾ, ಬಿ.ಟಿ.ರಮೇಶ್, ಚಳ್ಳಕೆರೆಪ್ಪ, ಮುಖಂಡ ಕೃಷ್ಣಮೂರ್ತಿ, ಸೈಯದ್, ಗಿರಿಯಪ್ಪ, ರಾಜು, ಗ್ರಾಪಂ.ಉಪಾಧ್ಯಕ್ಷ ಆನಂದಕುಮಾರ್,
ಮತ್ತು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು

Namma Challakere Local News
error: Content is protected !!