“ಶ್ರೀಶಾರದಾಶ್ರಮದಲ್ಲಿ ಯುವ ತರಗತಿ”. ಚಳ್ಳಕೆರೆ:-ನಗರದ ವಾಸವಿ ಕಾಲನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಯುವಕ-ಯುವತಿಯರಿಗಾಗಿ “ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ” ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಆರಂಭದಲ್ಲಿ ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರೆ ಧ್ಯಾನಾಭ್ಯಾಸವನ್ನು ಆಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಮಾಡಿಸಿದರು. “ನನ್ನ ತಾಯಿ ಶಾರದೆ” ಎಂಬ ವಿಷಯವಾಗಿ ಸ್ವಯಂಸೇವಕರಾದ ಸಂತೋಷಕುಮಾರ್ ಅಗಸ್ತ್ಯ ಅವರು ಉಪನ್ಯಾಸ ನೀಡಿದರು. ತರಗತಿಯಲ್ಲಿ ಶಾರದಾ ಶ್ರೀನಿವಾಸ್, ಸುಧಾಮಣಿ,ಕವಿತಾ ಗುರುಮೂರ್ತಿ, ಡಾ‌.ಭೂಮಿಕ, ಚೇತನ್, ಋತಿಕ್, ಪುಷ್ಪಲತಾ, ಅಂಬಣ್ಣ ಸೇರಿದಂತೆ ವಿದ್ಯಾರ್ಥಿಗಳಿದ್ದರು.

About The Author

Namma Challakere Local News
error: Content is protected !!